ವಿದ್ಯಾರ್ಥಿಗಳಿಗೆ ನೆಲ,ಜಲ, ಭಾಷೆಯ ಬಗ್ಗೆ ಅಭಿಮಾನ ಇರಬೇಕು.

ಕಾನಾ ಹೊಸಹಳ್ಳಿ ಡಿಸೆಂಬರ್.20

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ದಿಸೆಯಲ್ಲಿ ಸಾಹಿತ್ಯ ಕಲೆ ನಾಡು ನುಡಿ, ಜಲ, ನೆಲ, ಭಾಷೆಯ ಅಭಿಮಾನಿರ ಬೇಕು. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಮಾಡಬೇಕು. ಉನ್ನತ ಹುದ್ದೆಗಳಿಗೆ ತಲುಪಬೇಕು. ಮತ್ತು ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಕೆಲಸ ನಾವು ನೀವೆಲ್ಲರೂ ಮಾಡಬೇಕಾಗಿದೆ. ಎಂದರು ಶರಣೇಶ್ವರ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಕೆ.ಎಂ. ಶಶಿಧರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇಲ್ಲಿನ ಕಾನಾ ಹೊಸಹಳ್ಳಿ ವಿದ್ಯಾನಿಕೇತ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶರಣ ಸಾಹಿತ್ಯ ಪರಿಷತ್ ಕೂಡ್ಲಿಗಿ ಇವರ ವತಿಯಿಂದ ವಿದ್ವಾನ್ ಶ್ರೀ ಬಿ‌.ಎಂ ಗುರು ಸಿದ್ದಯ್ಯನವರ ಸ್ಮರಣೆ ಹಾಗೂ ದತ್ತಿ ಉಪನ್ಯಾಸ ಕಾರ್ಯ ಕ್ರಮದಲ್ಲಿ ಮಾತನಾಡಿದರು. ದತ್ತಿ ಉಪನ್ಯಾಸ ನೀಡಿದ ಧನಂಜಯ ಮಾತನಾಡಿ ವಿದ್ವಾನ್ ಬಿ.ಎಂ ಗುರುಸಿದ್ದಯ್ಯನವರ ಜೀವನ ಸಂದೇಶ ಕುರಿತು ಮಾತನಾಡಿ ಇವರು ವೃತ್ತಿಯಲ್ಲಿ ಶಿಕ್ಷಕರಾದರು ಸಹ ಪ್ರವೃತ್ತಿಯಲ್ಲಿ ಜ್ಯೋತಿಷ್ಯ, ಆಯುರ್ವೇದ ಪಂಡಿತರು, ಜೊತೆಗೆ ಸಾಹಿತಿ ಹಾಗೂ ಕನ್ನಡ ಪಂಡಿತರೆಂದೆ ಈ ಭಾಗದಲ್ಲಿ ಖ್ಯಾತಿ ಪಡೆದಿದ್ದರು. ಕನ್ನಡ ಸಂಸ್ಕೃತ ವೈದಿಕ ಅಧ್ಯಾತ್ಮ ಗುರುಸಿದ್ದಯ್ಯನವರು ಎಂಥ ಕಠಿಣ ವಿಷಯದ ಬಗ್ಗೆ ನಿರರ್ಗಳವಾಗಿ ಮಾತನಾಡ ಬಲ್ಲವರಾಗಿದ್ದರು ಎಂದು ಹೇಳಿದರು.ಈ ವೇಳೆ ಉಪನ್ಯಾಸಕರಾಗಿ ಎಚ್ಎಮ್ ಬಸವರಾಜ್ ಸಮಾಜದಲ್ಲಿ ಶಿಕ್ಷಕರ ಪಾತ್ರ ಕುರಿತು ವಿದ್ಯಾರ್ಥಿಗಳಿಗೆ ಸ್ವ ವಿವರವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎನ್.ಎಂ ರವಿಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ ಕೂಡ್ಲಿಗಿ ತಾಲೂಕಿನಲ್ಲಿ ವಿದ್ವಾಂಸರೆಂದರೆ ಬಿ.ಎಮ್. ಗುರು ಸಿದ್ದಯ್ಯನವರು, ಕೋ ಚನ್ನಬಸಪ್ಪ, ಹಿಮ ನಾಗಯ್ಯ, ವೃಷಭೇಂದ್ರ ಸ್ವಾಮಿ, ಸೋ.ಮ. ಚಂದ್ರಶೇಖರಯ್ಯ ಸೇರಿದಂತೆ ಅನೇಕ ವಿದ್ವಾಂಸರು ಈ ನಾಡಿಗೆ ತನ್ನದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದರು. ಮತ್ತು ಶರಣ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯ ಕುರಿತು ಸ್ವವಿರವಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಬಿ.ಎಂ ಪ್ರಭುದೇವ್ ಮಾತನಾಡಿ ನಮ್ಮ ತಂದೆಯವರು ಹಳೆಗನ್ನಡ ಕಾವ್ಯಗಳನ್ನು ಸುಶಾವ್ಯವಾಗಿ ಗಮಕಿ ಗಳಂತೆ ಪ್ರೀತಿ ವಿದ್ಯಾರ್ಥಿಗಳ ಹೃದಯಕ್ಕೆ ಆಳಕ್ಕೆ ಇಳಿಯುವಂತೆ ಬೋಧನೆ ನಡೆಸುತ್ತಿದ್ದರು. ಹಾಗೆಯೇ ಜ್ಯೋತಿಷ್ಯ ಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಿದ್ದು. ಶರಣರ ವಚನಗಳನ್ನು. ಪ್ರಭುಲಿಂಗ ಲೀಲೆ, ಶೂನ್ಯ ಸಂಪಾದನೆಂತಹ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರು‌. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 1996.ರಲ್ಲಿ ಕೂಡ್ಲಿಗಿಯಲ್ಲಿ ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಸಮ್ಮೇಳನ ನಡೆಸಿತು ಆ ಸಮ್ಮೇಳನದ ಅಧ್ಯಕ್ಷತೆಯನ್ನು ಗುರುಸಿದ್ದಯ್ಯನವರಿಗೆ ನೀಡಿ ಗೌರವಿಸಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಬಿ.ಎಮ್ ರಾಜಶೇಖರ್, ನಿಕಟ ಪೂರ್ವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್ಎಮ್ ಗುರುಪ್ರಸಾದ್, ಶರಣೇಶ್ವರ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ಕೆಎಂ ಹರ್ಷವರ್ಧನ್, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಕೆ..ಎಸ್.ವೀರೇಶ್, ಶರಣ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಎಚ್ಎಮ್‌ಬಿ ಗುರುಮೂರ್ತಿ, ಶಿವಪ್ರಕಾಶ್ ಕೆಂಚಮ್ಮನಹಳ್ಳಿ, ಶಾಮಸುಂದರ ಸಫಾರಿ, ಶರಣಗೌಡ, ಸೇರಿದಂತೆ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಸಿಬ್ಬಂದಿ ವರ್ಗ ಹಾಗೂ ಕೆಎಂಎಸ್ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇತರರು ಸಾರ್ವಜನಿಕರು ಉಪಸ್ಥಿತರಿದ್ದರು.

ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button