12 ರಿಂದ ಎಸ್.ಎಸ್.ಎಲ್. ಸಿ ಪೂರಕ ಪರೀಕ್ಷೆ.
ಇಂಡಿ ಜೂನ್.11

ಪಟ್ಟಣದ ಶ್ರೀ ಶಾಂತೇಶ್ವರ ಮಾಧ್ಯಮಿಕ ಶಾಲೆಯಲ್ಲಿ ಜೂ.12 ರಿಂದ ಎಸ್. ಎಸ್. ಎಲ್. ಸಿ ಪೂರಕ ಪರೀಕ್ಷೆಗಳನ್ನು ನಕಲು ಮುಕ್ತವಾಗಿ ನಡೆಸುವಂತೆ ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.ಪಟ್ಟಣದ ಶ್ರೀ ಶಾಂತೇಶ್ವರ ಮಾಧ್ಯಮಿಕ ಶಾಲೆಯಲ್ಲಿ ನಡೆದ ಎಸ್. ಎಸ್. ಎಲ್. ಸಿ ಪೂರಕ ಪರೀಕ್ಷೆ ಸಭೆಯಲ್ಲಿ ಸಿದ್ಧತೆ ಕುರಿತು ಮಾತನಾಡಿದರು. ಪರೀಕ್ಷೆಗೆ 178 ವಿದ್ಯಾರ್ಥಿಗಳ ನೊಂದಣಿ ಮಾಡಿಕೊಂಡಿದ್ದು ಪರೀಕ್ಷೆಗೆ ಸ್ಥಾನಿಕ ಜಾಗೃತ ದಳ ನೇಮಿಸಿದ್ದು, ಸ್ವಚ್ಛತೆ,ಕುಡಿಯುವ ನೀರು,ಶೌಚಾಲಯ ಸೇರಿದಂತೆ ಮೂಲ ಸೌಲಭ್ಯಗಳ ಬಗ್ಗೆ ಪರಿಶೀಲಿಸಲಾಗಿದೆ ಎಂದರು.ಕೊಠಡಿಯಲ್ಲಿ ಮೊಬೈಲ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ಸ್ ವಸ್ತು ನಿಷೇಧಿಸಲಾಗಿದೆ. ಕೇಂದ್ರದ ಸುತ್ತ 200 ಮೀ ಪ್ರದೇಶ ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವದೆಂದು ತಿಳಿಸಿದರು.ಜೂನ್12 ರಂದು ಪ್ರಥಮ ಭಾಷೆ, 13 ರಂದು ವಿಜ್ಞಾನ, 14 ರಂದು ದ್ವೀತಿಯ ಭಾಷೆ,15 ರಂದು ಸಮಾಜ ವಿಜ್ಞಾನ,16 ರಂದು ತೃತೀಯ ಭಾಷೆ, 17 ರಂದು ಗಣಿತ ವಿಷಯ ಪರೀಕ್ಷೆ ನಡೆಯುವದೆಂದು ತಿಳಿಸಿದರು. ಕಸ್ಟೋಡಿಯನ್ ಬಿ.ಎಸ್.ಹಿರೇಮಠ,ಮುಖ್ಯ ಅಧೀಕ್ಷಕ ಎ.ಪಿ.ಭಿರಡೆ ಗುರುಗಳು ಮತ್ತಿತರಿದ್ದರು.