ಯುವಕರ ಆಕರ್ಷಣೆಯ ಕೇಂದ್ರವಾಗಿದ್ದ ಜ್ಞಾನ್ ಮಹಾರಾಜ್ – ಮಾತಾಜೀ ತ್ಯಾಗಮಯೀ ಹೇಳಿಕೆ.
ಚಳ್ಳಕೆರೆ ಆ.08





ಸ್ವಾಮಿ ವಿವೇಕಾನಂದರ ಶಿಷ್ಯರಾದ ಜ್ಞಾನ್ ಮಹಾರಾಜ್ ಅವರು ಯುವಕರ ಆಕರ್ಷಣೆಯ ಕೇಂದ್ರವಾಗಿದ್ದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಹೇಳಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು “ಜ್ಞಾನ್ ಮಹಾರಾಜ್” ಅವರ ಬಗ್ಗೆ ಪ್ರವಚನ ನೀಡಿದರು.

ನೈಷ್ಠಿಕ ಬ್ರಹ್ಮಚಾರಿ ಮತ್ತು ಪ್ರಖರ ವೈರಾಗ್ಯ ಮೂರ್ತಿಯಾಗಿದ್ದ ಅವರು ಶ್ರೀರಾಮಕೃಷ್ಣರು ಸ್ವಾಮಿ ವಿವೇಕಾನಂದರ ಬೋಧನೆಗಳನ್ನು ಪ್ರತ್ಯೇಕಿಸಿ ಪುಸ್ತಕ ರೂಪದಲ್ಲಿ ಹೊರತಂದು ಎಲ್ಲರಿಗೂ ಹಂಚುತ್ತಿದ್ದ ಅವರು ಸ್ನಾನದಿಂದ ಶರೀರ ಶುದ್ಧಿಯಾದರೆ ನಿರಂತರ ನಾಮಜಪದಿಂದ ಮನಸ್ಸು ಶುದ್ಧಿಯಾಗುತ್ತದೆ ಎಂದು ತಿಳಿಸುತ್ತಿದ್ದರು ಎಂಬುದಾಗಿ ಮಾತಾಜೀ ತಿಳಿಸಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ ಮತ್ತು ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಗೀತಾ ನಾಗರಾಜ್, ನಿವೃತ್ತ ಶಿಕ್ಷಕ ರುದ್ರಪ್ಟ, ಜಿ.ಯಶೋಧಾ ಪ್ರಕಾಶ್, ವನಜಾಕ್ಷಿ ಮೋಹನ್, ಮಾಣಿಕ್ಯ ಸತ್ಯನಾರಾಯಣ, ಅಂಬುಜಾ, ಯತೀಶ್ ಎಂ ಸಿದ್ದಾಪುರ, ಸುಮನಾ ಕೋಟೇಶ್ವರ, ಉಷಾ ಶ್ರೀನಿವಾಸ್, ಸುಧಾಮಣಿ, ರಶ್ಮಿ ವಸಂತ, ಕವಿತಾ ಗುರುಮೂರ್ತಿ, ಸಿ.ಎಸ್ ಭಾರತಿ, ಚೇತನ್, ಚೆನ್ನಕೇಶವ, ಪಂಕಜ ಚೆನ್ನಪ್ಪ ಸೇರಿದಂತೆ ಸದ್ಭಕ್ತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.