ಮಾರಿಕಾಂಬ ದೇವಸ್ಥಾನದಲ್ಲಿ ಹೈಮಾಸ್ – ದೀಪ ಉದ್ಘಾಟನೆ.
ನೀರಮಾನ್ವಿ ಜು.16

ಮಾನ್ವಿ ಸಮೀಪದ ನೀರಮಾನ್ವಿ ಗ್ರಾಮದಲ್ಲಿ ಶ್ರೀ ರಾಜ ಅಮರೇಶ್ವರ ನಾಯಕ ಮಾಜಿ ಲೋಕಸಭಾ ಸದಸ್ಯರು ರಾಯಚೂರು ಇವರ 2023- 24 ನೇ. ಸಾಲಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಡಿ ನಿರ್ಮಿಸಲಾದ ಹೈಮಾಸ್ ವಿದ್ಯುತ್ ದೀಪ ಶ್ರೀ ಮಾರಿಕಾಂಬಾ ದೇವಸ್ಥಾನ ದಲ್ಲಿ ಗ್ರಾಮದ ಹಿರಿಯ ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮಾಜಿ ಸದಸ್ಯರು ಹಾಗೂ ಶ್ರೀ ರಾಜ ಅಮರೇಶ್ವರ ನಾಯಕ್ ಅಭಿಮಾನಿ ಬಳಗ ನೀರಮಾನ್ವಿ ಉಪಸ್ಥಿತಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಉದ್ಘಾಟಿಸಿದರು.
ನಂತರ ಗ್ರಾಮದ ಮುಖಂಡರಾದ ಮಲ್ಲಪ್ಪ ಹೂಗಾರ್ ಮಾತನಾಡಿ ನಮ್ಮ ಸಂಸದರು ಈ ಮೊದಲು ಕಲ್ಮಲಾ ಕ್ಷೇತ್ರದ ಶಾಸಕರಾಗಿದ್ದಾಗ ನಮ್ಮ ಗ್ರಾಮಕ್ಕೆ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದ್ದು ಹಾಗೆ ಎಲ್ಲಾ ರೀತಿಯ ಸೌಲಭ್ಯವನ್ನು ರಾಜ್ಯ ಸರ್ಕಾರದಿಂದ ಒದಗಿಸಿದ್ದರು. ಇದಾದ ನಂತರ ಅಮರೇಶ್ ನಾಯಕರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ನೀರಮಾನ್ವಿ ಗ್ರಾಮದ ಮತದಾರರು 1362 ಪ್ರಚಂಡ ಬಹುಮತ ನೀಡಿದ್ದರು.
ಗ್ರಾಮದ ಬೇಡಿಕೆ ಇತ್ತು ಹೀಗಾಗಿ ಶ್ರೀ ಮಾರಿಕಾಂಬ ದೇವಸ್ಥಾನದ ಸುತ್ತಮುತ್ತ ರಾತ್ರಿ ಸಮಯದಲ್ಲಿ ಬಹಳ ಕತ್ತಲೆ ಇರುವುದು ಸಂಸದರ ಗಮನಕ್ಕೆ ಗ್ರಾಮದ ಹಿರಿಯರು ತಂದಾಗ ಹೈಮಾಸ್ ದೀಪ ಮಂಜೂರಿ ಮಾಡಿದರು ಈಗ ಗುಡಿ ಹತ್ತಿರ ರಾತ್ರಿ ಸಮಯದಲ್ಲಿ ಬೆಳಕು ಇರುವುದರಿಂದ ಭಕ್ತಾದಿಗಳಿಗೆ ಅನುಕೂಲವಾಗಲಿದೆ ಸಮಯಕ್ಕೆ ಸರಿಯಾಗಿ ದೀಪವನ್ನು ಹಚ್ಚುವುದು ಮತ್ತು ಶಾಂತಿ ಮಾಡುವುದು ನಿಮ್ಮ ಕೈಯಲ್ಲಿದೆ ನಂತರ ಊರಿನ ಮುಖಂಡರು ಎಲ್ಲರಿಗೂ ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದರು.
ಈ ಒಂದು ಕಾರ್ಯಕ್ರಮದಲ್ಲಿ ದೇವಸ್ಥಾನದ ಅರ್ಚಕರು ಗ್ರಾಮದ ಎಲ್ಲಾ ಸಮುದಾಯದ ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮಾಜಿ ಸದಸ್ಯರು ಹಾಜರಿದ್ದು ಕಾರ್ಯಕ್ರಮ ಯಶಸ್ವಿ ಗೊಳಿಸಿದರು ಎಂದು ವರದಿಯಾಗಿದೆ.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್ ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ