ಮಕ್ಕಳಲ್ಲಿ ಸೃಜಶೀಲತೆ ಅನ್ವೇಷಿಸಲು ಕಲೆಯ ಮೂಲಕ ಕಲಿಕೆ ಉತ್ತಮ ಪ್ರಯೋಗ – ರುದ್ರಸ್ವಾಮಿ.
ಇಂಡಿ ಡಿಸೆಂಬರ್.7

ಕಲೆಯ ಮೂಲಕ ಕಲಿಕೆಯು ಮಕ್ಕಳಲ್ಲಿ ಸೃಜನಶೀಲತೆಯನ್ನು ಅನ್ವೇಷಿಸಲು ಮತ್ತು ಅವರ ಉತ್ತಮ ಕಲಿಕಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಇದು ಕಲಿಕೆಯ ಪ್ರೀತಿ ಮತ್ತು ಸಾಧನೆಯ ಪ್ರಜ್ಞೆಯನ್ನು ಸಹ ಬೆಳೆಸುತ್ತದೆ ಎಂದು ತುಮಕೂರಿನ ಸಂಪನ್ಮೂಲ ವ್ಯಕ್ತಿ ರುದ್ರಸ್ವಾಮಿ ಹೇಳಿದರು. ಅವರು ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂಜ್ಯಶ್ರೀ ಸಿದ್ದೇಶ್ವರ ಮಹಾ ಸ್ವಾಮಿಗಳ ಸ್ಮರಣಾರ್ಥ ಕಲೆಯ ಮೂಲಕ ಕಲಿಕೆ ವಿಶೇಷ ಪ್ರಾತ್ಯಕ್ಷಿಕೆ ಕಾರ್ಯ ಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಇದು ಮಕ್ಕಳಲ್ಲಿ ವಿಭಿನ್ನ ಸಂಸ್ಕೃತಿಗಳನ್ನು ಅರ್ಥ ಮಾಡಿಕೊಂಡು ಪ್ರಶಂಸಿಸಲು ಸಹ ಕರಿಸುತ್ತದೆ.ವಿದ್ಯಾರ್ಥಿಗಳಲ್ಲಿ ಸಾಮಾಜಿಕ-ಭಾವನಾತ್ಮಕ ಬೆಳವಣಿಗೆಯನ್ನು ಉಂಟು ಮಾಡುತ್ತದೆ ಎಂದು ಹೇಳಿದರು.

ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ಕಲೆಯ ಮೂಲಕ ಕಲಿಕೆಯು ಪ್ರಕೃತಿಯಲ್ಲಿ ಸಾವಯವವಾಗಿದ್ದು, ಶಾಲೆಗಳಲ್ಲಿ ಪ್ರೇರಕ ಕಲಿಕೆಯ ವಾತಾವರಣವನ್ನು ರಚಿಸಿ, ಶಿಕ್ಷಕರು ಮತ್ತು ಮಕ್ಕಳಲ್ಲಿ ಉತ್ತಮ ಶೈಕ್ಷಣಿಕ ಫಲಿತಾಂಶಗಳನ್ನು ತೋರಿಸುತ್ತದೆ ಎಂದು ಹೇಳಿದರು.ಶಾಲಾ ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಮಾತನಾಡಿ, ಕಲೆಯ ಮೂಲಕ ಕಲಿಕೆ ನಿರೀಕ್ಷಿತ ಫಲ ನೀಡಿದೆ. ಪಠ್ಯ ವಸ್ತುವಿನ ಕಲಿಕೆಯ ಜತೆಗೆ ಮಕ್ಕಳು ತಮ್ಮ ಆಸಕ್ತಿಯ ಕಲೆಗಳಲ್ಲಿ ಪಳಗಲು ಇದು ಅವಕಾಶ ಮಾಡಿ ಕೊಟ್ಟಿದೆ. ಇದೊಂದು ಉತ್ತಮ ಪ್ರಯೋಗವಾಗಿದೆ ಎಂದು ಹೇಳಿದರು.ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುನಂದಾ ಹುಣಶ್ಯಾಳ,ಶಿಕ್ಷಕರಾದ ಎಂ ಎಸ್ ಪಾಪನಾಳಮಠ, ಭೀಮಾಶಂಕರ ಕೋರೆ, ಜಯಶ್ರೀ ಬಂಗಾರಿ, ಬಸಮ್ಮ ವಡಗೇರಿ, ಮಧುಮತಿ ನಿಕ್ಕಂ, ರೂಪಾ ಶಹಾಪುರ, ಸರೋಜಿನಿ ಕಟ್ಟಿಮನಿ, ರೇಣುಕಾ ಭಜಂತ್ರಿ, ಲಕ್ಷ್ಮೀ ಮೇತ್ರಿ, ವೀರೇಶ ಹುಣಶ್ಯಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ