ನಮ್ಮ ಸಂವಿಧಾನದ ಆಶಯವಾಗಿ ಶಿಕ್ಷಣ ಕಲಿಯಬೇಕು ಶಿಕ್ಷಣದಿಂದಲೇ ಬೆಳಕು ಕಾಣಬೇಕೆಂದ ಶಾಸಕರು.
ಮೊಳಕಾಲ್ಮುರು ಫೆಬ್ರುವರಿ.1

ಇಂದು ರಾಂಪುರ ಗ್ರಾಮದ ಎಸ್ ಪಿ ಎಸ್ ಆರ್ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ಮತ್ತು ಪರೀಕ್ಷಾ ಭಯ ನಿವಾರಣೆ ಕಾರ್ಯಕ್ರಮವನ್ನು ಮಾನ್ಯ ಶ್ರೀ ಜನಪ್ರಿಯ ಶಾಸಕರಾದ ಎನ್ ವೈ ಗೋಪಾಲಕೃಷ್ಣ ರವರು ಉದ್ಘಾಟಿಸಿದರು. ಮತ್ತು ಶಾಲೆಯ ವಿದ್ಯಾರ್ಥಿಗಳು ಧೈರ್ಯವಾಗಿ ನೀವು ಪರೀಕ್ಷೆಗಳನ್ನು ಬರೆಯಿರಿ ಚೆನ್ನಾಗಿ ಓದಿ ವಿದ್ಯಾವಂತರಾಗಿರಿ ನಿಮ್ಮ ತಂದೆ ತಾಯಿಗೆ ಕೀರ್ತಿ ತನ್ನಿರಿ ಎಂದು ಒಳ್ಳೆ ಮಾತುಗಳನ್ನು ಆಡುವ ಶಾಸಕರೆಂದರೆ ಅದು ಎನ್ ವೈ ಗೋಪಾಲಕೃಷ್ಣ ಶಾಸಕರು.

ಶಿಕ್ಷಣದ ಮೇಲೆ ಅತಿ ಹೆಚ್ಚು ಒತ್ತು ಕೊಡುವ ಶಾಸಕರು ಏಕೆಂದರೆ ಇವತ್ತು ಸಂವಿಧಾನ ಎಂಬುದು ಶಿಕ್ಷಣದಿಂದಲೇ ಬಂದಿರುತ್ತದೆ ಆ ಸಂವಿಧಾನವನ್ನು ಕಲಿತರೆ ಶಿಕ್ಷಣವೇನು ಎಂಬುದು ನಮಗೆ ಅರ್ಥವಾಗುತ್ತದೆ ಎಂದು ತಿಳಿಸಿದಂತ ಶಾಸಕರು.ಶಿಕ್ಷಣ ಇಲಾಖೆ ಅಧಿಕಾರಿಗಳು ಸಂಸ್ಥೆ ಮುಖ್ಯಸ್ಥರು ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು