ಪಟ್ಟಣದ ಎಂ.ಕೆ ಕಾಲೋನಿಯ ಭಕ್ತ ವೃಂದ ಡಿ.ಜೆ ಸಂಗೀತಕ್ಕೆ ಸ್ಟೆಪ್ಸ್ ಹಾಕಿ ಕುಣಿದು ಕುಪ್ಪಳಿಸಿ ಗಣೇಶನನ್ನು ಬೀಳ್ಕೊಟ್ಟು ವಿಸರ್ಜಿಸಿದರು.
ಮರಿಯಮ್ಮನಹಳ್ಳಿ ಸ.17

ಪಟ್ಟಣದ ಎ.ಕೆ. ಕಾಲೋನಿಯಲ್ಲಿ ಗಣೇಶನ ವಿಗ್ರಹವನ್ನು ಗಣೇಶ ಚತುರ್ಥಿಯೆಂದು ಕೂರಿಸಲಾಗಿತ್ತು. ಭಾನುವಾರ ರಾತ್ರಿ 9 ನೇ. ದಿನಕ್ಕೆ ಅಪಾರ ಭಕ್ತ ವೃಂದ ಸೇರಿ ಗಣೇಶನ ಬೀಳ್ಕೊಡುವ ಸಂಧರ್ಭದಲ್ಲಿ ಡಿ.ಜೆ ಸಂಗೀತದ ಹಾಡುಗಳಿಗೆ ಹಿರಿಯರು, ಯುವಕ-ಯುವತಿಯರು ಮಹಿಳೆಯರೆನ್ನದೆ ಭರ್ಜರಿ ಸ್ಟೆಪ್ಸ್ ಹಾಕಿದರು. ಈ ಸಂಧರ್ಭದಲ್ಲಿ ಭಕ್ತ ಸಾಗರ ಸಂತೋಷದಲ್ಲಿ ಮಿಂದೆದ್ದರು. ಭಕ್ತ ವೃಂದ ಕುಣಿದು ಕುಪ್ಪಳಿಸಿದ್ದು ರೋಮಾಂಚನ ಗೊಳಿಸಿತು.

ಗಣೇಶ ಮಂಡಳಿಯವರಾದ ಜಿ. ಪರುಶುರಾಮ, ಎಲ್. ಹನುಮಂತ, ಮಾಳಗಿ ಪ್ರಕಾಶ, ಬಿ.ಗಂಗಾಧ, ಎಲ್.ಬಿ. ಮಂಜುನಾಥ, ಪೈಲ್ವಾನ್ ಹನುಮಂತ, ಎಂ.ಅಂಜಿನಿ, ಎಲ್.ಪ್ರಹಲ್ಲಾದ ಇನ್ನಿತರರು ಯಾವುದೇ ಅಹಿತಕರ ಘಟನೆ ಜರುಗದಂತೆ ವಾಲೆಂಟರ್ ಗಳಾಗಿ ಹಲವಾರು ಯುವಕರು ಸ್ವಯಂ ಪ್ರೇರಣೆಯಿಂದ ಭಾಗವಹಿಸಿ ಪೊಲೀಸ್ ಇಲಾಖೆಯ ಸೂಚನೆ ಮೇರೆಗೆ ಬೀಳ್ಕೊಟ್ಟರು.ಈ ಸಂಧರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು, ಭದ್ರತೆಗಾಗಿ ಸಿ.ಪಿ.ಐ ವಿಕಾಸ್ ಲಮಾಣಿ ನೇತೃತ್ವದಲ್ಲಿ ಪಿ.ಎಸ್.ಐ ಮೌನೇಶ್ ರಾಥೋಡ್, ಬಿ.ಬೀ, ಮರೇಮ್, ಎ.ಎಸ್.ಐ ರೂಪ್ಲಾನಾಯ್ಕ್, ಪಿ.ಸಿ. ಪರುಶುರಾಮ್ ಇತರ ಸಿಬ್ಬಂದಿಗಳು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ