“ಮಾನವ ಹಕ್ಕುಗಳ ದಿನಾಚರಣೆ” ಪಟ್ಟಣ ಪಂಚಾಯಿತಿ ವತಿಯಿಂದ ಕಿರು ಪುಸ್ತಕದ ಕರ ಪತ್ರಗಳ ವಿತರಣೆ.
ಕೊಟ್ಟೂರು ಡಿಸೆಂಬರ್.10

ಮಾನ್ಯ ಜಿಲ್ಲಾಧಿಕಾರಿಗಳ ಆದೇಶದನ್ವಯ ಕೊಟ್ಟೂರು ಪಟ್ಟಣದ ಹಳೇ ಪಟ್ಟಣ ಪಂಚಾಯಿತಿ ಕಛೇರಿಯ ಹತ್ತಿರ ಹಾಗೂ ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಮುಖ್ಯಾಧಿಕಾರಿಗಳ ನೇತೃತ್ವದಲ್ಲಿ ಎಲ್ಲಾ ಸಿಬ್ಬಂದಿಗಳೊಂದಿಗೆ ಮಾನವ ಹಕ್ಕು ದಿನಾಚರಣೆಯನ್ನು ಭಾನುವಾರ ರಂದು ಆಚರಿಸುವ ಮೂಲಕ *ಮಾನವ ಹಕ್ಕುಗಳ ದಿನಾಚರಣೆಯ ಪ್ರತಿಜ್ಞೆ(Human Rights Day Pledge)* ಯನ್ನು ಮಾಡಲಾಯಿತು.

ಹಾಗೂ ಸುತ್ತ ಮುತ್ತಲಿನ ಸಾರ್ವಜನಿಕರಿಗೆ ಮಾನವ ಹಕ್ಕುಗಳ ಕುರಿತು ಕಿರು ಪುಸ್ತಕಗಳು ಹಾಗೂ ಕರ ಪತ್ರಗಳನ್ನು ನೀಡಿರುವುದು.ಈ ಸಂದರ್ಭದಲ್ಲಿ ಅನುಷಾ, ಪಟ್ಟಣ ಪಂಚಾಯಿತಿ ಆರ್ ಐ ಕೊಟ್ರೇಶ್, ಮುತ್ತಣ್ಣ, ಮಂಜುಣ್ಣ, ಮಹಿಳಾ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು