ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ – ಜನ್ಮ ದಿನ ಆಚರಣೆ.
ಜಕ್ಕಲಿ ಅ.02

ಗದಗ ಜಿಲ್ಲೆ ರೋಣ ತಾಲೂಕಿನ ಜಕ್ಕಲಿಯ ಎಚ್.ಪಿ.ಕೆ.ಜಿ.ಎಸ್. ಬಾಲಕರ ಸರಕಾರಿ ಮಾದರಿ ಕೇಂದ್ರ ಪ್ರಾಥಮಿಕ ಶಾಲೆ ಮತ್ತು ಎಚ್.ಪಿ.ಕೆ.ಜಿ.ಎಸ್ ಸರ್ಕಾರಿ ಹಿರಿಯ ಕನ್ನಡ ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಕಿರಿಯ ಉರ್ದು ಶಾಲೆ ಜಕ್ಕಲಿಯಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಅಂದಪ್ಪ ಮಾದರ ರವರ ಉಪಸ್ಥಿತಿಯಲ್ಲಿ ಶಾಲೆಯ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಮೂರ್ತಿಗೆ ಮತ್ತು ದೇಶದ ಎರಡನೇ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಭಾವ ಚಿತ್ರಗಳಿಗೆ ಪುಷ್ಪ ನಮನ ಮಾಡುವ ಮೂಲಕ ಜಯಂತಿಯನ್ನು ನಿಯಮಬದ್ದವಾಗಿ ಆಚರಿಸಲಾಯಿತು.ಇದೆ ಸಂದರ್ಭದಲ್ಲಿ ಎಚ್.ಪಿ. ಕೆ.ಜಿ.ಎಸ್ ಸರಕಾರಿ ಹಿರಿಯ ಕನ್ನಡ ಹೆಣ್ಣುಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯರು ಎಸ್.ಬಿ ಗವಿ, ಎಚ್.ಪಿ.ಕೆ.ಜಿ.ಎಸ್. ಬಾಲಕರ ಸರಕಾರಿ ಮಾದರಿ ಕೇಂದ್ರ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯನಿ ಎ.ಬಿ ಜಕ್ಕಲಿ. ಶಿಕ್ಷಕರು ವಿ.ಎ ಕುಂಬಾರ್. ಎಮ್.ವಿ ತಾಳಿಕೋಟಿ. ಎ.ಪಿ ಶೆಟ್ಟರ್. ಎಸ್.ಎ ಪಲ್ಲೆದ. ಸಿ.ಎಸ್ ಘೋಡೆಸವಾರ. ವಿ.ಎಸ್ ದಿಂಡೂರ್. ಪಿ.ಜಿ ಹುಯಿಲಗೋಳ. ಎಸ್.ಎಸ್. ಯಲ್ಲರಡ್ಡಿ. ಇನ್ನೂ ಅನೇಕ ಶಿಕ್ಷಕ ಶಿಕ್ಷಕಿಯರು ಹಾಗೂ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರು ಸೇರಿದಂತೆ ಮಕ್ಕಳು ಇನ್ನೂ ಅನೇಕರು ಉಪಸ್ಥಿತರಿದ್ದರು.

