ನೂತನ ತಹಶೀಲ್ದಾರ್ ರಾಗಿ ನಿಂಗಪ್ಪ ಬಿರಾದಾರ ಅಧಿಕಾರ ಸ್ವೀಕಾರ.
ಹುನಗುಂದ ಆಗಷ್ಟ.8

ತಾಲೂಕಿನ ನೂತನ ತಹಶೀಲ್ದಾರರಾಗಿ ೨೦೧೪ರ ಬ್ಯಾಚ್‌ನ ಕೆಎಎಸ್ ಅಧಿಕಾರಿ ನಿಂಗಪ್ಪ ಬಿರಾದಾರ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.ಹಿಂದಿನ ತಹಶೀಲ್ದಾರ ಬಸಲಿಂಗಪ್ಪ ನೈಕೋಡಿ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುಲಬುರ್ಗಾ ಜಿಲ್ಲೆಯ ಯಡ್ರಾಮಿ ತಾಲೂಕಿನ ಕುಕ್ಕನೂರ ಗ್ರಾಮದ ನಿಂಗಪ್ಪ ಬಿರಾದಾರ ಅವರು ಈ ಮುಂಚೆ ಸಿಂದಗಿ ತಾಲೂಕಿನ ತಹಶೀಲ್ದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.೨೦೧೭ ರಲ್ಲಿ ತಾಳಿಕೋಟಿ ತಹಶೀಲ್ದಾರರಾಗಿ ನಂತರ,ಗುಳೇದಗುಡ್ಡ,ಇಳಕಲ್ಲ,ಸುರಪುರ ಮತ್ತು ಉಡಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ತಹಶೀಲ್ದಾರರಾಗಿ ಕಾರ್ಯ ನಿರ್ವಹಿಸಿದ ಅಪಾರ ಅನುಭವ ಇದೆ ಎಂದು ಪ್ರತ್ರಿಕಾ ತಿಳಿಸಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಮ್. ಬಂಡರಗಲ್ಲ