ವಿವಿಧ ಬೇಡಿಕೆ ಆಗ್ರಹಿಸಿ ಹಲವು ಸಂಘಟನೆಗಳಿಂದ ಅನಿರ್ದಿಷ್ಟಾವಧಿ ಧರಣಿ.
ಕೊಟ್ಟೂರು ಡಿಸೆಂಬರ್.15

ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಹಲವು ಸಂಘಟನೆಗಳು ಅನಿದಿಷ್ಟವಧಿ ಧರಣಿ ಸತ್ಯಾಗ್ರಹವನ್ನು ಶುಕ್ರವಾರ ದಂದು ಕೊಟ್ಟೂರು ತಾಲೂಕು ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಅನಿದಿಷ್ಟವಧಿ ಧರಣಿ ಹಾಗೂ ಸತ್ಯಾಗ್ರಹ ನಡೆಸುತ್ತಿದ್ದಾರೆ.ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಸಾಮೂಹಿಕ ಸಂಘಟನೆಗಳಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು. ಹಲವು ಸಂಘಟನೆಗಳಾದ ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಎನ್ ಮೂರ್ತಿ ಸ್ಥಾಪಿತ), ದಲಿತ ಸಂಘರ್ಷ ಸಮಿತಿ (ಪ್ರೊ ಕೃಷ್ಣಪ್ಪ ಸ್ಥಾಪಿತ) , ಸಿ.ಪಿ.ಐ. (ಎಂ.ಎಲ್ ) ಲಿಬರೆಷನ್, ಐರ್ಲಾ, ಐಸ್, ಆರ್‌ಟಿಐ, ಕರ್ನಾಟಕ ರಾಜ್ಯ ರೈತ ಸಂಘ, ಅಖಿಲ ಕರ್ನಾಟಕ ಕುಳುವ ಮಹಾ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇನ್ನಿತರ ಸಂಘ ಸಂಸ್ಥೆಗಳಿಂದ ಸಂಯುಕ್ತ ಆಶ್ರಯದಲ್ಲಿ ಅನಿದಿಷ್ಟವಧಿ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ. ಈ ಧರಣಿಗೂ ಮುನ್ನ ಸಿಪಿಐ (ಎಂ ಎಲ್) ಕೊಟ್ಟೂರು ಘಟಕದ ಕಾರ್ಯದರ್ಶಿಗಳಾದ ಜಿ ಮಲ್ಲಿಕಾರ್ಜುನ್ ಅವರು ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮಾತನಾಡಿದರು ಕೊಟ್ಟೂರು ತಾಲೂಕು ಪಂಚಾಯತಿಯಲ್ಲಿ ಅತ್ಯಂತ ದೊಡ್ಡ ಭ್ರಷ್ಟಾಚಾರವೇ ನಡೆಯುತ್ತಿದೆ ಇದರ ಬಗ್ಗೆ ಸಾಕಷ್ಟು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದರು ಯಾವುದೇ ರೀತಿ ಕ್ರಮ ತೆಗೆದುಕೊಳ್ಳುತ್ತಿಲ್ಲ ಕೊಟ್ಟೂರು ತಾಲೂಕಿಗೆ 14 ಗ್ರಾಮ ಪಂಚಾಯತಿಗಳು ಒಳಪಡುತ್ತದೆ ಯಾವುದೇ ಗ್ರಾಮ ಪಂಚಾಯತಿಗೆ ಹೋದರು ಜನರಿಗೆ ಮೂಲ ಸೌಕರ್ಯಗಳಾದ ಕುಡಿಯುವ ನೀರು ಚರಂಡಿ ಸಿ.ಸಿ ರಸ್ತೆ ಯಾವುದು ಅಭಿವೃದ್ಧಿ ಕಾರ್ಯಗಳು ಹಾಗೂ ಮೂಲ ಸೌಕರ್ಯಗಳು ಮರೀಚಿಕೆಯಾಗಿದೆ.ತೂಲಹಳ್ಳಿ ಗ್ರಾಮದ ನಿರ್ಮಲ ಗಂಡ ಮೂರ್ತಪ್ಪ ಅತಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು ಅವರಿಗೆ ವಸತಿ ಯೋಜನೆಯಲ್ಲಿ ವಸತಿ ಸೌಲಭ್ಯ ಒದಗಿಸಬೇಕು. ಮತ್ತು ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸುಟ್ಟು ಕೊಡಳ್ಳಿ ಗ್ರಾಮದಲ್ಲಿ ಸುಮಾರು 20 ವರ್ಷಗಳ ಕಾಲ ಗುಡಿಸಿಲಲ್ಲಿ ಜೀವನ ನಡೆಸುತ್ತಿದ್ದಾರೆ ವಸತಿ ಸೌಲಭ್ಯಗಳು ದೊರೆತಿಲ್ಲ ಅಂತವರಿಗೆ ಸರ್ವೆ ಮಾಡಿ ವಸತಿ ಸೌಲಭ್ಯ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಡಿಯಲ್ಲಿ ಅಧಿಕಾರಿಗಳು ನಕಲಿ ದಾಖಲಾತಿ ಸೃಷ್ಟಿ ಬಿಲ್ ಗಳನ್ನು ಪಾವತಿಸಿ ಕೊಳ್ಳುತ್ತಿದ್ದಾರೆ ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದು ಕೊಳ್ಳಬೇಕೆಂದು ಆಗ್ರಹಿಸಿದರು.ನಂತರ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಟ್ಟೂರು ತಾಲೂಕು ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಮಾತನಾಡಿ ಕೊಟ್ಟೂರು ತಾಲೂಕು ಪಂಚಾಯಿತಿ ಗ್ರೇಡ್ ಒನ್ ಕಾರ್ಯದರ್ಶಿಗಳಾದ ರೂಪ ಮತ್ತು ಡಾಟಾ ಆಪರೇಟರ್ ಮೋಹನ್ ರವರ ಮೇಲೆ ಹಲವಾರು ಪತ್ರಿಕೆಗಳಲ್ಲಿ ಲಂಚದ ಆರೋಪ ಕೇಳಿ ಬಂದಿದೆ ಅವರನ್ನು ಅಮಾನತ್ತಿನಲ್ಲಿ ಇಟ್ಟು ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಮುಂದೆ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಸಿಪಿಐಎಂಎಲ್ ಲಿಬ್ರೇಶನ್ ಪಕ್ಷದ ತಾಲೂಕು ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ್,ಭಾರತೀಯ ಮಹಿಳಾ ಕೂಟದ ರಾಜ್ಯ ಕಾರ್ಯದರ್ಶಿಯಾದ ಕೆ ರೇಣುಕಮ್ಮ, ತಿಮ್ಮಪ್ಪ , ರಾಜು ಗೌಡ, ಆರ್ ಅಂಬರೀಶ್, ಹ್ಯಾಳ್ಯಾ ಶಿವಜ್ಜ ,ವಕೀಲರಾದ ಅಂಜಿನಪ್ಪ, ಇತರೆ ಸಂಘಟನೆ ಪದಾಧಿಕಾರಿಗಳಾದ, ಕರಿಬಸಮ್ಮ, ಬಾಲಗಂಗಾಧರ್, ಸುಶೀಲಮ್ಮ, ಕರೀಂ ಹಾಗೂ ಇಂಟಲಿಜೆಂಟ್ ರಿಪೋರ್ಟರ್, ಪೊಲೀಸ್ ಸಿಬ್ಬಂದಿ ಇತರರು ಉಪಸ್ಥಿತರಿದ್ದರು.ಕೊಟ್ -1ವಿಜಯನಗರ ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿಯವರು ಶುಕ್ರವಾರ ಸಂಜೆ ಧರಣಿಯ ಮನವಲಿಸಲು ಪ್ರಯತ್ನಿಸಿದರು ಅವರು ಸಂಘಟನೆಯ ಧರಣಿಯ ಕಾರ್ಯಕರ್ತರಿಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ಧರಣಿಯ ಕಾರ್ಯಕರ್ತರ ಕೆಲವು ಪ್ರಮುಖ ಬೇಡಿಕೆಯನ್ನು ಈಡೇರಿಸಲು ಕೋರಿದರು. ಅಧಿಕಾರಿಗಳು ಬೇಡಿಕೆಗೆ ಒಪ್ಪದಿದ್ದಕ್ಕೆ ಹಗಲು ರಾತ್ರಿಯಲ್ಲೂ ಪ್ರತಿಭಟನೆ ನಿರಂತರವಾಗಿ ನಡೆಯುತ್ತದೆ. ಧರಣಿಯ ಕಾರ್ಯಕರ್ತರಿಗೆ ತಮ್ಮ ಪ್ರಾಣಕ್ಕೆ ಅಪಾಯವಾದರೆ.ಅಧಿಕಾರಿಗಳಿಗೆ ಹೊಣೆ ಎಂದರು . ಮತ್ತು ಸ್ಥಳಕ್ಕೆ ಸಿಇಒ ಆಗಮಿಸಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಧಾರಣೆ ಕಾರ್ಯಕರ್ತರು ಆಗ್ರಿಸಿದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು