ಅಪೌಷ್ಟಿಕ ನಿವಾರಣೆಗೆ ಘೋಷಣಾ ಅಭಿಯಾನ.
ಕೆ. ದಿಬ್ಬದಹಳ್ಳಿ ನವೆಂಬರ್.29
ತಾಲೂಕಿನ ಗುಡೆಕೋಟೆ ಹೋಬಳಿ ವ್ಯಾಪ್ತಿಯ ಕೆ ದಿಬ್ಬದಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತಾಲ್ಲೂಕು ಪಂಚಾಯತ್ ಅಕ್ಷರ ದಾಸೋಹಕಚೇರಿಗಳ ವತಿಯಿಂದ ಪೋಷಣಾ ಅಭಿಯಾನ ಕಾರ್ಯಕ್ರಮ ನಡೆಸಿ ಮಕ್ಕಳಿಗೆ ಆಹಾರದಲ್ಲಿನ ಪೋಷಕಾಂಶಗಳು ಮತ್ತು ಅವುಗಳ ಮಹತ್ವ ಪೋಷಕಾಂಶಗಳ ಕೊರತೆಯಿಂದ ಉಂಟಾಗುವಂತಹ ತೊಂದರೆಗಳ ಬಗ್ಗೆ ಶಿಕ್ಷಕರು ವಿವರಿಸಿ ಆಹಾರ ಧಾನ್ಯಗಳು ತರಕಾರಿ, ಮೊಟ್ಟೆ, ಸೊಪ್ಪುಗಳು ಇವುಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ವೇಳೆ ಸಿಆರ್ಪಿ ಅನುಪಮ ಮಾತನಾಡಿ ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಿದಾಗ ಮಾತ್ರ ರೋಗ ನಿರೋಧಕ ಶಕ್ತಿಯು ವೃದ್ಧಿಯಾಗಿ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ವೃದ್ಧಿಯಾಗಿ ಸದೃಢರನ್ನಾಗಿಸಲು ಸಾಧ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯ ಗುರುಗಳು ವಿರೂಪಾಕ್ಷಪ್ಪ ಕೆ, ಸಹ ಶಿಕ್ಷಕರು ಚೆನ್ನಾ ನಾಯ್ಕ್, ಅತಿಥಿ ಶಿಕ್ಷಕರು ಜಯಶ್ರೀ, ಬೊರಪ್ಪ ಸೇರಿದಂತೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ