ಒಬ್ಬ ವಿದ್ಯಾರ್ಥಿ ಬುದ್ಧಿವಂತನಾದರೆ ಇಡೀ ಆ ಕುಟುಂಬವೇ ಸುಜ್ಞಾನಿವಾಗಿ ಬದುಕಲು ದಾರಿ ಕಾಣುವಂತಾಗುತ್ತದೆ ಶಾಸಕರ – ಅಭಿಮತ.
ದೊಡ್ಡ ಉಳ್ಳಾರ್ತಿ ನವೆಂಬರ್.30

ಜನಪ್ರಿಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ರವರು ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ 2023-24 ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಅಡಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನೂತನ ಬಸ್ಟ್ಯಾಂಡ್ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಮತ್ತು ರಾಂಪುರದಲ್ಲಿ ಎಸ್ ಪಿ ಎಸ್ ಆರ್ ಹಾಗೂ ಎಸ್ ಎಲ್ ಎನ್ ಎಸ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಮಾನ್ಯ ಎನ್ ವೈ ಗೋಪಾಲಕೃಷ್ಣ ಶಾಸಕರು ಮೊಳಕಾಲ್ಮೂರು ಪಟ್ಟಣದಲ್ಲಿ ಜೂನಿಯರ್ ಕಾಲೇಜ್ ಹಿಂದೆ ಎನ್ ವೈ ಗೋಪಾಲಕೃಷ್ಣ ಶಾಸಕರು ಆಗಿದ್ದಾಗ ಶಿಕ್ಷಣವೆಂಬುವುದು ಶಿಕ್ಷಣವಾಗಿ ಉಳಿದಿತ್ತು ಆ ಕಾಲೇಜು ಚಿತ್ರದುರ್ಗ ಜಿಲ್ಲೆಗೆ ಮೊಳಕಾಲ್ಮೂರು ಪಟ್ಟಣದ ಜೂನಿಯರ್ ಕಾಲೇಜ್ ನಂಬರ್ ಒನ್ ಆಗಿ ಸ್ಟೂಡೆಂಟ್ ಗಳು ವಿದ್ಯಾಭ್ಯಾಸ ಮಾಡುತ್ತಿದ್ದರು ಎಸ್ ಎಸ್ ಎಲ್ ಸಿ ಸೆಕೆಂಡ್ ಇಯರ್ ಪಿಯುಸಿ ಎಕ್ಸಾಮ್ ಗಳ ಸಹ ಮೊಳಕಾಲ್ಮೂರು ತಾಲೂಕಿನಲ್ಲಿ ಅತಿ ಹೆಚ್ಚು ಅಂಕ ಗಳಿಸುತ್ತಿರುವ ವಿದ್ಯಾರ್ಥಿಗಳು ಕಾಣುತ್ತಿದ್ದರು ಹಿಂದೆ ಈಗ ಸುಮಾರು 10 12 ವರ್ಷದಿಂದ ಜೂನಿಯರ್ ಕಾಲೇಜು ಶಿಕ್ಷಣವೇನು ಎಂಬುದು ಅರಿವೇ ಇಲ್ಲದಂತಾಗಿದೆ.

ಆದಕಾರಣ ಎನ್ ವೈ ಗೋಪಾಲಕೃಷ್ಣ ಶಾಸಕರು ಒಬ್ಬ ಶಿಕ್ಷಕರ ಮಗ ಅದಕ್ಕೆ ಮೊಳಕಾಲ್ಮೂರು ಕ್ಷೇತ್ರದ ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದಲೇ ಅರಿವು ಮೂಡಿಸಬೇಕೆಂದು ಇಡೀ ತಾಲೂಕಿನ ರೈತರ ಬಡ ವಿದ್ಯಾರ್ಥಿಗಳನ್ನು ಸರ್ಕಾರದ ಸವಲತ್ತುಗಳು ಮತ್ತು ಯೋಜನೆಗಳು ಪಡೆಯಬೇಕು ಮತ್ತು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಮಾನ್ಯ ಶಾಸಕರ ನಿರ್ಧಾರವಾಗಿರುತ್ತದೆ ಒಂದು ಮನೆಯಲ್ಲಿ ಒಬ್ಬ ವಿದ್ಯಾರ್ಥಿ ಬುದ್ಧಿವಂತನಾದರೆ ಇಡೀ ಆ ಕುಟುಂಬವೇ ಸುಜ್ಞಾನಿಯಾಗಿ ಬದುಕಲು ದಾರಿ ಕಾಣುವಂತಾಗುತ್ತದೆ ಶಿಕ್ಷಣ ಇಲ್ಲದಿದ್ದರೆ ಅಜ್ಞಾನಿಯಾಗಿ ಕಾಲ ಕಳೆಯ ಬೇಕಾಗುತ್ತದೆ ಆದ್ದರಿಂದ ಗುರುವಿನ ಮಗ ಗುರುವಾಗಿ ಬೆಳೆಯಬೇಕು ಗುರು ಬಲವಿದ್ದರೆ ಯಾವುದೇ ಒಬ್ಬ ವ್ಯಕ್ತಿಗೆ ಕೆಲಸಗಳು ಸುಗಮವಾಗಿ ಸಾಗುತ್ತವೆ ಎಂದು ತಿಳಿಯಬೇಕಾಗುತ್ತದೆ ಇದರಂತೆ ಮೊಳಕಾಲ್ಮೂರು ಕ್ಷೇತ್ರಕ್ಕೆ ಒಳ್ಳೆ ಒಳ್ಳೆ ಯೋಜನೆಗಳು ಅಭಿವೃದ್ಧಿಗಳು ಮೂಲಭೂತ ಸೌಕರ್ಯಗಳು ರಸ್ತೆಗಳು ಶಿಕ್ಷಣಕ್ಕೆ ಬೇಕಾಗಿರುವ ಬಿಲ್ಡಿಂಗ್ ಗಳು ಶೌಚಾಲಯ ಕಾಂಪೌಂಡ್ ಗಳು ಇನ್ನು ಅನೇಕ ರೈತರಿಗೆ ಬೇಕಾಗುವ ಕೃಷಿ ಯಂತ್ರೋಪಕರಣಗಳು ಕೃಷಿಯೇತರ ರೈತರಿಗೆ ಬೆಳೆ ಪರಿಹಾರಗಳು ಇನ್ಸೂರೆನ್ಸ್ ಗಳು ಈ ಬರಗಾಲದ ಪರಿಸ್ಥಿತಿ ನೋಡಿ ಇವೆಲ್ಲವನ್ನೂ ಶಾಸಕರು ರೂಪಿಸುತ್ತಾರೆಂದು ಮೊಳಕಾಲ್ಮೂರು ಕ್ಷೇತ್ರದ ಸಾರ್ವಜನಿಕರು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಅಭಿಮಾನಿಗಳು ಮೊದಲಾದವರು ಭಾಗವಹಿಸಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು