ಫೆ.11 ರಿಂದ ಸಂವಿಧಾನ ಜಾಗೃತಿ ಜಾಥಾ ಹಬ್ಬದಂತೆ ಆಚರಣೆಗೆ ತೀರ್ಮಾನ – ನಿಂಗಪ್ಪ ಬಿರಾದಾರ.
ಹುನಗುಂದ ಫೆಬ್ರುವರಿ.8

ಭಾರತದ ಸಂವಿಧಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಹಶೀಲ್ದಾರ ನಿಂಗಪ್ಪ ಬಿರಾದಾರ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ದಲಿತರ ಪರ ಸಂಘಟನೆಗಳ ಸಹಯೋಗದಲ್ಲಿ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು,ಹುನಗುಂದ ಮತ್ತು ಇಳಕಲ್ ತಾಲ್ಲೂಕುಗಳಲ್ಲಿ ಫೆ. ೧೧ ರಿಂದ ೨೩ ವರಗೆ ಒಟ್ಟು ಹನ್ನೊಂದು ದಿನಗಳ ಕಾಲ ಸಂವಿಧಾನ ಜಾಗೃತಿ ಜಾಥಾ ನಡೆಯಲಿದೆ.ಫೆ. ೧೧ ರಂದು ಮೊದಲನೆಯ ದಿನ ಚಿಮ್ಮಲಗಿ ಗ್ರಾಮದಿಂದ ಚಿಕನಾಳ ಗ್ರಾಮದಲ್ಲಿ ಜಾಥಾಕ್ಕೆ ಸ್ವಾಗತ ಕೊರಲಾಗುವುದು.ಹದಿಮೂರನೆಯ ದಿನ ಕೂಡಲ ಸಂಗಮದಲ್ಲಿ ಜಾಥಾ ಕೊನೆ ಗೊಳ್ಳಲಿದೆ. ಗ್ರಾಮ ಪಂಚಾಯತ ಅಧಿಕಾರಿಗಳು ಗ್ರಾಮ ಪಂಚಾಯತ ಕೆಂದ್ರಗಳಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮ ನಡೆಸಲು ಮಾರ್ಗದರ್ಶಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಂವಿಧಾನದ ಕುರಿತು ಹೇಳುವ ಭಾಷಣವು ಜಾತೀಯತೆ, ಅಸ್ಪೃಶ್ಯತೆ ಮುಂತಾದ ಅಂಶಗಳ ಬಗ್ಗೆ ಅತ್ಯಂತ ಜಾಗ್ರತೆಯಿಂದ ಕೂಡಿದ್ದು, ಸಮಾಜದ ಯಾವುದೇ ವ್ಯಕ್ತಿ,ಸಂಘಟನೆ,ಧರ್ಮ, ಜಾತಿಗಳಿಗೆ ಕಿಂಚಿತ್ತು ನೋವಾಗದಂತೆ ಸಂವಿಧಾನದ ಆಶಯಗಳ ಮೆಲೆ ಬೆಳಕು ಚೆಲ್ಲುವಂತೆ ಇರಬೇಕು.ಕರ್ನಾಟಕ ಸಂಭ್ರಮ ೫೦ ಯಾತ್ರೆಯನ್ನು ಕೂಡಲ ಸಂಗಮದಲ್ಲಿ ಫೆ.೧೨ ರಂದು ಹಮ್ಮಿಕೊಳ್ಳಲಾಗಿದೆ ಎಂದರು.ತಾ.ಪಂ ಇ.ಓ ಮುರುಳೀಧರ ದೇಶಪಾಂಡೆ ಮಾತನಾಡಿ, ಎಲ್ಲರೂ ಸೇರಿಕೊಂಡು ಸಂವಿಧಾನ ಜಾಗೃತಿ ಜಾಥಾವನ್ನು ಹಬ್ಬದಂತೆ ಆಚರಿಸೋಣ.
ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿನ ಎಲ್ಲ ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಪಠಣ, ಸಂವಿಧಾನ ಕುರಿತು ಭಾಷಣ, ಪ್ರಬಂಧ, ಚಿತ್ರಕಲೆ ಸ್ಪರ್ಧೆಗಳನ್ನು ಏರ್ಪಡಿಸಿ ಕಾರ್ಯಕ್ರಮ ದಿನದಂದು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಬೇಕು ಸ್ತಬ್ದ ಚಿತ್ರದ ಮೆರವಣಿಗೆ,ಬೀದಿ ನಾಟಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.ಯುವ ಮುಖಂಡ ಶಾಂತಕುಮಾರ ಮೂಕಿ ಸಂವಿಧಾನ ಜಾಗೃತಿ ಜಾಥಾ ಸಂದರ್ಭದಲ್ಲಿ ಸರ್ಕಾರದ ಯೋಜನೆಗಳನ್ನು ಪ್ರಚಾರ ಮಾಡುವುದು ಏಕೆ ? ಎಂದು ಸಭೆಯಲ್ಲಿದ್ದ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ (ಗ್ರೇಡ್ ೨) ಎಂ.ಎಚ್.ಕಟ್ಟಿಮನಿ,ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ, ಎಸ್.ಕೆ. ಕೊನೆಸಾಗರ, ಸಿದ್ದಲಿಂಗಪ್ಪ ಬೀಳಗಿ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ