ಕೊಟ್ಟೂರೇಶ್ವರ ಕಾರ್ತಿಕೋತ್ಸವ ಸರ್ವ ಸಿದ್ಧತೆ.

ಕೊಟ್ಟೂರು ಡಿಸೆಂಬರ್.18

ಡಿ.25 ರ ಸೋಮವಾರ ರಾತ್ರಿ ಇಡೀ ನಡೆಯಲಿರುವ ಕೊಟ್ಟೂರು ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ಕಾರ್ತೀಕೋತ್ಸವಕ್ಕೆ ಪ್ರತೀ ವರ್ಷದಂತೆ ಎಲ್ಲಾ ಬಗೆಯ ಸಿದ್ದತೆ ಮಾಡಿ ಕೊಂಡಿದ್ದು ಅನಗತ್ಯವಾಗಿ ಜನರ ನೂಕಾಟ ತಳ್ಳಾಟ ಆಗದಂತೆ ಪೊಲೀಸ್‌ ಆಡಳಿತದ ಸಹಕಾರ ಪಡೆಯಲಾಗಿದೆ ಎಂದು ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಕೃಷ್ಣಪ್ಪ ಹೇಳಿದರು.ದೇವಸ್ಥಾನದ ಹಿಂಬಾಗದ ಸಭಾಂಗಣದಲ್ಲಿ ಸೋಮವಾರ ಪೊಲೀಸ್‌ ಠಾಣೆಯಲ್ಲಿ ಅಯೋಜಿಸಿದ್ದ ಕಾರ್ತೀಕೋತ್ಸವದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.ದೇವಸ್ಥಾನದ ಹೊರಾಂಗಣದಲ್ಲಿ ಡಿ.25ರ ಸೋಮವಾರದಂದು ಸಂಜೆ 5-30 ರ ನಂತರ ಕ್ರಿಯಾ ಮೂರ್ತಿಗಳು ದೀಪಗಳ ಹಚ್ಚುವಿಕೆಯೊಂದಿಗೆ ಚಾಲನೆ ನೀಡುತ್ತಿದ್ದಂತೆ ಕಾರ್ತೀಕೋತ್ಸವ ಆರಂಭಗೊಳ್ಳಲಿದ್ದು ದೀಪಗಳಿಗೆ ಎಣ್ಣೆ ಹಾಕುವ ಸಂದಂರ್ಭದಲ್ಲಿ ಹೆಚ್ಚಿನ ಗಲೀಜು ಆಗದಂತೆ ಕ್ರಮ ಜರಗಿಸುತ್ತೇವೆ.

ಎಣ್ಣೆ ಒಂದು ಸಾಲಿನಲ್ಲಿ ಹೊರಗಡೆ ತೆರಳಲು ವ್ಯವಸ್ಥೆ ಮಾಡಲಾಗುವುದು ಎಂದರು.ಸಬ್‌ ಇನ್‌ಸ್ಪೆಕ್ಟರ್‌ ಗೀತಾಂಜಲಿ ಸಿಂಧೆ ಮಾತನಾಡಿ ಕಾರ್ತೀಕೋತ್ಸವದ ಬಂದೋಬಸ್ತಿಗೆ ಈಗಾಗಲೇ ಸಿಬ್ಬಂದಿಗಳ ನಿಯೋಜಿಸುವ ಪ್ರಕ್ರಿಯೆ ನಡೆದಿದ್ದು ಮುಂದಿನ ಸೋಮವಾರ ಸಂಜೆಯ ನಂತರ ಪಟ್ಟಣ ಪ್ರವೇಶಿಸುವ 5 ದ್ವಾರಗಳ ಬಳಿ ಪ್ರಯಾಣಿಕರ ವಾಹನಗಳ ನಿಲುಗಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ . ಬೆಳ್ಳಿ ರಥೋತ್ಸವದ್ದುದ್ದಕ್ಕು ಸೂಕ್ತ ಬಗೆಯ ಪೊಲೀಸ್‌ ಬಂದೋಬಸ್ತನ್ನು ಕೈಗೊಳ್ಳಲಾಗುತ್ತದೆ ಒಟ್ಟಾರೆ ಯಾಗಿ ಯಾವುದೇ ಬಗೆಯ ಗದ್ದಲ ಗೋಜಲು ಗಳಿಲ್ಲದೆ ಕಾರ್ತೀಕೋತ್ಸವ ಯಶಸ್ವಿಗೆ ಪೊಲೀಸ್‌ ಸಿಬ್ಬಂದಿಯನ್ನು ಬಳಸಿ ಕೊಳ್ಳಲಾಗುತ್ತಿದೆ ಎಂದರು.ಜಿ.ಪಂ ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ್‌ ಮಾತನಾಡಿ ಶ್ರೀ ಸ್ವಾಮಿಯ ಕಾರ್ತೀಕೋತ್ಸವ ಪ್ರತೀ ವರ್ಷ ಧಾರ್ಮಿಕ ಪದ್ದತಿಯಂತೆ ನಡೆಯುತ್ತಿದ್ದು ಯಾವುದೇ ವರ್ಷದಲ್ಲೂ ಸಹ ಗೊಂದಲ ಗಲಾಟೆ ಉಂಟಾಗಿಲ್ಲ ಇದಕ್ಕೆ ಭಕ್ತರು ಎಂದೂ ಅವಕಾಶ ನೀಡಿಲ್ಲ ಎಂದು ಹೇಳಿದರಲ್ಲದೆ ಸುಗಮ ಕಾರ್ತೀಕೋತ್ಸವಕ್ಕೆ ಪಟ್ಟಣದ ಜನತೆ ಮತ್ತು ಭಕ್ತರು ಸಂಪೂರ್ಣ ಬೆಂಬಲಿಸುತ್ತಾರೆ. ಎಂದು ಹೇಳಿದರು.ಪ.ಪಂ ಮುಖ್ಯಾಧಿಕಾರಿ ನಸಲರುಲ್ಲಾ , ಜೆಸ್ಕಾಂ ಸಹಾಯಕ ಇಂಜಿನಿಯರ್‌ ಚೇತನ್‌ ಕುಮಾರ್‌, ಪ.ಪಂ ಸದಸ್ಯರುಗಳಾದ ಮರಬದ ಕೊಟ್ರೇಶ್‌ , ಕೆಂಗರಾಜ, ಮತ್ತಿತರರು ಪಾಲ್ಗೊಂಡಿದ್ದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button