“ಕನ್ನಡದ ಕಣ್ಗಳು ನೀವಾಗಿ ಧ್ವನಿ ಮುದ್ರಿಕೆ ಬಿಡುಗಡೆ”.
ಬೆಂಗಳೂರು ನವೆಂಬರ್.29

ಚೇತನ ಫೌಂಡೇಶನ್ ಕರ್ನಾಟಕ ಆಯೋಜಕರಾದ ಚಂದ್ರಶೇಖರ ಮಾಡಲಗೇರಿ ಅವರು ಅಖಿಲ ಕರ್ನಾಟಕ 6.ನೇ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮವನ್ನು ನಾಳೆ 30.ನೇ ತಾರೀಕು ಗುರುವಾರ ಗಾಂಧಿ ಭವನ ಬಾಪು ಸಭಾಂಗಣದಲ್ಲಿ ಆಯೋಜಿಸಲಾಗಿದೆ. ನಾಳೆ ಅಶ್ವಿನಿ ನಕ್ಷತ್ರ ಅವರ ಕವನ ಸಂಕಲನ ಮಾಯಜಿಂಕೆ ಕೃತಿಯಿಂದ ಕನ್ನಡದ ಕಣ್ಗಳು ನೀವಾಗಿ ಧ್ವನಿ ಮುದ್ರಿಕೆ ಲೋಕಾರ್ಪಣೆ ಯಾಗಲಿದೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು. ಉದ್ಘಾಟಕರು. ಮುಖ್ಯ ಅತಿಥಿಗಳು . ಹಾಗೆ ಡಾ. ಪಂ ಶ್ರೀಕಾಂತ್ ಚಿಮ್ಮಲ್ ಖ್ಯಾತ ಸಂಗೀತ ಕಲಾವಿದರು ಮಂಡ್ಯ ಇವರು ತಮ್ಮ ಅಮೃತ ಹಸ್ತದಿಂದ ಧ್ವನಿ ಮುದ್ರಿಕೆ ಅನಾವರಣ ಗೊಳಿಸಲಿದ್ದಾರೆ. ಹಿಗೀತೆಯು ಕರುನಾಡಿನ ಹೃದಯರಿಗೆ ಅರ್ಪಿಸಲಾಗಿದ್ದು ಕನ್ನಡಿಗರು ಪ್ರೋತ್ಸಾಹ ಹಾರೈಕೆಯನ್ನು ಬಯಸುತ್ತೇವೆ. ಸಾಹಿತ್ಯವನ್ನು ಕುಮಾರಿ ಅಶ್ವಿನಿ ನಕ್ಷತ್ರ ರವರು ಬರೆದಿದ್ದು. ಡಾ. ಚಿನ್ನಪ್ಪ ವೈ ಚಿಕ್ಕ ಹಾಗಡೆ ಪ್ರಕಾಶಕರು. ಪ್ರಿಯಾಂಕ ಪ್ರಿಂಟರ್ಸ್. ಭಾರತ ಸರ್ಕಾರದ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರು ಇವರು ನಿರ್ಮಾಪಕರಾಗಿದ್ದಾರೆ. ಸಂಗೀತ ಸಂಯೋಜನೆಯನ್ನು ಹರೀಶ್ ಆನೇಕಲ್ ಇವರು ಮಾಡಿದ್ದು. ಸುಂದರವಾಗಿ ಹಾಡಿ ಸಾಹಿತ್ಯಕ್ಕೆ ಧ್ವನಿಯಾಗಿದ್ದು ಗಾಯಕಿ ಅಲತಾ ಸುಬ್ರಮಣ್ಯ ಇನ್ನು ಅಶ್ವಿನಿ ನಕ್ಷತ್ರ ರವರ ಸಾಧನೆಗೆ ಬೆನ್ನೆಲುಬಾಗಿ ನಿಂತು ಆಶೀರ್ವಾದ ಮಾಡಿರುವ ಪೂಜ್ಯ ತಂದೆಯವರಾದ ಚಂದ್ರಪ್ಪ. ಸಹೃದಯಿ ತಾಯಿಯವರಾದ ಶ್ರೀಮತಿ ಕಾಂತಮ್ಮ ಮತ್ತು ಪ್ರೀತಿಯ ತಮ್ಮನಾದ ಪ್ರೇಮ್ ಕುಮಾರ್ ರ ವರು ಪಾತ್ರ ಅಪಾರವಾದದ್ದು. ಕನ್ನಡದ ಕಣ್ಗಳು ನೀವಾಗಿ ಸಂಗೀತ ಲೋಕಾರ್ಪಣೆಯಾಗಲು ಸಹಕರಿಸಿದ. ಪ್ರವೀಣ್ ಕುಮಾರ್. ವೆಂಕಟೇಶ್. ಶಶಾಂಕ್. ಚೇತನ ಫೌಂಡೇಶನ್ ಕರ್ನಾಟಕ ಸಂಚಲನ ಸುದ್ದಿ ವಾಹಿನಿ ಕಾರ್ಯಕ್ರಮಕ್ಕೆ ಎಲ್ಲರನ್ನು ಆತ್ಮೀಯವಾಗಿ ಆಹ್ವಾನಿಸಲಾಗಿದೆ.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ