ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ “ಶ್ರೀ ಮತಿ ಇಂದುಮತಿ ಲಮಾಣಿ” ಆಯ್ಕೆ.
ಇಂಡಿ ಡಿಸೆಂಬರ್.21

ವಿಜಯಪುರ ಜಿಲ್ಲೆಯ ಜಿಲ್ಲಾ ಘಟಕದ ಮಕ್ಕಳ ಸಾಹಿತ್ಯ ಪರಿಷತ್ತಿನ ನೂತನ ಜಿಲ್ಲಾಧ್ಯಕ್ಷರಾಗಿ ಶ್ರೀಮತಿ “ಇಂದುಮತಿ ಲಮಾಣಿ” ಇವರನ್ನು ಪರಿಷತ್ತಿನ ಸವ೯ ಸದಸ್ಯರ ಬಹುಮತದೊಂದಿಗೆ ಆಯ್ಕೆ ಮಾಡಲಾಯಿತು ಎಂದು ಕ.ಮ.ಸಾ.ಪ.ರಾಜ್ಯಾಧ್ಯಕ್ಷರಾದ ಶ್ರೀ.ಸಿ.ಎನ್.ಅಶೋಕ ಇವರು ಆದೇಶ ಹೊರಡಿಸಿದ್ದಾರೆ.ಈ ಆದೇಶದಲ್ಲಿ ಜಿಲ್ಲಾ ಘಟಕಾಧ್ಯಕ್ಷರಿಗೆ ಮಕ್ಕಳ ಸಾಹಿತ್ಯ ಪರಿಷತ್ತಿನ ಉದ್ದೇಶವನ್ನು ಪಾಲಿಸಿ ಕೊಂಡು ,ಸಾಹಿತ್ಯಾಭಿರುಚಿ, ಸೃಜನಶೀಲ ,ಪರಿಸರ ಸಂರಕ್ಷಣೆ,ಸಹ ಬಾಳ್ವೆ, ದೇಶಾಭಿಮಾನವನ್ನು ಬೆಳೆಸುವ ನಿಟ್ಟಿನಲ್ಲಿ ಪರಿಷತ್ತಿನ ಸವ೯ ಸದಸ್ಯರು ಒಪ್ಪಿ ಶ್ರೀಮತಿ ಇಂದುಮತಿ ಲಮಾಣಿ ಸಾಹಿತಿಯಾದ ಇವರನ್ನು ಕನಾ೯ಟಕ ಮಕ್ಕಳ ಸಾಹಿತ್ಯ ಪರಿಷತ್ ವಿಜಯಪುರ ಜಿಲ್ಲಾ ಘಟಕಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಘಟಕಗಳನ್ನು ರಚಿಸಿ, ರಾಜ್ಯಾಧ್ಯಕ್ಷರ ಗಮನಕ್ಕೆ ತಂದು ಕಾಯ೯ ನಿವ೯ಹಿಸಲು ಸೂಚಿಸಲಾಗಿದೆ.ಪರಿಷತ್ತಿನ ಬೆಳವಣಿಗೆಗೆ ಶ್ರಮಿಸಲು ಸಂಪೂಣ೯ ಅಧಿಕಾರ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಇಂಡಿ ತಾಲೂಕಿನ ಕನಾ೯ಟಕ ಮಕ್ಕಳ ಸಾಹಿತ್ಯ ಪರಿಷತ್ತಿನ ಭಾವಿ ಅಧ್ಯಕ್ಷರಾದ ಶ್ರೀ ಪಂಡಿತ.ಭೀ.ಅವಜಿಯವರು ಜಿಲ್ಲಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ