ತಹಶೀಲ್ದಾರ್ ಜನ ಸಂಪರ್ಕ ಸಭೆಯಲ್ಲಿ ಬೇಕಾ ಬಿಟ್ಟಿಯಾಗಿ ತೆರೆಯುತ್ತಿರುವ ಮದ್ಯ ದಂಗಡಿ ಕೋಲಾಹಲ – ತಬ್ಬಿಬ್ಬಾದ ಅಬಕಾರಿ ಇಲಾಖೆ ಅಧಿಕಾರಿಗಳು.
ಹುನಗುಂದ ಡಿಸೆಂಬರ್.2

ಪಟ್ಟಣದಲ್ಲಿ ಬೆಳಗ್ಗೆ ಹಾಲು ಸಿಗದಿದ್ದರೂ ಕೂಡಾ ಅಲ್ಕೋಹಾಲ್ ಮಾತ್ರ ಬೆಳ್ಳಂ ಬೆಳಿಗ್ಗೆ ಸಿಗುತ್ತೇ.ಅಬಕಾರಿ ನೀತಿ ನಿಯಮವನ್ನು ಮೀರಿ ಬೆಳಗ್ಗೆ ೬ ಗಂಟೆಗೆ ಬಾರ್ ಮತ್ತು ರಸ್ಟೋರೆಂಟ್‌ಗಳು ಓಪನ್ ಆಗುತ್ತಿದ್ದರೂ ಕೂಡಾ ಇದ್ದನ್ನು ತಡೆಯುವಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆಂದು ಸಾರ್ವಜನಿಕರು ಶನಿವಾರ ಪುರಸಭೆ ಕಾರ್ಯಾಲಯದಲ್ಲಿ ನಡೆದ ತಹಶೀಲ್ದಾರ ಜನ ಸಂಪರ್ಕ ಸಭೆಯಲ್ಲಿ ಅಲ್ಕೋಹಾಲ್ ಕೋಲಾಹಲ ಭುಗಿಲೆದ್ದಿರಿಂದ ತಬ್ಬಿಬ್ಬಾದ ಅಬಕಾರಿ ಇಲಾಖೆ ಅಧಿಕಾರಿ.ಗ್ರೇಡ್.೨ ತಹಶೀಲ್ದಾರ ಮಹಾಂತೇಶ ಸಂದಿಗವಾಡ ಅವರ ಅಧ್ಯಕ್ಷತೆಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಕಳೆದ ನ.೮ ರಂದು ತಾ.ಪಂ ಕಾರ್ಯಾಲಯದಲ್ಲಿ ಲೋಕಾಯುಕ್ತ ಇಲಾಖೆಯಿಂದ ನಡೆದ ಜನ ಸಂಪರ್ಕ ಸಭೆಯಲ್ಲಿ ಬೇಕಾ ಬಿಟ್ಟಿಯಾಗಿ ಬೆಳ್ಳಂ ಬೆಳಿಗ್ಗೆ ವೈನ್ ಶಾಪ್ ಓಪನ್ ಮಾಡುತ್ತಿದ್ದರೂ ಅಬಕಾರಿ ಇಲಾಖೆ ಕ್ರಮ ತಗೆದು ಕೊಳ್ಳುತ್ತಿಲ್ಲ ಎಂದು ಬಾಗಲಕೋಟ ಲೋಕಾಯುಕ್ತ ಡಿಎಸ್‌ಪಿ ಸುರೇಶರಡ್ಡಿ ಎಂ.ಎಸ್. ಸಭೆಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರೂ ಕೂಡಾ ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ಯಾವದೇ ಕ್ರಮಕ್ಕೆ ಮುಂದಾಗುತ್ತಿಲ್ಲ.ನಸುಕಿನ ಜಾವದಲ್ಲಿ ಮದ್ಯ ದಂಗಡಿಗಳನ್ನು ತೆರೆಯುವುದರಿಂದ ದುಡಿಯುವ ಕೈಗಳ ಕೈಯಲ್ಲಿ ಅಬಕಾರಿ ಅಧಿಕಾರಿಗಳೇ ಮದ್ಯದ ಬಾಟಲಿ ಕೊಟ್ಟು ನಿಲ್ಲಿಸುವಂತಾಗಿದೆ ಎಂದು ಸಾರ್ವಜನಿಕರು ಅಬಕಾರಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರೂ ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ನೀವು ಹೇಳೋತರ ಅಂತದ್ದೂ ಯಾವದೇ ನಡದೇ ಇಲ್ಲ ಎನ್ನುವ ತರ ಸಾರ್ವಜನಿಕರಿಗೆ ಉತ್ತರ ನೀಡಿದ್ದು ಮತ್ತಷ್ಟು ಸಾರ್ವಜನಿಕರ ಕೋಪಕ್ಕೆ ಕಾರಣವಾಯಿತು.ಹುನಗುಂದ ಪಟ್ಟಣದಲ್ಲಿ ನಿರ್ಮಾಣವಾಗಿರುವ ಅನೇಕ ಲೇ ಔಟ್‌ಗಳು ಅಭಿವೃದ್ದಿ ಕಾಣದಿರುವುದರಿಂದ ನಿವೇಶನ ಪಡೆದ ಅನೇಕ ಸಾರ್ವಜನಿಕರು ತೊಂದರೇ ಅನುಭವಿಸುವಂತಾಗಿದೆ.ಇನ್ನು ಮುಂದೆ ಅಭಿವೃದ್ದಿ ಕಾರ್ಯ ಮಾಡದೇ ಇರುವ ಲೇ ಔಟ್‌ಗಳಿಗೆ ನಿವೇಶನ ಮಾರಾಟಕ್ಕೆ ಅವಕಾಶ ನೀಡಬಾರದು ಅಂತಹ ಲೇ ಔಟ್ ಮಾಲೀಕರಿಗೆ ತಕ್ಷಣವೇ ನೋಟಿಸ್ ಜಾರಿ ಮಾಡಬೇಕು ಎಂದು ಸಾರ್ವಜನಿಕರು ಪುರಸಭೆ ಮುಖ್ಯಾಧಿಕಾರಿ ಪಿ.ಕೆ.ಗುಡದಾರಿ ತಿಳಿಸಿದಾಗ ನಾನು ಈಗ ಬಂದಿದ್ದೇನೆ ಪಟ್ಟಣದ ಎಲ್ಲಾ ಲೇ ಔಟ್‌ಗಳ ಪೈಲ್ ತರಿಸಿ ಪರಿಶೀಲಿಸಿ ಅಭಿವೃದ್ದಿ ಕಾರ್ಯ ಆಗದೇ ಇರುವ ಲೇ ಔಟ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದರು.ಇನ್ನೂ ಗೃಹ ಲಕ್ಷ್ಮಿ ಯೋಜನೆ ಯಡಿಯಲ್ಲಿ ಸಾಕಷ್ಟು ಮಹಿಳೆಯರ ಖಾತೆಗಳಿಗೆ ೨ ಸಾವಿರ ಹಣ ಜಮಾ ಆಗಿಲ್ಲ ಇದ್ದನ್ನು ಸರಿ ಪಡಿಸುವಂತೆ ಅನೇಕ ಮಹಿಳೆಯರು ಗ್ರೇಡ್.೨ ತಹಶೀಲ್ದಾರ ಮಹಾಂತೇಶ ಸಂದಿಮನಿ ಅವರಿಗೆ ಅರ್ಜಿ ಸಲ್ಲಿಸಿದರು.ಬೀದಿ ಬದಿ ವ್ಯಾಪಾರಸ್ಥರು ತ್ಯಾಜ್ಯವನ್ನು ಹಿರೇಹಳ್ಳದಲ್ಲಿಯೇ ಹಾಕುತ್ತಿರುವುದರಿಂದ ಹಿರೇಹಳ್ಳ ಅಸ್ವಚ್ಚತೆ ಆಗರವಾಗಿದೆ.ಈ ಮೊದಲು ಸ್ವಚ್ಚತೆ ಕಾರ್ಯ ನಡೆದು ತಕ್ಕ ಮಟ್ಟಿಗೆ ಸರಿಯಾಗಿತ್ತು ಆದರೆ ಮತ್ತೇ ತ್ಯಾಜ್ಯವನ್ನು ಎಸಿಯುತ್ತಿರುವುದರಿಂದ ಗಬ್ಬೆದ್ದು ನಾರುವ ಸ್ಥಿತಿ ನಿರ್ಮಾಣವಾಗಿದ್ದು ಅದರ ಸ್ವಚ್ಚತೆಗೆ ಕ್ರಮ ಕೈಕೊಳ್ಳುವಂತೆ ಸಾರ್ವಜನಿಕರು ತಿಳಿಸಿದರು.ಪಟ್ಟಣದ ಹೃದಯ ಭಾಗದಲ್ಲಿದ್ದ ಚೌಡಿ ಕಟ್ಟಿಯನ್ನು ಮರು ನಿರ್ಮಾಣ ಮಾಡುವ ಸಲುವಾಗಿ ಹಳೆಯ ಕಟ್ಟಡವನ್ನು ಡೆಮಾಲಿಸ್ ಮಾಡಿದ್ದು.ಸಧ್ಯ ಮರು ನಿರ್ಮಾಣವಾಗದೇ ಆ ಜಾಗೆ ಮಲ ಮೂತ್ರಗಳ ವಿಸರ್ಜನೆಯ ಸ್ಥಳವಾಗಿ ಮಾರ್ಪಟಿದೆ ಎಂದು ಸಾರ್ವಜನಿಕರು ಅಧಿಕಾರಿಗಳನ್ನು ದೂರಿದರು.ಒಟ್ಟಾರೆಯಾಗಿ ತಹಶೀಲ್ದಾರ ಜನ ಸಂಪರ್ಕ ಸಭೆಯು ಸಮಸ್ಯೆಗಳ ಆಗರವೇ ಅಲ್ಲಿ ನಿರ್ಮಾಣವಾಗಿದ್ದಂತೂ ಸತ್ಯ.ಈ ಸಂದರ್ಭದಲ್ಲಿ ಶಿರಸ್ತೆದಾರ ಹನಮಂತರಾಯ ಶಿವಣಗಿ,ಪುರಸಭೆ ಮುಖ್ಯಾಧಿಕಾರಿ ಪಿ.ಕೆ.ಗುಡದಾರಿ ಸೇರಿದಂತೆ ಅನೇಕ ಇಲಾಖೆಗಳ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ