ಆರೋಗ್ಯ ಶಿಬಿರ ಹಾಗೂ ಕ್ಷಯ ರೋಗದ ಕುರಿತು ಜಾಗೃತಿ.
ಕೆ.ಬಿ.ಕೆ ಹಟ್ಟಿ ಡಿಸೆಂಬರ್.5

ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆ.ಬಿ.ಕೆ ಹಟ್ಟಿ, ಸುಟ್ಟ ಕರ್ನಾರ ಹಟ್ಟಿ, ಹಾಗೂ ಚೌಟಯ್ಯನ ಹಟ್ಟಿ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಸಾರ್ವಜನಿಕರಿಗೆ ಬೆಟ್ಟದ ಹೂ ಸೇವಾ ಸಂಸ್ಥೆ ತಾಯಕನಹಳ್ಳಿ ಇವರ ವತಿಯಿಂದ ಕ್ಷಯ ರೋಗದ ವಿರುದ್ಧ ಜಾಗೃತಿ ಆಂದೋಲನ ಕಾರ್ಯಕ್ರಮ ಹಾಗೂ ಆರೋಗ್ಯ ಶಿಬಿರ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಬೆಟ್ಟದ ಹೂ ಸೇವಾ ಸಂಸ್ಥೆಯ ಸಂಸ್ಥಾಪಕ ಡಾ ಸುರೇಂದ್ರ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಿತು ನಂತರ ಕಾರ್ಯಕ್ರಮ ಕುರಿತು ಮಾತನಾಡಿ ಕ್ಷಯ ರೋಗ ಸಾಂಕ್ರಾಮಿಕ ರೋಗವಾಗಿದ್ದು, ಲಕ್ಷ್ಮಣ ಕಾಣಿಸಿಕೊಂಡರೆ ತಕ್ಷಣ ಪರೀಕ್ಷೆ, ಸೂಕ್ತ ಚಿಕಿತ್ಸೆ ಪಡೆದು, ವೈದ್ಯರ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಕ್ಷಯ ರೋಗ ಹೇಗೆ ಬರುತ್ತದೆ ಇದರ ಪ್ರಾರಂಭದ ಲಕ್ಷಣಗಳೇನು ಎಂಬುದನ್ನು ಹಾಗೂ ಇದಕ್ಕಿರುವ ಚಿಕಿತ್ಸೆಯ ಬಗ್ಗೆ ಮತ್ತು ವೈಯುಕ್ತಿಕ ಸ್ವಚ್ಛತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಈ ಕಾರ್ಯಕ್ರಮದಲ್ಲಿ ತಾ.ಪಂ ಮಾಜಿ ಸದಸ್ಯರಾದ ದಡ್ಡಿ ಸೂರಣ್ಣ ಹಸಿರು ಬಾವುಟ ಹಾರಿಸುವುದರ ಮುಖಾಂತರ ಉದ್ಘಾಟಿಸಿದರು. ನಂತರ ಶಾಲಾ ವಿದ್ಯಾರ್ಥಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಕ್ಷಯ ರೋಗದ ವಿರುದ್ಧ ಜಾಗೃತಿ ಮೂಡಿಸುವ ಘೋಷಣೆ ಗಳನ್ನು ಕೂಗುತ್ತಾ ಸಾಗಿದರು. ಈ ವೇಳೆ ಉಚಿತ ಆರೋಗ್ಯ ಶಿಬಿರದಲ್ಲಿ ಬಿಪಿ, ಶುಗರ್, ಜ್ವರ ಕೆಮ್ಮು ಇತರೆ ರೋಗಗಳಿಗೆ ಪರೀಕ್ಷಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಕುಮಾರ್ ರೆಡ್ಡಿ, ಕೆ.ಎನ್ ರಾಘವೇಂದ್ರ, ಕ್ಯಾತಯ್ಯ, ಶಿಕ್ಷಕರಾದ ರವಿಕುಮಾರ್, ಬೆಟ್ಟದ ಹೂವು ಸೇವಾ ಸಂಸ್ಥೆಯ ಸದಸ್ಯ ಕೊಟ್ಟಿಗೆರು ಸತೀಶ, ಮುಖ್ಯ ಗುರುಗಳು ಶ್ರೀ ರವಿಕುಮಾರ್, ಸ.ಶಿ ರಾದ ಮಂಜುನಾಥ ಹಾಗೂ ಶಿವಕುಮಾರ್, ಬಿಜೆಪಿ ಮುಖಂಡ ಮಹಾದೇವ, ಓಬಣ್ಣ, ಸೇರಿದಂತೆ ಸಮುದಾಯ ಆರೋಗ್ಯ ನಿರೀಕ್ಷಕರು, ನರ್ಸ್ ಹಾಗೂ ಆಶಾ ಕಾರ್ಯಕರ್ತರು, ಶಿಕ್ಷಕರು, ವಿದ್ಯಾರ್ಥಿಗಳು, ಹಾಗೂ ಬೆಟ್ಟದ ಹೂವು ಸೇವ ಸಂಸ್ಥೆಯ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ