ಆರೋಗ್ಯ ಇಲಾಖೆಯಿಂದ ನಕಲಿ ವೈದ್ಯನಾ ಮನೆಗೆ ದಾಳಿ ಪ್ರಕರಣ ದಾಖಲು.
ಶಿವಪುರ ನವೆಂಬರ್.30

ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮದಲ್ಲಿ ಬುದುವಾರ ರಂದು 11.45 ರ ಸಮಯದಲ್ಲಿ ಜಿಲ್ಲಾ ವೈಧ್ಯಾಧಿಕಾರಿಗಳಾದ ಎಲ್ ಆರ್ ಶಂಕರ್ ನಾಯ್ಕ್,ಹಾಗೂ ಮಾನ್ಯ ತಾಲೂಕಾ ದಂಡಾಧಿಕಾರಿಗಳಾದ ಶ್ರೀಮತಿ ರೇಣುಕಾ, ಮತ್ತು ತಾಲೂಕಾ ವೈದ್ಯಾಧಿಕಾರಿಗಳಾದ ಡಾಕ್ಟರ್ ಪ್ರದೀಪ್, ಹಾಗೂ ಪೊಲೀಸ್ ಅಧಿಕಾರಿಗಳಾದ ಎಎಸ್ಐ ಬಸರಾಜ್, ಹೆಚ್. ಸಿ. ಜಗದೀಶ್, ಆರ್ ಐ ಚೌಡಪ್ಪ,ಇವರ ನೇತೃತ್ವದಲ್ಲಿ ಶಿವಪುರ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಆಂಧ್ರ ಮೂಲದ ಕರ್ನೂಲ್ ಜಿಲ್ಲೆಯೇ ನಿವಾಸಿಯಾಗಿರುವ ನಕಲಿ ವೈದ್ಯ ಮಹಮ್ಮದ್ ರಫೀಕ್ ತಂದೆ ಹಜರತ್ ಸಾಬ್ ಇವರು ಡಾಕ್ಟರ್ ಎಂದು ಜನರಿಗೆ ಸುಳ್ಳು ಹೇಳಿಕೊಂಡು ಸುತ್ತ ಮುತ್ತಲಿನ ಗ್ರಾಮದ ಜನರಿಗೆ ಜ್ವರ ಕೆಮ್ಮು ನೆಗಡಿ ಇನ್ನಿತರೆ ರೋಗಿಗಳಿಗೆ ಈ ವ್ಯಕ್ತಿ ಹತ್ರ ಬಂದರೆ ಸರಿ ಸುಮಾರು 130 ರೂಪಾಯಿ ಒಬ್ಬ ಪೇಷೆಂಟಿಗೆ ತೆಗೆದು ಕೊಳ್ಳುತ್ತಾನೆ, ಎಂದು ನೇರವಾಗಿ ಮಾನ್ಯ ತಹಶೀಲ್ದಾರ್ ರೇಣುಕಾ ರವರಿಗೆ ಉತ್ತರಿಸುತ್ತಾರೆ. ಈ ವ್ಯಕ್ತಿಯು ರೋಗಿಗಳು ಜ್ವರ ನೆಗಡಿ, ಕೆಮ್ಮು ಇನ್ನಿತರೆ ಸಣ್ಣಪುಟ್ಟ ತೊಂದರೆ ಗೊಳಗಾಗಿರುವ ರೋಗಿಗಳಿಗೆ ಮಕ್ಕಳಿಗೆ ಹಿರಿಯರಿಗೂ ಯುವಕರಿಗೂ ಏನು ಸಮಸ್ಯೆಯನ್ನು ತಿಳಿದು ಕೊಂಡು ಕಡಿಮೆ ಅಂತರದ ಡೋಜಿನಿಂದ ಚಿಕಿತ್ಸೆ ಶುರು ಮಾಡಬೇಕು ಆದರೆ ಈ ಮನುಷ್ಯ ಜನಗಳಿಗೆ ಹಾಗೆ ಮಾಡದೆ ಹೆಚ್ಚಿನ ಡೋಸ್ ಇಂಜೆಕ್ಷನ್ ಗಳು ಮಾತ್ರೆಗಳು ಹಾಗೂ ಇನ್ನಿತರ ಚಿಕಿತ್ಸೆಗಳನ್ನು ಕೊಡಲಿಕ್ಕೆ ಇಟ್ಟು ಕೊಂಡಿರುವಂತಹ ಔಷಧಿಗಳು ಮನೆಯಲ್ಲಿ ರೇಡ ಮಾಡಿದ ಸಂದರ್ಭದಲ್ಲಿ ಸಿಕ್ಕಿರುವುದು ಮನೆಯಲ್ಲಿ ಕಂಡು ಬಂದಿತು.

ಈ ಸಂದರ್ಭದಲ್ಲಿ ಮಾನ್ಯ ವಿಜಯನಗರ ಜಿಲ್ಲಾ ವೈದಾಧಿಕಾರಿಗಳಾದ ಆರ್ ಎಲ್ ಶಂಕರ್ ನಾಯ್ಕ್ ರವರು ನಮ್ಮ ಮಾಧ್ಯಮಕ್ಕೆ ಆರೋಗ್ಯ ಇಲಾಖೆಯಿಂದ ಮೂರು ತಿಂಗಳ ಮುಂಚಿತವಾಗಿಯೇ ಮೊಹಮ್ಮದ್ ರಫೀಕ್ ಗೆ ತಮಗೆ ಸಂಬಂಧಪಟ್ಟಂತಹ ಅರ್ಹತಾ ವೈದ್ಯ ಕೀಯ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು ಎಂದು ನೋಟಿಸ್ ನೀಡಿದರು ಇಲಾಖೆಯ ನೋಟಿಸ್ ಗೆ ಕ್ಯಾರೆ ಎನ್ನದೇ ಈ ನಕಲಿ ವೈದ್ಯನು ಇವನ ಚಿಕಿತ್ಸೆಯ ಕುರಿತಾಗಿ ಕೆಲವರು ವಿಡಿಯೋ ಚಿತ್ರಗಳನ್ನು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಹಾಗೂ ತಾಲೂಕು ವೈದ್ಯಾಧಿಕಾರಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಬಂದ ನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು ಆರೋಗ್ಯ ಇಲಾಖೆಯಿಂದ ತಂಡವನ್ನು ರಚಿಸಿ ಬುಧವಾರ 11.45 ಸಮಯದಲ್ಲಿ ಏಕಾಏಕಿ ಅಧಿಕಾರಿಗಳ ತಂಡವು ನಕಲಿ ವೈದ್ಯನು ಶಿವಪುರ ಗ್ರಾಮದ ಮನೆಗೆ ಮೇಲೆ ದಾಳಿ ಮಾಡಿ ಮನೆಯಲ್ಲಿ ಸಿಕ್ಕಿರುವಂತಹ ಔಷಧಿಗಳು ಇನ್ನಿತರೆ ವಸ್ತುಗಳನ್ನು ವಶ ಪಡಿಸಿಕೊಂಡು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳ ತಂಡವು ಮೊಹಮ್ಮದ್ ರಫೀಕ್ ನಕಲಿ ವೈದ್ಯನ ಮೇಲೆ ಪ್ರಕರಣ ದಾಖಲಾಗಿರುವುದು. ತಾಲೂಕು ಆಡಳಿತ ಅಧಿಕಾರಿಗಳಾದ ಡಾಕ್ಟರ್ ಪ್ರದೀಪ್ ರವರು ತಿಳಿಸಿದ್ದಾರೆ. ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ ಕೂಡ್ಲಿಗಿ