ಪತ್ರಕರ್ತ ವೆಂಕಟೇಶ ಸಂಪ ಅವರಿಗೆ “ಪಬ್ಲಿಕ್ ಫೈಲ್ ನ್ಯೂಸ್ ನೆಟ್ವರ್ಕ್ – 2025 ರ ವರ್ಷದ ಸಾಧಕ ಪ್ರಶಸ್ತಿ.
ಬೆಳಗಾವಿ ಜ.16

ಪಬ್ಲಿಕ್ ಫೈಲ್ ಪತ್ರಿಕಾ ಸಂಸ್ಥೆ (ರಿ) ನೀಡುವ “2025 ರ ವರ್ಷದ ಸಾಧಕ ರಾಜ್ಯ ಪ್ರಶಸ್ತಿ” ಯನ್ನು ಪತ್ರಕರ್ತ, ಸಂಪದ ಸಾಲು ಪತ್ರಿಕೆ ಸಂಪಾದಕ, ವೆಂಕಟೇಶ ಎಸ್ ಸಂಪ ಅವರಿಗೆ ಜನವರಿ 19 ರ ಭಾನುವಾರ ದಂದು ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾ ರಂಗದಲ್ಲಿ ಪ್ರದಾನ ಮಾಡಲಾಗುವುದು ಎಂದು ಹಿರಿಯ ಪತ್ರಕರ್ತ, ಪಬ್ಲಿಕ್ ಫೈಲ್ ನ್ಯೂಸ್ ನೆಟ್ವರ್ಕ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಎಂ ಎನ್ ಕೊಟ್ಟಾರಿ ಅವರು ತಿಳಿಸಿದ್ದಾರೆ.ವೆಂಕಟೇಶ ಸಂಪ ಅವರು ಕಳೆದ 18 ವರ್ಷಗಳಿಂದ ನಿರಂತರವಾಗಿ ಸಂಪದ ಸಾಲು ಎನ್ನುವ ಧನಾತ್ಮಕ ಪತ್ರಿಕೆಯನ್ನು ನಡೆಸುತ್ತಿರುವ ವೆಂಕಟೇಶ ಸಂಪರವರ ಸಾವಿರಾರು ಲೇಖನಗಳು ರಾಜ್ಯದ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಹಾಗೂ ರೇಡಿಯೋ ಟಿವಿಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದಾರೆ.

ಇವರು ಹಲವಾರು ಟೀವಿ ಚಾನಲ್ ಗಳ ಪ್ಯಾನಲ್ ಡಿಸ್ಕಷನ್ ಗಳಲ್ಲಿ ಭಾಗವಹಿಸುವುದರ ಜೊತೆಗೆ ಹಲವಾರು ಸಿನಿಮಾ ಧಾರವಾಹಿಗಳಲ್ಲಿ ನಟಿಸಿದ್ದಾರೆ. ರಕ್ತದಾನ, ನೇತ್ರದಾನ, ಪರಿಸರ ಜಾಗೃತಿ ಅಭಿಯಾನ, ನೀರು ಉಳಿಸಿ ಅಭಿಯಾನ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದಾರೆ. MBA ಪದವೀಧರ ಆಗಿರುವ ವೆಂಕಟೇಶ ಸಂಪ ಅವರು, ಹಲವು ಮಿಶ್ರ ಬೆಳೆಗಳನ್ನು ಬೆಳೆದು, ಸಾವಯವ ಕೃಷಿಯಲ್ಲೂ ಸಾಧನೆ ಮಾಡಿದ್ದಾರೆ.”ಸಂಪದ ಫೌಂಡೇಶನ್ ಫಾರ್ ಪಬ್ಲಿಕ್ ಅವೇರ್ನಸ್” ಸಂಸ್ಥೆ ಮೂಲಕ ಹಲವಾರು ಸಾಮಾಜಿಕ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಿದ್ದಾರೆ.ಇದೆಲ್ಲವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ವೆಂಕಟೇಶ ಸಂಪ ಅವರಿಗೆ ಪ್ರಧಾನ ಮಾಡಲಾಗುವುದು ಎಂದು ಕೊಟ್ಟಾರಿ ಅವರು ತಿಳಿಸಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ ಶರ್ಮಾ ಬೆಳಗಾವಿ