ಬಿಸಿ ಊಟದ ಜೊತೆ ಗುಲಾಮ್ – ಜಾಮೂನ್.
ಇಂಡಿ ಡಿಸೆಂಬರ್.14

ತಾಲೂಕಿನ ಅಗರಖೇಡ ಗ್ರಾಮದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರ ಮಕ್ಕಳಿಗೆ ನೀಡುತ್ತೀರುವ ಮಧ್ಯಾಹ್ನ ಬಿಸಿ ಊಟದ ಜೊತೆಯಲ್ಲಿ ಗುಲಾಮ್-ಜಾಮೂನ್ ನೀಡಲಾಗುತ್ತಿದೆ.ವಾರದಲ್ಲಿ ಬೇರೆ ಬೇರೆ ರೀತಿಯ ರುಚಿಕರವಾದ ಜಾಮೂನ್, ಇಡ್ಲಿ, ದೋಸೆ, ಮಸಾಲಾರೈಸ್, ಪುಲಾವ, ಹೀಗೆ ವಿಧ-ವಿಧವಾದ ಭೋಜನವನ್ನು ಇಲ್ಲಿ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ನೀಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ. ನಮ್ಮ ಶಾಲೆಗೆ ಬರುವಂತಹ ವಿದ್ಯಾರ್ಥಿನಿಯರು ತುಂಬ ಬಡ ಕುಟುಂಬ ದಿಂದ ಬಂದವರಾಗಿದ್ದು ಆ ಮಕ್ಕಳ ಎಳ್ಗೆ ಗೋಸ್ಕರ ದಿನಾಲು ಶಾಲೆಗೆ ಬರುವಿಕೆಗಾಗಿ ಮಕ್ಕಳಲ್ಲಿ ಶಾಲೆಯ ಮೇಲೆ ಆಕರ್ಷಿಸಲು ಬಗೆ-ಬಗೆಯ ತಿಂಡಿ ತಿನಿಸುಗಳು ಮಾಡಿಸಿ ಊಟಕ್ಕೆ ನೀಡುವುದರಿಂದ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚಳವಾಗಿದೆ ಎಂದು ಶಾಲೆಯ ಮುಖ್ಯ ಗುರುಗಳು ಎಸ್ ಬಿ ರಾವಜಿ ಅವರು ಹೇಳಿದರು. ಇದರಿಂದ ಕಲಿಕೆಯಲ್ಲಿ ಪ್ರಗತಿ ಹೊಂದಲು ಅನುಕೂಲವಾಗಿತ್ತಿದೆ ಎಂದರು.ಬಿ ಕೆ ಬಿರಾದಾರ, ಎಸ್ ಎ ಚಪ್ಪರಬಂದ, ಪಿ ಎಸ್ ಭಜಂತ್ರಿ, ಬಿ ಎಲ್ ಶಿವಶರಣ, ಪಿ ಬಿ ಕರತಮಳ, ಆರತಿ ಆಳೂರ, ಸುಜಾತ ಗಬಸಾವಳಗಿ, ಅರುಣ ಹೋಟಗಾರ, ಹಾಗೂ ಅಡುಗೆ ಸಿಬ್ಬಂದಿಗಳಾದ ಗಂಗಾಬಾಯಿ ಖೇಡ, ಶೀಲವಂತಿ ಕೋಕರೆ, ಮಲ್ಲಮ್ಮ ಸಿಂಗೆ, ಶ್ರೀದೇವಿ ಸುಬಾನಗೋಳ ಮತ್ತಿತರಿದ್ದರು.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ