ಇಂಡಿ ಜಿಲ್ಲೆಯನ್ನಾಗಿಸುವ ಬಗ್ಗೆ ಠರಾವು ಪಾಸು ಮಾಡಿ ಹೋರಾಟಕ್ಕೆ ಧುಮುಕಿದ ಪುರ ಸಭೆಯ ಸದಸ್ಯರು.
ಇಂಡಿ ಡಿಸೆಂಬರ್.21

ಪುರ ಸಭೆಯ ಎಲ್ಲಾ ಸದಸ್ಯರು ಗುರುವಾರ ಸಭೆ ಸೇರಿ ಉಪ ಕಂದಾಯ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರ ಸಮ್ಮುಖದಲ್ಲಿ ಇಂಡಿ ತಾಲ್ಲೂಕನ್ನು ಜಿಲ್ಲೆ ಮಾಡಬೇಕೆಂದು ಆಗ್ರಹಿಸಿ ಠರಾವು ಪಾಸು ಮಾಡಿ, ಅದರ ಪ್ರತಿಯನ್ನು ಅವರಿಗೆ ಅರ್ಪಿಸಿದರು.ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ಅನೀಲಗೌಡ ಬಿರಾದಾರ, ಬುದ್ದುಗೌಡ ಪಾಟೀಲ, ಶಬ್ಬೀರ ಖಾಜಿ, ಅಸ್ಲಂ ಕಣ್ಣಿ, ಪುರಸಭೆಯ ಮಾಜಿ ಅಧ್ಯಕ್ಷ ದೇವೇಂದ್ರ ಕುಂಬಾರ ಮಾತನಾಡಿ, ಇಂಡಿ ತಾಲ್ಲೂಕು ಜಿಲ್ಲೆಯಲ್ಲಿಯೇ ದೊಡ್ಡ ತಾಲೂಕಾ ಕೇಂದ್ರವಾಗಿದ್ದು, ಉಪ ವಿಭಾಗಾಧಿಕಾರಿಗಳ ಕಚೇರಿ, ಡಿವೈಎಸ್ಪಿ ಕಚೇರಿಗಳನ್ನು ಹೊಂದಿದೆ. ಇತ್ತೀಚೆಗೆ ರಾಜ್ಯ ಮಟ್ಟದ ಲಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಗಿದೆ. ಜಿಲ್ಲೆಗೆ ಅಗತ್ಯವಿರುವ ಮಿನಿ ವಿಧಾನ ಸೌಧವಾಗಿದೆ. ರೈತರಿಗೆ ಕೃಷಿ ವಿಜ್ಞಾನ ಕೇಂದ್ರ ಹೊಂದಿದೆ. ಜಿಲ್ಲೆಯನ್ನಾಗಿಸಲು ಅಗತ್ಯ ಪರಿಸರ ಹೊಂದಿದೆ. ಕಾರಣ ಇಂಡಿ ತಾಲ್ಲೂಕನ್ನು ಜಿಲ್ಲೆಯಾಗಿಸಬೇಕೆಂದು ಆಗ್ರಹಿಸಿದರು.ಮಹಾರಾಷ್ಟ್ರದ ಗಡಿನಾಡಿಗೆ ಹೊಂದಿ ಕೊಂಡಿರುವ ಈ ತಾಲ್ಲೂಕು ನಂಜುಂಡಪ್ಪನವರ ವರದಿಯ ಪ್ರಕಾರ ಅತೀ ಹಿಂದುಳಿದ ತಾಲ್ಲೂಕು. 50 ವರ್ಷಗಳಿಂದಲೂ ಯಾವುದೇ ಅಭಿವೃದ್ಧಿ ಕಂಡಿಲ್ಲ. ಇದರ ಪಕ್ಕದಲ್ಲಿಯೇ ಭೀಮಾ ನದಿ ಹರಿದಿದ್ದರೂ ಕೂಡಾ ಅದರ ನೀರನ್ನು ಬಳಕೆ ಮಾಡಿ ಕೊಂಡಿಲ್ಲ. ಕೈಗಾರಿಕೋದ್ಯಮಿಗಳಿಲ್ಲ. ವ್ಯಾಪಾರವಹಿವಾಟು ಇಲ್ಲ. ಕಾರಣ ಗಡಿನಾಡನ್ನು ಅಭಿವೃದ್ಧಿ ಕಾಣಲು ಹೊಸ ಜಿಲ್ಲೆಯನ್ನಾಗಿಸ ಬೇಕು ಎಂದ ಅವರು ಇಂಡಿ ಜಿಲ್ಲೆಯಾಗಿಸುವಲ್ಲಿ ಯಾವದೇ ತ್ಯಾಗಕ್ಕೂ ಸಿದ್ದವಾಗಿದ್ದೇವೆ ಎಂದರು.ಇದು ಸಾಂಕೇತಿಕವಾಗಿ ಮನವಿ ಪತ್ರ ಸಲ್ಲಿಸಿದ್ದೇವೆ. ನಮ್ಮ ಭಾವನೆಗಳನ್ನು ಅರಿತು ಕೊಂಡು ಈ ಕೂಡಲೇ ಸರ್ಕಾರ ಇಂಡಿ ಜಿಲ್ಲೆಯನ್ನಾಗಿಸ ಬೇಕು. ಸರ್ಕಾರ ಒಂದು ವೇಳೆ ವಿಳಂಭ ಧೋರಣೆ ಮಾಡಿದ್ದಾದರೆ ಉಗ್ರ ಹೋರಾಟ ಮಾಡ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಭೀಮನಗೌಡ ಪಾಟೀಲ, ಜಹಾಂಗೀರ ಮೆಹಬೂಬ, ಅಯೂಬ ನಾಟೀಕಾರ, ಸಾಯಬಣ್ಣ ಮೂರಮನ, ಉಮೇಶ ದೇಗಿನಾಳ, ಲಿಂಬಾಜಿ ರಾಠೋಡ, ಮುಸ್ತಾಕಹ್ಮದ ಇಂಡಿಕರ ಉಪಸ್ಥಿರಿದ್ದರು.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ