ಪ್ಲೋರೈಡ್ ಮುಕ್ತ ನೀರು ನೀಡಲು ಕ್ಷೇತ್ರದಲ್ಲಿ ಗುರಿ – ಶಾಸಕ ಡಾ. ಎನ್.ಟಿ. ಶ್ರೀ ನಿವಾಸ್.
ಕಾನಾ ಹೊಸಹಳ್ಳಿ ನವೆಂಬರ್.29
ತಾಲ್ಲೂಕಿನ ಬಹುತೇಕ ಪ್ರತಿ ಗ್ರಾಮಗಳಲ್ಲಿ ಫ್ಲೋರೈಡ್ ಯುಕ್ತ ನೀರು ಇರುವುದರಿಂದ ಆದಷ್ಟು ಬೇಗ ಫ್ಲೋರೈಡ್ ಮುಕ್ತ ತಾಲ್ಲೂಕು ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಕೂಡ್ಲಿಗಿ ಶಾಸಕ ಡಾ ಎನ್.ಟಿ ಶ್ರೀನಿವಾಸ್ ಹೇಳಿದರು. ತಾಲೂಕಿನ ಕಾನಾ ಹೊಸಹಳ್ಳಿ ಹಾಗೂ ನರಸಿಂಹಗಿರಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು, ತಾಲೂಕಿನಲ್ಲಿ ಅತಿ ಹೆಚ್ಚು ಫ್ಲೋರೈಡ್, ಯುರೋನಿಯಂ, ಅರ್ಸನಿಕ್ ಅಂಶ ನೀರಿನಲ್ಲಿ ಅತಿ ಹೆಚ್ಚು ಇರುವುದರಿಂದ ಮಹಿಳೆಯರಿಗೆ ರಕ್ತ ಹೀನತೆ, ಮಂಡಿ ಸವೇತ, ಕೀಲು ನೋವು, ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ 77ನೇ ವರ್ಷದ ಸ್ವತಂತ್ರ ದಿನಗಳು ಕಳೆಯುವ ಹೊತ್ತಿಗೆ ತುಂಗಭದ್ರ ನದಿಯಿಂದ 2024ರ ವೇಳೆಗೆ ಗ್ರಾಮೀಣ ಭಾಗದ ಪ್ರತಿಯೊಬ್ಬರಿಗೂ 55 ಲೀಟರ್ ಶುದ್ಧವಾದ ಕುಡಿಯುವ ನೀರು ಪೂರೈಸುವ ಮಹತ್ವಕಾಂಕ್ಷಿ ಯೋಜನೆಯಾಗಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಪೈಪ್ ಲೈನ್ ಕೆಲಸ ಸರಿಯಾಗಿ ಆಗಬೇಕು. ಪೈಪ್ ಅಳವಡಿಸಲು ಅಗೆದ ಗುಂಡಿಗಳನ್ನು ಸರಿಯಾಗಿ ಮುಚ್ಚಬೇಕು. ಕೆಲಸ ನಿಗದಿತ ಅವಧಿಯಲ್ಲಿ ಮುಗಿಸಿ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ನೋಡಿ ಕೊಳ್ಳಬೇಕು. ಆದ್ದರಿಂದ ಕ್ಷೇತ್ರದ ಜನ ಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸರ್ವ ಸದಸ್ಯರುಗಳು ಹಾಗೂ ಗ್ರಾಮಸ್ಥರು ಕೂಡ ಅಭಿವೃದ್ಧಿ ಕೆಲಸಗಳಿಗೆ ಸಹಕರಿಸುವ ಜೊತೆಗೆ ಕೆಲಸ ಸರಿಯಾಗಿ ಆಗುವಂತೆ ನೋಡಿ ಕೊಳ್ಳಬೇಕು. ಏನಾದರೂ ಲೋಪಗಳು ಕಾಣಿಸಿದಲ್ಲಿ ತಕ್ಷಣ ಸಂಬಂಧಿಸಿದ ಅಧಿಕಾರಿ ಅಥವಾ ತಮ್ಮನ್ನು ಸಂಪರ್ಕಿಸಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎ ಚೇತನ್, ಉಪಾಧ್ಯಕ್ಷರಾದ ನೇತ್ರಾವತಿ ಮಂಜುನಾಥ್, ಅಭಿವೃದ್ಧಿ ಅಧಿಕಾರಿ ಬಿ ಬಸಮ್ಮ, ಸೇರಿದಂತೆ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು, ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ