ಶ್ರೀ ಕೃಷ್ಣಪ್ಪ ನಿವೃತ್ತ ಮುಖ್ಯ ಶಿಕ್ಷಕರಿಗೆ ಬೀಳ್ಕೊಡುಗೆ.
ಲೋಕಿಕೆರೆ ಡಿಸೆಂಬರ್.5

ಕಾನಾ ಹೊಸಹಳ್ಳಿ ಹೋಬಳಿ ಸಮೀಪದ ಲೋಕಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಮುಖ್ಯ ಶಿಕ್ಷಕ ಶ್ರೀ ಕೃಷ್ಣಪ್ಪ ಅವರನ್ನು ಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳು ಸನ್ಮಾನಿಸಿ ಬೀಳ್ಕೊಟ್ಟರು. ಶಿಕ್ಷಕರಾಗಿ 1993ರಲ್ಲಿ ರಲ್ಲಿ ಶಿಕ್ಷಕರಾಗಿ ಕರ್ತವ್ಯಕ್ಕೆ ಸೇರಿದ ಶ್ರೀ ಕೃಷ್ಣಪ್ಪ ಅವರು ಹಗರಿಬೊಮ್ಮನಹಳ್ಳಿ ತಾಲೂಕಿನ ಶಿಕ್ಷಕರಾಗಿ ನಾಲ್ಕು ವರ್ಷ ಸೇವೆ ಸಲ್ಲಿಸಿ, ಕೂಡ್ಲಿಗಿ ತಾಲೂಕಿನ ಮಾರಬ ಗೊಲ್ಲರಹಟ್ಟಿ ಶಾಲೆಯಲ್ಲಿ 19 ವರ್ಷ, ಗುಣಸಾಗರ ಶಾಲೆಯಲ್ಲಿ ಬಡ್ತಿ ಮುಖ್ಯ ಗುರುಗಳಾಗಿ 5 ವರ್ಷ, ನಂತರ ಅವರ ಸ್ವಗ್ರಾಮವಾದ ಲೋಕಕೇರೆ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ 2 ವರ್ಷ ಸೇವೆ ಸಲ್ಲಿಸಿ ಇಂದು ಕರ್ತವ್ಯದಿಂದ ನಿವೃತ್ತಿ ಆಗಿರುತ್ತಾರೆ. 30 ವರ್ಷ ಸೇವೆ ಸಲ್ಲಿಸಿದರು.

ಶ್ರೀ ಕೃಷ್ಣಪ್ಪ ಅವರು ಈ ಶಾಲೆಯ ಮಕ್ಕಳಲ್ಲಿಯೆ ತಮ್ಮ ಭವಿಷ್ಯವನ್ನು ಕಂಡವರು. ಹೆಚ್ಚು ಸಮಯವನ್ನು ಶಾಲೆಗಾಗಿಯೆ ಮೀಸಲಿಟ್ಟಿದ್ದಾರೆ. ಇಂತಹ ಶಿಕ್ಷಕರು ಸಿಗುವುದು ತುಂಬಾ ಅಪರೂಪ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಚಂದ್ರಪ್ಪ ಹಾಗೂ ಮುಖ್ಯ ಗುರುಗಳು ರೇಣುಕಾರಾಧ್ಯ, ಕೆ.ಜಿ ನಿಂಗಮ್ಮ ದೈಹಿಕ ಶಿಕ್ಷಕರು, ಅಶ್ವಿನಿ ಕುಮಾರಿ, ಸಾವಿತ್ರಿಬಾಯಿ, ವಾಸುದೇವಾಚಾರ್, ಗುರುಮೂರ್ತಿ, ಪ್ರದೀಪ್, ಉಮೇಶ್, ಸಂಪನ್ಮೂಲ ವ್ಯಕ್ತಿಗಳಾದ ತಿಪ್ಪೇಸ್ವಾಮಿ ಹಾಗೂ ಲಕ್ಕಜಿ ರಾಮಾಂಜನೇಯ ಯುವ ಮುಖಂಡ ಸೇರಿದಂತೆ ಎಸ್ಡಿಎಂಸಿ ಸರ್ವ ಸದಸ್ಯರು ಹಾಗೂ ಅಕ್ಷರ ದಾಸೋಹ ಸಿಬ್ಬಂದಿ ವರ್ಗದವರು, ಶಾಲೆಯ ಹಳೆಯ ವಿದ್ಯಾರ್ಥಿಗಳು, ಪ್ರಸಕ್ತ ವರ್ಷದ ವಿದ್ಯಾರ್ಥಿಗಳು, ಗ್ರಾಮಸ್ಥರು ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ