ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ಹಾಗೂ ಆಂಜನೇಯ ಸ್ವಾಮಿ ದೇವರ ನೂತನ ಜೋಡಿ ರಥ ನಿರ್ಮಾಣ ಕಾರ್ಯ ಆರಂಭ.
ಮರಿಯಮ್ಮನಹಳ್ಳಿ ಡಿಸೆಂಬರ್.21

ಪಟ್ಟಣದ ಆರಾಧ್ಯ ದೈವಗಳಾದ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವರ ನೂತನ ಜೋಡಿ ರಥ ನಿರ್ಮಾಣ ಕಾರ್ಯ ಕ್ರಮವನ್ನು. ದೇವಸ್ಥಾನದ ಅಭಿವೃದ್ಧಿ ಸಮಿತಿಯು. ದೇವಸ್ಥಾನದ ಆವರಣದಲ್ಲಿ, ನೂತನ ಜೋಡಿ ರಥ ಹಾಗೂ ದೇವಸ್ಥಾನ ಕಾಮಗಾರಿಯ ಆರಂಭ ನೀಲಿ ನಕ್ಷೆ ಬಿಡುಗಡೆ ಮಾಡಲಾಯಿತು.ಪ್ರಾಸ್ತಾವಿಕವಾಗಿ ಚಿತ್ರಿ ಸತೀಶ್ ಅವರು ಮಾತನಾಡಿ ಪ್ರಸ್ತುತ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಮುಖ್ಯ ಉದ್ದೇಶಗಳು ಶಿಥಿಲಾವಸ್ಥೆಯಲ್ಲಿದ್ದ ರಥಗಳ ಬದಲಾಗಿ ನೂತನ ರಥಗಳ ನಿರ್ಮಾಣ ಕಾಮಗಾರಿ, ನಂತರದಲ್ಲಿ ದೇವಸ್ಥಾನದ ರಾಜಗೋಪುರ & ದೇವಸ್ಥಾನದ ಜೀರ್ಣೋದ್ಧಾರ ನಿರ್ಮಾಣ ಕಾಮಗಾರಿ ನಂತರ ಅವಶ್ಯಕವಾಗಿ ಬೇಕಾದ ಮೂಲಭೂತ ಸೌಕರ್ಯಗಳನ್ನು ಭಕ್ತಾಧಿಗಳಿಗೆ ಕಲ್ಪಿಸುವುದು ಈ ಅಭಿವೃದ್ಧಿ ಸಮಿತಿಯ ಮುಖ್ಯ ಉದ್ದೇಶವಾಗಿರುತ್ತದೆ ಎಂದು ದೇವಸ್ಥಾನದ ಸಕಲ ಅಭಿವೃದ್ಧಿ ಬಗ್ಗೆ ಮಾಹಿತಿ ನೀಡಿದರು.ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದ ಕೆ ನೆಮಿರಾಜ್ ನಾಯ್ಕ್ ಮಾತನಾಡಿ ತುಂಗಭದ್ರ ನದಿಯಲ್ಲಿ ಮುಳುಗಡೆಯಾದ ಸಂದರ್ಭದಲ್ಲಿ ಅಂದಿನ ಮಲ್ಲಾಪುರ ತಾಲೂಕಿನ, ನಾಣಿಕೆರೆ ಗ್ರಾಮದಿಂದ ಮರಿಯಮ್ಮನಹಳ್ಳಿಗೆ ಜೋಡಿ ರಥವನ್ನು ತಂದು ರಾಮ ನವಮಿಯಂದು ವಿಜೃಂಭಣೆಯಿಂದ ಆಚರಿಸುತ್ತಾ ಬರಲಾಗುತ್ತಿದೆ.ತುಂಬಾ ಹಳೆಯದಾದ ಸುಮಾರು 400ವರ್ಷಗಳ ಇತಿಹಾಸವಿರುವ ಈ ದೇವಸ್ಥಾನ ಅಭಿವೃದ್ಧಿ ಯಾಗಬೇಕಿದೆ. ಈ ದೇವರ ಮಹತ್ವ ತುಂಬಾ ಹಿರಿಮೆಯಾಗಿದೆ.

ಶಿಥಿಲಾವಸ್ಥೆಯಲ್ಲಿದ್ದ ರಥಗಳ ಬದಲಾಗಿ ನೂತನ ರಥಗಳ ನಿರ್ಮಾಣಕ್ಕಾಗಿ ಸುಮಾರು 3550 ಗಣ ಅಡಿಗಳಷ್ಟು ತೇಗ, ಭೋಗಿ, ಹೊನ್ನೆ ಮತ್ತು ಶಿವನೆ ವಿವಿಧ ಬಗೆಯ ಕಟ್ಟಿಗೆ ದಿನ್ನೆಗಳನ್ನು ತೀರ್ಥಹಳ್ಳಿ ಹಾಗೂ ದಾಂಡೇಲಿ ಅರಣ್ಯ ಪ್ರದೇಶದಿಂದ ಖರೀದಿಸಿ ತರಲಾಗಿದೆ. ಎರಡು ರಥಗಳಿಗೆ ಆರ್ಥಿಕವಾಗಿ ಸುಮಾರು 3 ಕೋಟಿ ವೆಚ್ಚ ತಗಲುತ್ತಿದ್ದು. ಭಕ್ತರೆಲ್ಲರೂ ದೇವಸ್ಥಾನ ಅಭಿವೃದ್ಧಿಗಾಗಿ ದಾನಿಗಳು ಸಹಕಾರ ಕೊಟ್ಟು ಇದನ್ನು ಜೀರ್ಣೋದ್ಧಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಮನವಿ ಮಾಡಿದರು. ಅದಕ್ಕಾಗಿ ಸಮಿತಿಯ ಹೆಸರಿನಲ್ಲಿ ಖಾತೆ ತೆರೆದಿದ್ದು ಭಕ್ತಾದಿಗಳು ತಮ್ಮ ಇಚ್ಚೆಗೆ ಅನುಗುಣವಾಗಿ ದಾನ ನೀಡಲು ಕೋರಿದರು.ಖಾತೆಯ ವಿವರ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮರಿಯಮ್ಮನಹಳ್ಳಿ ಶಾಖೆ. ಖಾತೆ ಸಂಖ್ಯೆ 42 384898435. ಐ ಎಫ್ ಎಸ್ ಸಿ ಕೋಡ್ SBIN0040943ರಥಗಳ ನಿರ್ಮಾಣಕ್ಕೆ ದಾನಿಗಳ ದೇಣಿಗೆ : ಚಾಮರಾಜ ಸಿಂಗ್ ಉದ್ಯಮಿ ಹೊಸಪೇಟೆ ಇವರು ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ನೂತನ ರಥ ನಿರ್ಮಾಣಕ್ಕಾಗಿ 1.5 ಕೋಟಿ ವೆಚ್ಚ ಭರಿಸಲು ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.ಜಯರಾಜ್ ಸಿಂಗ್ ಉದ್ಯಮಿಗಳು, ಹೊಸಪೇಟೆ ಇವರು ಶ್ರೀ ಆಂಜನೇಯ ಸ್ವಾಮಿ ದೇವರ ನೂತನ ರಥ ನಿರ್ಮಾಣಕ್ಕೆ 50 ಲಕ್ಷ ರೂ ದೇಣಿಗೆ ನೀಡಿದ್ದಾರೆ.ಎಸ್ ಎಲ್ ಆರ್ ಮೆಟಾಲಿಕ್ಸ್ ಕಂಪನಿ ಶ್ರೀ ಆಂಜನೇಯ ಸ್ವಾಮಿ ದೇವರಥ ನಿರ್ಮಾಣಕ್ಕಾಗಿ 20 ಲಕ್ಷ ರೂಪಾಯಿ ನೀಡಿರುತ್ತಾರೆ.ಮಂಜುನಾಥ ಹೊಸಪೇಟೆ ಇವರು ಶ್ರೀ ಆಂಜನೇಯ ಸ್ವಾಮಿ ದೇವರ ರಥ ನಿರ್ಮಾಣಕ್ಕಾಗಿ 10 ಲಕ್ಷ ರೂಪಾಯಿಗಳಿಗೆ ನೀಡಿರುತ್ತಾರೆ.ಈ ಸಂಧರ್ಭದಲ್ಲಿ ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಶ್ರೀ ನಾಗರಾಜ ಹೆಚ್. ಉಪ ತಹಶೀಲ್ದಾರರು ಹಾಗೂ ಆಡಳಿತಾಧಿಕಾರಿಗಳು ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ, ಹಾಗೂ ಶ್ರೀ ಆಚಿಜಿನೇಯ ಸ್ವಾಮಿ ದೇವಸ್ಥಾನ ಬಿ. ರೂಪ, ಚಿದ್ರಿ ಸತೀಶ, ಎಂ. ವೆಂಕಟೇಶ, ಪ್ರಕಾಶ ನಾಯ್ಕ, ತಳವಾರ ದೊಡ್ಡ ರಾಮಣ್ಣ, ಮಜ್ಜಿಗಿ ಶಿವಪ್ಪ, ಸಣ್ಣ ದುರುಗಪ್ಪ, ನಾಗೇಶ ವಿ.ಎನ್, ಈ ಯರಿಸ್ವಾಮಿ ಡಿ. ನರಸಿಂಹ ಮೂರ್ತಿ, ಗೋವಿಂದ ಪರಶುರಾಮ,ಸಚ್ಚೇದ್ ವಿಶ್ವನಾಥ,ಕೆ ರಘುವೀರ, ಬಿ ರುದ್ರಮುನಿ ಇತರರಿದ್ದರು.
ತಾಲೂಕ ವರದಿಗಾರರು:ಮಾಲತೇಶ್ ಶೆಟ್ಟರ್. ಹೊಸಪೇಟೆ