ಕೂಡ್ಲಿಗಿ: ವಕೀಲರ ಸಂರಕ್ಷಣಾ ಕಾಯ್ದೆ ತನ್ನಿ. ಪ್ರಕರಣಗಳಿಂದ ಕೈಬಿಡಿ.ಪೋಲಿಸ್ ರನ್ನು ಬಂಧಿಸಿ – ವಕೀಲರ ಸಂಘ ಆಗ್ರಹ.
ಕೂಡ್ಲಿಗಿ ಡಿಸೆಂಬರ್.5

ವಿಜಯನಗರ ಜಿಲ್ಲೆಯ ಕೂಡ್ಲಿಗಿ – ಚಿಕ್ಕಮಂಗಳೂರಿನಲ್ಲಿ ವಕೀರಾದ ಪ್ರೀತಮ್ ಮೇಲೆ ಪೊಲೀಸರು, ಅಮಾನವೀಯವಾಗಿ ಹಲ್ಲೆ ಮಾಡಿರುವುದನ್ನು ಖಂಡಿಸಿದರು. ಕೂಡ್ಲಿಗಿ ವಕೀಲರ ಸಂಘದಿಂದ ಘಟನೆ ವಿರೋಧಿಸಿದ್ದು, ಡಿ.5 ರಂದು ತೀವ್ರವಾಗಿ ಪ್ರತಿಭಟನೆ ನಡೆಸಲಾಯಿತು. ಈ ಘಟನೆಯ ವಿರುದ್ಧ ವಕೀಲರ ಸಂಘದ ಅಧ್ಯಕ್ಷ ಜಿ.ಎಮ್. ಮಲ್ಲಿಕಾರ್ಜುನಯ್ಯ ನೇತೃತ್ವದಲ್ಲಿ, ಕೂಡ್ಲಿಗಿ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಪಟ್ಟಣದಲ್ಲಿ ಪ್ರತಿಭಟಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ಪೊಲೀಸರನ್ನು ಬಂಧಿಸಬೇಕಿದೆ.

ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕು, ಪ್ರಕರಣ ಸಂಬಂಧಿಸಿದಂತೆ 15 ವಕೀಲರ ಮೇಲೆ ಹಾಕಿರುವ FIR ರದ್ದು ಗೊಳಿಸಬೇಕೆಂದು ವಕೀಲರು ಆಗ್ರಹಿಸಿದ್ದಾರೆ. ವಕೀಲರು ನ್ಯಾಯಾಲಯದಿಂದ ಪ್ರಾರಂಭಿಸಿದ ಪ್ರತಿಭಟನಾ ಮೆರವಣಿಗೆ , ಪಟ್ಟಣದ ಪ್ರಮುಖ ರಸ್ಥೆಯಲ್ಲಿ ರ್ಯಾಲಿ ಮೂಲಕ ಸಂಚರಿಸಿ ಘಟನೆ ಖಂಡಿಸಿ ಘೋಷಣೆ ಕೂಗುವುದ ರೊಂದಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಪ್ರಮುಖ ಮಾನವ ಸರ ಪಳಿಯೊಂದಿಗೆ ವೃತ್ತಗಳಲ್ಲಿ ವಕೀಲರ ಮೇಲಿನ ಹಲ್ಲೆ ಕುರಿತು ಸಾರ್ವಜನಿಕರ ನ್ನುದ್ದೇಶಿಸಿ ಮಾತನಾಡಿ ಖಂಡಿಸಿದ್ದಾರೆ, ಅವರು ಪೊಲೀಸ್ ರ ದೌರ್ಜನ್ಯವನ್ನು ತೀವ್ರವಾಗಿ ವಿರೋಧಿಸಿದ್ದಾರೆ. ನಂತರ ಅವರು ತಹಶಿಲ್ದಾರರ ಕಚೇರಿಗೆ ತೆರಳಿ, ತಮ್ಮ ವಿವಿಧ ಬೇಡಿಕೆಗಳಿರುವ ಹಕ್ಕೊತ್ತಾಯ ಪತ್ರವನ್ನು, ಅಧ್ಯಕ್ಷ ಜಿ.ಎಮ್.ಮಲ್ಲಿಕಾರ್ಜುನಯ್ಯ ನೇತೃತ್ವದಲ್ಲಿ. ತಹಶಿಲ್ದಾರರಾದ ಎಮ್.ರೇಣುಕಮ್ಮ ರವರಿಗೆ ನೀಡಿದ್ದು, ಅವರ ಮುಖಾಂತರ ರಾಜ್ಯಪಾಲರಿಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ವಕೀರಲರು ಹಾಗೂ ಯುವ ವಕೀಲರು, ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಇದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ ಕೂಡ್ಲಿಗಿ