ಕೂಡ್ಲಿಗಿ: ಶಾಲೋಮ್ ಪ್ರಾರ್ಥನಾಲಯದಲ್ಲಿ ಕ್ರೀಸ್ ಮಸ್ ಹಬ್ಬದ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ “ರಕ್ತದಾನಿಯೇ ನಿಜವಾದ ಧಣಿ” ಪಾಸ್ಟರ್ ಹೆಚ್.ಪರಶುರಾಮ.
ಕೂಡ್ಲಿಗಿ ಡಿಸೆಂಬರ್.15

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ 16ನೇ ವಾರ್ಡಿನ ಎನ್ಎಚ್ 50 ಪಕ್ಕ ದಲ್ಲಿರುವ, ಶಾಲೋಮ್ ಪ್ರಾರ್ಥನಾಲಯದಲ್ಲಿ ಡಿ-15.ರಂದು ಕ್ರೈಸ್ತ ಸೇವಕರಾದಂತ ಪರಶುರಾಮ್ ಪಾಸ್ಟರ್ ನೇತೃತ್ವದಲ್ಲಿ. ಹಾಗೂ ಕ್ರೈಸ್ತ ಸೇವಕರಾದ ಸರ್ವರ ಸಹಯೋಗದಲ್ಲಿ, ಹಗರಿಬೊಮ್ಮನಹಳ್ಳಿ ಸ್ವಾಮಿ ವಿವೇಕಾನಂದ ರಕ್ತ ಕೇಂದ್ರದ ಸಹ ಭಾಗಿತ್ವದಲ್ಲಿ. ಕ್ರಿಸ್ ಮಸ್ ಹಬ್ಬದ ಪ್ರಯುಕ್ತ, ಸತತ ನಾಲ್ಕನೇ ವರ್ಷದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಸ್ಟರ್ ಹೆಚ್.ಪರಶುರಾಮರವರು, ರಕ್ತದಾನದ ಮಹತ್ವದ ಕುರಿತು ವಿವರಣಾತ್ಮಕವಾಗಿ ಮಾತನಾಡಿದರು. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತರಾಗಿ, “ಯಾವುದೇ ಪ್ರತೀ ಫಲಾಪೇಕ್ಷೆ ಇಲ್ಲದೆ ರಕ್ತದಾನ ಮಾಡುವವರೇ ನಿಜವಾದ ಧಣಿಗಳು” ಎಂದರು. ಪ್ರತಿದಿನಾಲೂ ನಡೆಯುವಂತಹ ನಾನಾ ಘಟನೆಗಳಿಂದ, ಅನೇಕ ರೋಗಗಳಿಗೆ ರಕ್ತದ ಅವಶ್ಯಕತೆ ಇರುವಂತಹ ರೋಗಿಗಳಿಗೆ. ಅಪಘಾತದಲ್ಲಿ ಉಂಟಾದಂತಹ ವ್ಯಕ್ತಿಗಳಿಗೆ, ಗರ್ಭಿಣಿ ಸ್ತ್ರೀಯರಿಗೆ, ಆರೋಗ್ಯದಲ್ಲಿ ತೊಂದರೆ ಆದಂತಹ ಕೆಲವೊಂದು ಸಂದರ್ಭದಲ್ಲಿ. ಚಿಕ್ಕ ಚಿಕ್ಕ ಮಕ್ಕಳಿಗೂ ರಕ್ತದ ಅವಶ್ಯಕತೆ ಇರುವುದರಿಂದ, ರಕ್ತದ ದಾನಿಗಳಿಂದ ಮಾತ್ರ ಇನ್ನೊಬ್ಬರ ವ್ಯಕ್ತಿಗಳನ್ನು ಜೀವ ರಕ್ಷಣೆ ಮಾಡಲು ಸಾಧ್ಯ ಎಂದರು.

ಸ್ವಯಂ ಪ್ರೇರಿತ ರಕ್ತದಾನ ಮಾಡುವುದರಿಂದ ಜೀವದ ರಕ್ಷೆ ಕಾಪಾಡಲು ಸಾಧ್ಯ, ರಕ್ತದಾನ ಮಾಡುವುದರಿಂದ ಅನೇಕ ಪ್ರಯೋಜನಗಳಾಗಲಿವೆ. ರಕ್ತದಾನ ಮಾಡುವುದರಿಂದ ದಾನಿಗಳ ದೇಹದಲ್ಲಿ, ಹೊಸ ರಕ್ತ ಉತ್ಪತ್ತಿಯಾಗಲು ಪ್ರಚೋದನೆ ಆಗುತ್ತದೆ. ದೇಹದಲ್ಲಿ ಹೊಸ ರಕ್ತ ಚಲನೆಯಿಂದ ಕಾರ್ಯ ತತ್ಪರತೆ ಹೆಚ್ಚುತ್ತದೆ, ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ. ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆಯಾಗುತ್ತದೆ, ಹೃದಯಾಘಾತವನ್ನು ಶೇಕಡ 80ಕ್ಕಿಂತಲೂ ಜಾಸ್ತಿ ತಡೆಯಲು ಸಹಾಯವಾಗುತ್ತದೆ. ರಕ್ತದ ಒತ್ತಡ ಇತರೆ ಕೆಲವು ರೋಗಗಳನ್ನು ತಡೆಗಟ್ಟಬಹುದು, ಸೇರಿದಂತೆ ಅನೇಕ ತರಹದಲ್ಲಿ ಸಹಾಯವಾಗುತ್ತದೆ ಎಂದರು. ರಕ್ತದಾನ ಮಾಡಲು ಹೆಣ್ಣು ಗಂಡೆಂಬ ಭೇದವಿಲ್ಲ, 18 ರಿಂದ 60 ವಯೋಮಾನದ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ಗಂಡಸರು 3 ತಿಂಗಳಿಗೊಮ್ಮೆ ಮತ್ತು ಹೆಂಗಸರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು, ರಕ್ತದಾನ ಮಾಡುವಾಗ ದಾನಿಯ ದೇಹದ ತೂಕ 45 ಕೆಜಿ ಗಿಂತ ಎಚ್ಚಿರಬೇಕು, ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಾಂ ಗಿಂತ ಹೆಚ್ಚಿರಬೇಕು.ಸಿಸ್ಟರ್ಲಿಕ್ ರಕ್ತದೊತ್ತಡವು 100 ರಿಂದ 140 ಇದ್ದು, ಡಯಲ್ ಸ್ಟೋಲೈಕ್ ಒತ್ತಡವು 70ರಿಂದ 100 ಇರುವವರು ರಕ್ತದಾನ ಮಾಡಬಹುದೆಂದು ಅವರುಗಳು ತಿಳಿಸಿದರು. ಸರ್ವ ಆರೋಗ್ಯವಂತರು ಹರ್ಷದಿಂದ ರಕ್ತದಾನ ಮಾಡಿ, ಇದರಿಂದ ಜೀವ ಉಳಿಸಿದ ಪುಣ್ಯ ನಿಮ್ಮದಾಗಲಿದೆ. ಕಾರಣ ಸರ್ವ ಸಮಾಜ ಸೇವಾ ಆಸಕ್ತರು, ಸ್ವಯಂ ಪ್ರೇರಿತ ರಕ್ತದಾನಿಗಳಿಗೆ ಎಂದು ಪಾಸ್ಟರ್ ಹೆಚ್.ಪರಶುರಾಮರವರು ಕರೆ ನೀಡಿದರು. ಈ ಸಂದರ್ಭದಲ್ಲಿ ರುತುಫಾಸ್ಟರ್ ಮ್ಮ ಸಮಾಜ ಸೇವಕ ನಾಣ್ಯಾಪುರ ಸೋಮು ಎಚ್ ಬಸವರಾಜ್, ಎ. ಗಣೇಶ್, ಮಹೇಂದರ್, ಮಿಲ್ಟ್ರಿ ಸುರೇಶ್, ಶಾಂತಕುಮಾರ್, ಶಶಿ ಕುಮಾರ, ಶಿವು,ಕುಮಾರ, ಉದಯ, ಲಕ್ಷ್ಮಿ, ಬೊಮ್ಮಕ್ಕ, ಗಾಯಿತ್ರಿ, ಗೌರಮ್ಮ, ವನಜಾಕ್ಷಿ,ಸೇರಿದಂತೆ. ಕ್ರೈಸ್ತ ಧರ್ಮದ ಅನುಯಾಯಿಗಳು ಸೇರಿದಂತೆ ವಿವಿದ ಸಮುದಾಯಗಳ ಗಣ್ಯರು, ಹಲವು ಯುವಕರು ಹಾಗೂ ಯುವತಿಯರು ರಕ್ತದಾನ ಮಾಡಿದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆಕೂಡ್ಲಿಗಿ