ಪಿಡಿಓ ಲತಾಬಾಯಿ ಕಾರ್ಯವೈಖರಿಗೆ ಸಾರ್ವಜನಿಕರ ಆಕ್ರೋಶ – ಕ್ರಮಕ್ಕೆ ಶಾಸಕರಲ್ಲಿ ಆಗ್ರಹ.

ನಡು ಮಾವಿನಹಳ್ಳಿ ಡಿಸೆಂಬರ್.16

ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮ ಪಂಚಾಯತಿಯಲ್ಲಿ ವಿವಿಧ ಮೂಲಭೂತ ಸೌಕರ್ಯ ಇಲ್ಲದೆ ಕಂಗಾಲದ ಸಾರ್ವಜನಿಕರು ಸುಮಾರು ಐದು ಆರು ದಿನಗಳಾದರೂ ಪಿಡಿಓ ಲತಾಬಾಯಿ ನಡು ಮಾವಿನಹಳ್ಳಿ ಗ್ರಾಮಕ್ಕೆ ತಿರುಗಿ ಸಹ ನೋಡಿಲ್ಲವಂತೆ ಹೀಗಾದರೆ ಇಲ್ಲಿನ ಸಾರ್ವಜನಿಕರು ಗತಿ ಏನು? ನಡು ಮಾವಿನಹಳ್ಳಿಯಲ್ಲಿ ಐದು ದಿನಗಳಾದರೂ ನೀರು ಬರುತ್ತಿಲ್ಲ ಕುಡಿಯಲು ಬಳಸಲು ನೀರಿಲ್ಲ.ಕೊಟ್ಟೂರು ತಾಲೂಕಿನಲ್ಲಿ ತಾಲೂಕಾ ಪಂಚಾಯತಿ ಗ್ರಾಮ ಪಂಚಾಯತಿಗೆ ಸುದ್ದಿ ಕೇಳಿ ಸಾರ್ವಜನಿಕರ ಸಮಸ್ಯೆ ಕೇಳಿ ಜನರು ರೋಸಿ ಹೋಗಿದ್ದಾರೆ.ಈ ಕಾಳಾಪುರ ಗ್ರಾಮ ಪಂಚಾಯತಿಯಲ್ಲಿ ನೈನ್ ಅಂಡ್ ಲೆವೆನ್ ಗೆ ಅರ್ಜಿ ಸಲ್ಲಿಸಿದರೆ ಸುಮಾರು ದಿನಗಳಿಂದ ನೈನ್ ಅಂಡ್ ಇಲೆವೆನ್ ಕೊಡುತ್ತಿಲ್ಲವಂತೆ ಇವರು ಹಣಕ್ಕಾಗಿ ಕಾಲಹರಣ ಮಾಡುತ್ತಾರೆ ಎಂದು ಮೇಲೆ ನೋಟಕ್ಕೆ ತಿಳಿಯುತ್ತದೆ ಮತ್ತು ಒಂದು ನೈನ್ ಅಂಡ್ ಇಲೆವೆನ್ ಫಾರಂ ಸರ್ಕಾರಿ ಫೀ ಕೇವಲ ರೂ.50 ಇದ್ದರೆ ಇದಕ್ಕೆ 5,000 ಖರ್ಚು ಆಗುತ್ತದೆ ಎಂದು ಹೇಳುತ್ತಾರಂತೆ ನಡು ಮವಿನಹಳ್ಳಿ ಗ್ರಾಮದಲ್ಲಿ ಸುಮಾರು 20 ಅರ್ಜಿಗಳನ್ನು ನೈನ್ ಅಂಡ್ ಲೆವೆನ್ ಕೊಡಲು ಹಿಂದೇಟು ಹಾಕುತ್ತಿದ್ದಾರಂತೆ ಇಂಥಹ ಮಳೆ ಹೋದ ಬರಗಾಲದ ಟೈಮಿನಲ್ಲೂ ಇವರಿಗೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಮ್ಮ ಕೊಟ್ಟೂರಿನ ತಾಲೂಕಾ ಗ್ರಾಮ ಪಂಚಾಯಿತಿಗಳು ದುರ್ಬಳಕೆ ಆಗಿವೆಯಂತೆ ಹಾಗೂ ಊರಿನ ಚರಂಡಿ ಮತ್ತು ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆಂದು ಸಾರ್ವಜನಿಕರು ಆಗ್ರಹವಾಗಿದೆ.ಸುಮಾರು ಐದು ಆರು ದಿನಗಳಾದರೂ ನಡುಮಾವಿನಹಳ್ಳಿ ಗ್ರಾಮದಲ್ಲಿ ಕುಡಿಯಲು ನೀರಿಲ್ಲವಂತೆ ಆದರೂ ಸಹ ಪಿಡಿಓ ಲತಾಬಾಯಿಯವರು ತಿರುಗಿ ಸಹ ನೋಡಿಲ್ಲವಂತೆ ಹೀಗಾದರೆ ಸಾರ್ವಜನಿಕರ ಮೂಲಭೂತ ಸೌಕರ್ಯಗಳ ಗತಿ ಏನು?ಎಂದು ಗ್ರಾಮ ಪಂಚಾಯತಿ ಸದಸ್ಯರಾದ ನಾಗರಾಜ್ ಗೌಡ್ರು ಮೈದೂರ್ ರೇವಣ್ಣ ಹರಕನಾಳು ರೇವಣಸಿದ್ದಪ್ಪ ನಮ್ಮ ಪತ್ರಿಕೆಯೊಂದಿಗೆ ತಿಳಿಸಿದರು.ಜನರ ಕಷ್ಟಕ್ಕೆ ತಕ್ಷಣವೇ ಸ್ಪಂದಿಸುವ ಶಾಸಕರಾದ ಶ್ರೀನಿವಾಸ್ ಎನ್ ಟಿ ಹಾಗೂ ರವಿಕುಮಾರ್ ಕಾರ್ಯ ನಿರ್ವಾಹಕ ಅಧಿಕಾರಿಗಳು ಕೊಟ್ಟೂರು ಇಂಥಹ ಗ್ರಾಮ ಪಂಚಾಯತಿಯ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಬಗ್ಗೆ ಎಚ್ಚರ ವಹಿಸಬೇಕೆಂದು ನಮ್ಮ ಪತ್ರಿಕೆಯ ಆಶಯವಾಗಿದೆ.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button