ಪಾಲಿಟೆಕ್ನಿಕ್ ಕಾಲೇಜ್ ಮುಂಭಾಗದಲ್ಲಿ ಎನ್.ಹೆಚ್ 50 ರಸ್ತೆ ದಾಟಲು ಮೇಲ್ ಸೇತುವೆ ಮಾಡುವಂತೆ – ವಿದ್ಯಾರ್ಥಿಗಳಿಂದ ಹಾಗೂ ಗ್ರಾಮಸ್ಥರಿಂದ ಒತ್ತಾಯ.
ಕೂಡ್ಲಿಗಿ ಜ.22

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹಾಗೂ ಮಾರಬನಹಳ್ಳಿ ಗ್ರಾಮದ ಮದ್ಯ ಬೆಂಗಳೂರಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 50, ಇದ್ದು ಹೆದ್ದಾರಿಗೆ ಹೊಂದಿಕೊಂಡಂತೆ ಸರ್ಕಾರಿ ಪಾಲಿಟೆಕ್ಣಿಕ್ ಕಾಲೇಜು ಇದ್ದು ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಬಸ್ಸಿನ ಸೌಕರ್ಯವಿಲ್ಲದೆ ನಡೆದುಕೊಂಡು ರಾಷ್ಟ್ರೀಯ ಹೆದ್ದಾರಿಯನ್ನು ದಾಟಿಕೊಂಡು ಕಾಲೇಜಿಗೆ ಬರುವ ಅನಿವಾರ್ಯತೆ ಇದೆ ಕೂಡ್ಲಿಗಿ ಯಿಂದ ಸರಿಸುಮಾರು 2 ಎರಡು ಕಿಲೋಮೀಟರ್ ಕಾಲೇಜು ಇರುವದರಿಂದ ವಿದ್ಯಾರ್ಥಿಗಳು ಭಯದ ಭೀತಿಯಲ್ಲಿ ಹೋಗಿ ಬರುವ ವಾತಾವರಣವಿದ್ದು ತುಂಬಾ ಅಪಘಾತಕಾರಿ ರಸ್ತೆಯಾಗಿದೆ ಮೋಟಾರು ವಾಹನಗಳು ಅತೀ ವೇಗವಾಗಿ ಚಲಿಸುವದರಿಂದ ಎಷ್ಟೋ ಅಪಘಾತಗಳಾಗಿವೆ, ಹಿಂದಿನ ಕೆಲವು ದಿನಗಳಲ್ಲಿ ರಸ್ತೆ ಅಪಘಾತಕ್ಕೆ ನಾಲ್ಕು ಜನ ಸ್ಥಳದಲ್ಲೆ ಸಾವನ್ನಪ್ಪಿದ್ದು ಕಣ್ಣಿಗೆ ಮಾಸದಂತಾಗಿದೆ.

ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಅಕ್ಕ ಪಕ್ಕದ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸರ್ಕಾರಿ ಪಾಲಿಟೆಕ್ಣಿಕ ಕಾಲೇಜಿನಿಂದ ಮಾರಬನಹಳ್ಳಿಗ್ರಾಮಕ್ಕೆ ತೆರಳಲು ಮೇಲಸೇತುವೆ ನಿರ್ಮಾಣ ಮಾಡಲು ಶಿಕ್ಷಣ ಪ್ರೇಮಿಗಳಾದ, ಅಭಿವೃದ್ಧಿ ಹರಿಕಾರರಾದ ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಮಾನ್ಯ ಡಾ!! ಎನ್ ಟಿ ಶ್ರೀನಿವಾಸ ಇವರ ಮೂಲಕ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ, ಸಂಭಂದ ಪಟ್ಟ ಹಿರಿಯ ಅಧಿಕಾರಿಗಳಿಗೆ ತಾಲ್ಲೂಕಿನ ಅನೇಕ ಸಂಘಟನೆಗಳು, ಗ್ರಾಮಸ್ಥರು, ಪ್ರಜ್ಞಾವಂತ ನಾಗರಿಕರಿಂದ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲು ಮನೆ.ಕೂಡ್ಲಿಗಿ