ಪುರ ಸಭೆಯಲ್ಲಿ ಎಸ್.ಪಿ/ & ಟಿ.ಎಸ್ .ಪಿ ಅನುದಾನದಲ್ಲಿ ಜೆಸಿಬಿ & ಹಿಟ್ಯಾಚಿ ಖರೀದಿ – ದಲಿತರ ಆರೋಪ.
ಹುನಗುಂದ ಡಿಸೆಂಬರ್.15

ಪಟ್ಟಣದ ಪುರಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ದಿಗೆ ಮೀಸಲಿರಿಸಿದ ಎಸ್.ಸಿ.ಪಿ ಮತ್ತು ಟಿಎಸ್‌ಪಿ ಅನುದಾನದಲ್ಲಿ ಜೆಸಿಬಿ ಮತ್ತು ಹಿಟ್ಯಾಚ್ ಖರೀದಿಯ ಮಾಡುವ ಮೂಲಕ ಪುರಸಭೆ ಅಧಿಕಾರಿಗಳು ಪರಿಶಿಷ್ಟರ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದಲಿತ ಮುಖಂಡ ರಾಜು ಈಟಿ ಸಭೆಯಲ್ಲಿ ಆರೋಪಿಸಿದರು. ಗುರುವಾರ ಪಟ್ಟಣದ ತಾಲೂಕಾಡಳಿತ ಸಭಾಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ,ತಾಲ್ಲೂಕು ಪಂಚಾಯತಿ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ತಹಶೀಲ್ದಾರ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಯಲ್ಲಿ ಪ್ರತಿಯೊಂದು ಇಲಖೆಯಲ್ಲಿ ಎಸ್.ಸಿ.ಪಿ ಮತ್ತು ಟಿಎಸ್‌ಪಿ ಅನುದಾನ ಬೇರೊಂದು ಕಾಮಗಾರಿಗಳಿಗೆ ವರ್ಗಾವಣೆಯಾಗುತ್ತಿದೆ,ಇದರಿಂದ ದಲಿತರ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ದಲಿತ ಮುಖಂಡರು ಅಸಮದಾನ ಹೊರ ಹಾಕಿದರು..ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸ್ಮಶಾನವಿಲ್ಲ. ಅಂತ್ಯ ಸಂಸ್ಕಾರಕ್ಕೆ ಪರದಾಡುವಂತಾಗಿದೆ ಎಂದು ಸಮಾಜದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.ತಾಲೂಕಿನಾಧ್ಯಂತ ಅನೇಕ ಗ್ರಾಮಗಳಲ್ಲಿ ಇನ್ನು ಅಸ್ಪೃಶ್ಯತೆ ತಾಂಡವಾಡುತ್ತಿದ್ದರೂ ಕೂಡಾ ಸಂಬAದಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅತ್ತ ಗಮನ ಹರಿಸುತ್ತಿಲ್ಲ.ಇಲ್ಲಿವರಿಗೂ ಎಸ್.ಸಿ ಮತ್ತು ಎಸ್.ಟಿ ಸಮುದಾಯದ ಕುಂದು ಕೊರತೆ ಸಭೆ ನಡೆದಿಲ್ಲ.ಪ್ರತಿ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಜನಾಂಗಕ್ಕೆ ಯಾವ ಸೌಲಭ್ಯಗಳಿವೆ ಎನ್ನುವ ಮಾಹಿತಿಯನ್ನು ಯಾವ ಇಲಾಖೆಗಳ ಅಧಿಕಾರಿಗಳು ನೀಡುತ್ತಿಲ್ಲ ಅದರ ಕುರಿತು ಒಂದು ಸಭೆಯೂಕೂಡಾ ಇಲ್ಲಿವರಗೂ ತಾಲೂಕಿನಲ್ಲಿ ನಡೆದಿಲ್ಲ.ಕೇವಲ ಕಾಟಾಚಾರಕ್ಕೆ ಸಭೆಗಳನ್ನು ನಡೆಸಿ ಮೇಲಾಧಿಕಾರಿಗಳಿಗೆ ವರದಿ ಒಪ್ಪಿಸುವ ಕಾರ್ಯವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ದಲಿತ ಮುಖಂಡರಾದ ಮಲ್ಲಿಕಾರ್ಜುನ ಹೊಸಮನಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.ರಾಮವಾಡಗಿ, ಹಗೇದಾಳ ಸೇರಿದಂತೆ ಇತರೆ ಕಡೆಗಳಲ್ಲಿ ವಾಲ್ಮೀಕಿ,ಡಾ.ಅಂಬೇಡ್ಕರ್ ಹಾಗೂಡಾ.ಬಾಬು ಜಗಜೀವನರಾಮ ಭವನಗಳ ಕಾಮಗಾರಿ ಪೂರ್ಣಗೊಂಡಿಲ್ಲ.ಪೂರ್ಣಗೊAಡ ಭನವಗಳು ಕುಸಿದು ಬಳಕೆಗೆ ಯೋಗ್ಯವಾಗಿಲ್ಲ ಎಂದು ದಲಿತ ಮುಖಂಡರು ತಿಳಿಸಿದರು.ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯ್ತಿಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅನುದಾನವನ್ನು ಬಳಕೆ ಮಾಡಿಲ್ಲ. ಸಮುದಾಯದ ಮೂರ್ನಾಲ್ಕು ಮುಖಂಡರನ್ನು ಸೇರಿಸಿಕೊಂಡು ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಬಿಲ್ ಎತ್ತುವ ಕಾರ್ಯ ನಡೆಯುತ್ತಿದೆ ಜೊತಗೆಎಸ್.ಸಿ ಮತ್ತು ಎಸ್.ಟಿ ಅನುದಾನದಲ್ಲಿ ಅಮರಾವತಿ ಮತ್ತು ನಾಗೂರ ಗ್ರಾಮಗಳಲ್ಲಿ ಅನ್ಯ ಸಮುದಾಯದ ಕಾಲೊನಿಗಳಿಗೆ ನಮ್ಮ ಅನುದಾನ ಬಳಕೆ ಮಾಡುತ್ತಿದ್ದು, ನೀವು ಏನು? ಕ್ರಮಕೈಗೊಂಡಿದ್ದೀರಿ ಎಂದು ತಾಲ್ಲೂಕು ಪಂಚಾಯತ ಇಒ ಮುರುಳಿ ದೇಶಪಾಂಡೆ ಅವರನ್ನು ಮುಖಂಡ ಸಂಗಪ್ಪ ಚಲವಾದಿ ಮತ್ತು ರಮೇಶ ದೊಡಮನಿ ಪ್ರಶ್ನೆಸಿದರು.ತಾಲ್ಲೂಕಿನ ಒಳಕಲದಿನ್ನಿ ಗ್ರಾಮದಲ್ಲಿ ಎಸ್.ಸಿ. ಸಮುದಾಯದ ಕುಟುಂಬವೊAದು ಈ ಮೊದಲು ಆಶ್ರಯ ಮನೆಯಲ್ಲಿ ವಾಸವಿತ್ತು.ಪ್ರವಾಹದಿಂದ ಮನೆ ಹಾಳಾಗಿದ್ದು,ಆ ಜಾಗದಲ್ಲಿ ಹೊಸ ಮನೆ ನಿರ್ಮಿಸಲು ಗ್ರಾಮದ ಕೆಲವರು ಅವಕಾಶ ಮಾಡಿಕೊಡುತ್ತಿಲ್ಲ. ಈಗ ಅವರು ಬಾಣಂತಿಯೊAದಿಗೆ ಗುಡಿಯಲ್ಲಿ ಆಶ್ರಯ ಪಡೆದಿದ್ದಾರೆ ಎಂದು ದಲಿತ ಯುವ ಮುಖಂಡ ಶಾಂತಕುಮಾರ ಮೂಕಿ ಸಭೆ ತಿಳಿಸಿದಾಗ ತಹಶೀಲ್ದಾರ ಹಾಗೂ ತಾಲ್ಲೂಕು ಪಂಚಾಯ್ತಿ ಇಒ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.ಸಮಾಜ ಕಲ್ಯಾಣ ಅಧಿಕಾರಿ ಮಲ್ಲಿಕಾರ್ಜುನ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ಪಿ.ಕೆ.ಗುಡದಾರಿ, ಬಿಇಒ ಜಾಸ್ಮಾಇನ್ ಕಿಲ್ಲೇದಾರ,ಮುಖಮಡರಾದ ವಿಜಯ ಬಾವಿಕಟ್ಟಿ, ಶ್ರೀಕಾಂತ ಚಲವಾದಿ,ಕೃಷ್ಣ ಜಾಲಿಹಾಳ,ಸಿದ್ದಪ್ಪ ಜಾಲಿಗಿಡದ,ಮುತ್ತಣ್ಣ ಮರ್ಜಿ,ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ