ಮಾ.9 ರಂದು ಸುಳ್ಳು ಹೇಳುವುದರಲ್ಲಿ ಯಾರು ನಿಸ್ಸೀಮರು ಗಂಡನಿಗೆ….? ಹೆಂಡತಿಯೋ….? ಹರಟೆ ಕಾರ್ಯಕ್ರಮ.
ಹುನಗುಂದ ಮಾರ್ಚ್.7

ಪಟ್ಟಣದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ ಹಾಗೂ ಹೊನ್ನಗುಂದ ಸಂಸ್ಕೃತಿ ಬಳಗ ಸಹಯೋಗದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾ.೯ ರ ಶನಿವಾರ ದಂದು ವಿಜಯ ಮಹಾಂತೇಶ ಪ್ರೌಢ ಶಾಲೆಯ ಆವರಣದಲ್ಲಿ ಸುಳ್ಳು ಹೇಳುವುದರಲ್ಲಿ ಯಾರು ನಿಸ್ಸೀಮರು ಗಂಡನೋ..? ಹೆಂಡತಿಯೋ..? ಎನ್ನುವ ವಿಷಯದ ಮೇಲೆ ಹರಟೆ ಕಾರ್ಯಕ್ರಮ ಜರುಗಲಿದೆ ಎಂದು ವಿ.ಮ ಸಂಘದ ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟಿ ಹೇಳಿದರು.ಮಂಗಳವಾರ ಪಟ್ಟಣದ ವಿ.ಮ.ವಿ.ವ ಸಂಘದ ಕಾರ್ಯಾಲಯದಲ್ಲಿ ಕರೆದ ಪತ್ರಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು,ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಶ್ರೀಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿಕೊಳ್ಳಲಿದ್ದು.ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ.ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ,ಅಮೀನಗಡದ ಸಂಗಮೇಶ್ವರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಆರ್.ಜಿ.ಸನ್ನಿ.ಹಿರಿಯ ವೈದ್ಯ ಡಾ.ಎನ್.ಆರ್.ವನಕಿ,ಎಸ್.ವಿ.ಎಂ.ಪದವಿ ಕಾಲೇಜು ಪ್ರಾಚಾರ್ಯ ಎಸ್.ಎಸ್.ಅವಟಿ,ಸ್ಪಂದನ ಕಾಲೇಜ ಪ್ರಾಚಾರ್ಯ ಅಮರೇಶ ಕೌದಿ,ಹೊಸಬ ಸದಸ್ಯ ವಾದಿರಾಜ ಗುಡ್ಡದ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಇನ್ನು ಹರಟೆ ಕಾರ್ಯಕ್ರಮದ ಸಭಾಪತಿಗಳಾಗಿ ಡಾ.ವಿಶ್ವನಾಥ ವಂಶಾಕೃತಮಠ ವಹಿಸಲಿದ್ದು.ಡಾ.ನಾಗರತ್ನಾ ಭಾವಿಕಟ್ಟಿ,ಡಾ.ಶಿವಗಂಗಾ ರಂಜನಗಿ,ಕಾವ್ಯಾ ಅಗಸಿಮುಂದಿನ ಹೆಂಡತಿ ಪರವಾಗಿ ಮಾತನಾಡಲಿದ್ದು.ಸಂಗಣ್ಣ ಮುಡಪಲದಿನ್ನಿ,ಚಂದ್ರಶೇಖರ ಹೆಗಡೆ, ಮಹಾಂತೇಶ ಹಳ್ಳೂರ ಗಂಡನ ಪರವಾಗಿ ಮಾತನಾಡಲಿದ್ದಾರೆ.ಪಟ್ಟಣದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕು ಎಂದರು.ಈ ಸಂದರ್ಭದಲ್ಲಿ ಮಹಾಂತೇಶ ಅಗಸಿಮುಂದಿನ,ರವಿ ಹುಚನೂರ,ಅರಣೋದಯ ದುದ್ಗಿ,ಈರಣ್ಣ ಬೊಳಟಗಿ,ವೀರೇಶ ಕುರ್ತಕೋಟಿ,ರಾಜು ಗುಡ್ಡದ,ಇಬ್ರಾಹಿಂ ನಾಯಕ ಸೇರಿದ್ದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ