ಧನ್ನೂರ ಪುನರ್ ವಸತಿ ಕೇಂದ್ರಕ್ಕೆ ಶೀಘ್ರದಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು – ಶಾಸಕ ಕಾಶಪ್ಪನವರ.
ಹುನಗುಂದ ಡಿಸೆಂಬರ್.21

ಕಳೆದ 3೦ ವರ್ಷಗಳಿಂದ ಅಭಿವೃದ್ದಿ ಕಾಣದೇ ಇರುವ ಧನ್ನೂರ ಗ್ರಾಮದ ಪುನರ ವಸತಿ ಕೇಂದ್ರದ ರಸ್ತೆ,ಚರಂಡಿ,ಕುಡಿಯುವ ನೀರು,ಶಾಲಾ ಕಟ್ಟಡ ಸೇರಿದ್ದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಶೀಘ್ರದಲ್ಲಿಯೇ ಒದಗಿಸಲಾಗುವುದು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಗುರುವಾರ ತಾಲೂಕಿನ ಧನ್ನೂರ ಗ್ರಾಮದ ಗ್ರಾಮ ಪಂಚಾಯತ ನೂತನ ಕಟ್ಟಡ ಮತ್ತು ಸಮುದಾಯ ಭವನವನ್ನು ಉದ್ಘಾಟಸಿ ಮಾತನಾಡಿ ಅವರು 1984 ರಲ್ಲಿ ಯುಕೆಪಿ ಅಡಿಯಲ್ಲಿ ಧನ್ನೂರ,ಹುಲ್ಲಳ್ಳಿ,ಮರೋಳ,ಹಾವರಗಿ,ಇಂದವಾರ ಸೇರಿದ್ದಂತೆ ಈ ಭಾಗದ ಅನೇಕ ಗ್ರಾಮಗಳು ಮುಳಗಡೆ ಯಾಗಿವೆ ಆದರೆ ಧನ್ನೂರ ಗ್ರಾಮ ಮಾತ್ರ ಜನವಸತಿಯ ಕೊರತೆ ಮತ್ತು ತಾಂತ್ರಿಕ ದೋಷದ ಕಾರಣ ಪುನರ್ ವಸತಿ ಕೇಂದ್ರದಲ್ಲಿ ಅಭಿವೃದ್ದಿ ಕಾರ್ಯ ನಡೆದಿಲ್ಲ.ಸಧ್ಯ ಶೇ 50 ರಷ್ಟು ಜನರು ಇಲ್ಲಿಯೇ ವಾಸಿವಾಗಿದ್ದು.ಶೀಘ್ರದಲ್ಲಿಯೇ ಅಭಿವೃದ್ದಿ ಕಾರ್ಯವನ್ನು ಕೈಕೊಂಡು ಇದನ್ನೊಂದು ಮಾದರಿ ಪುನರ್ ವಸತಿ ಮಾಡಲಾಗುವುದು.ಈಗಾಗಲೇ ನಮ್ಮ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಜಲಸಂನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಹುನಗುಂದ ತಾಲೂಕಿನ ಅನೇಕ ಪುನರ್ ವಸತಿ ಕೇಂದ್ರಗಳು ಅಭಿವೃದ್ದಿ ಕಂಡಿಲ್ಲ.ಅದರ ಅಭಿವೃದ್ದಿಗೆ ಒತ್ತು ನೀಡಬೇಕೆಂದು ತಿಳಿಸಿದಾಗ ಪುನರ್ ವಸತಿ ಕೇಂದ್ರಗಳ ಅಭಿವೃದ್ದಿಗಾಗಿ ಬೆಳಗಾವಿ ಅಧಿವೇಶನದಲ್ಲಿ 194 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿದ್ದೇನೆ.ಶೀಘ್ರದಲ್ಲಿಯೇ ಅನುದಾನ ಮಂಜೂರಾತಿ ಯಾಗುತ್ತೇ ಇಲ್ಲಿರುವ ಕೊರತೆಗಳನ್ನು ಸರಿ ದೂಗಿಸುವ ಕಾರ್ಯವನ್ನು ಕೈಕೊಳ್ಳಲಾಗುವದು.ಅದರ ಜೊತೆಗೆ ಪುನರ್ ವಸತಿ ಕೇಂದ್ರಗಳ ಅಭಿವೃದ್ದಿ ಕುರಿತು ಶೀಘ್ರದಲ್ಲಿಯೇ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು ಆ ಸಭೆಯಲ್ಲಿ ತಾವು ಕೂಡಾ ಪಾಲ್ಗೊಂಡು ತಮ್ಮ ಸಮಸ್ಯೆಗಳನ್ನು ನೇರವಾಗಿ ಸಚಿವರಿಗೆ ತಿಳಿಸಿ ಅಲ್ಲಿಯೇ ಪರಿಹಾರ ಕೊಡಿಸಲಾಗುವುದು ಎಂದರು.ಬಿಲ್ ಕೆರೂರ ಸಿದ್ದಲಿಂಗ ಶಿವಾಚಾರ್ಯರು ಮಾತನಾಡಿ ಈ ಭಾಗದ ಅನೇಕ ಮುಳಗಡೆಯಾದ ಗ್ರಾಮಗಳು ಪುನರ್ ವಸತಿ ಕೇಂದ್ರಗಳು ಅಭಿವೃದ್ದಿಯಾಗಿಲ್ಲ ಅವುಗಳ ಅಭಿವೃದ್ದಿಗೆ ಹೆಚ್ಚಿನ ಒತ್ತನ್ನು ನೀಡುವ ಮೂಲಕ ಹುನಗುಂತ ಮತ ಕ್ಷೇತ್ರದ ಸಂಪೂರ್ಣ ಅಭಿವೃದ್ದಿ ಗೊಳಿಸುವ ಗುರುತರ ಜವಾಬ್ದಾರಿ ಶಾಸಕ ವಿಜಯಾನಂದ ಕಾಶಪ್ಪನವರ ಮೇಲೆದೆ ಎಂದರು.ಈ ಸಂದರ್ಭದಲ್ಲಿ ಗ್ರಾಮಸ್ಥ ಸಕ್ರಪ್ಪ ಹೂಗಾರ ಪುನರ್ ವಸತಿ ಕೇಂದ್ರದಲ್ಲಿ ರಸ್ತೆ,ಚರಂಡಿ,ಕುಡಿಯುವ ನೀರು,ಪ್ರಾಥಮಿಕ ಶಾಲಾ ಕಟ್ಟಡ,ಕಾಲುವೆಯನ್ನು ಗ್ರಾಮದ ಹೊರಗಡೆಗೆ ಸ್ಥಳಾಂತರಿಸುವುದು ಸೇರಿದ್ದಂತೆ ಹತ್ತುಕ್ಕೂ ಹೆಚ್ಚು ಬೇಡಿಕೆಯನ್ನು ಈಡೇರಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು.ಇದೇ ವೇಳೆ ವೇದಿಕೆಯಲ್ಲಿ ಗಣ್ಯರನ್ನು ಮತ್ತು ಗ್ರಾ.ಪಂ ಕಟ್ಟಡಕ್ಕೆ ಶ್ರಮಿಸಿದ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ಸಂಗಮ್ಮ ಶಿರಹಟ್ಟಿ,ಉಪಾಧ್ಯಕ್ಷ ಎನ್.ಕೆ.ಮುಲ್ಲಾ,ತಾ.ಪಂ ಇ.ಓ ಮುರಳೀಧರ್ ದೇಶಪಾಂಡೆ,ಪಿಎಸ್‌ಐ ಚನ್ನಯ್ಯ ದೇವೂರ,ಗ್ರಾ.ಪಂ ಸದಸ್ಯರಾದ ಬಸಮ್ಮ ಮಾದರ,ಲಲಿತಾ ನಾಟೇಕಾರ,ಮಹಾಂತೇಶ ಅಂಗಡಿ,ರುದ್ರಮ್ಮ ಹಿರೇಮಠ,ಸಿದ್ರಾಪ್ಪಗೌಡ ದೇಸಾಯಿ,ಶಾಂತಮ್ಮ ಪೂಜಾರಿ,ಮಲ್ಲಯ್ಯ ಅಗ್ನಿಮಠ,ಚನ್ನಮ್ಮ ತಿಮ್ಮಾಪೂರ,ಶಿವಗಂಗಾ ಸುಣಕಲ್ಲ,ಸುವರ್ಣ ಮಠಪತಿ.ಮುಖಂಡರಾದ ಆನಂದ ಶಿರಹಟ್ಟಿ,ಪಂಚಯ್ಯ ಹಿರೇಮಠ,ಪಿಡಿಓ ಶಿಲ್ಪಾ ರ‍್ಯಾಕಿ,ಕಾರ್ಯದರ್ಶಿ ಅಮರೇಶ ಲೋಕಾಪೂರ,ಪಿಡಿಓ ಗಂಗಾಧರ ಹನಮಸಾಗರ ಸೇರಿದಂತೆ ಅನೇಕರು ಇದ್ದರು.ಸದಸ್ಯ ಸಂಗಮೇಶ ಆನೇಹೊಸೂರ ಸ್ವಾಗತಿಸಿದರು,ಶಿಕ್ಷಕಿ ಮಂಜುಶ್ರೀ ಮಣ ನಿರೂಪಿಸಿ ವಂದಿಸಿದರು.****ಬಾಕ್ಸ್ ಸುದ್ದಿ*** 1984 ರಲ್ಲಿ ಕೃಷ್ಣ ಮತ್ತು ಮಲಪ್ರಭೆ ನದಿಗಳಿಗೆ ಭೂಮಿಯನ್ನು ಕಳೆದು ಕೊಂಡ ಸಂತ್ರಸ್ಥರಿಗೆ ಆ ವೇಳೆ ಅಲ್ಪ ಪ್ರಮಾಣದ ಪರಿಹಾರ ಸಿಕ್ಕಿದೆ.ಅಂತಹ ಸಂತ್ರಸ್ಥರಿಗೆ ಮರಳಿ ಹೆಚ್ಚುವರಿ ಪರಿಹಾರ ಕೊಡಿಸುವ ಕಾರ್ಯವನ್ನು ಕೂಡಾ ಮಾಡಲಾಗುವುದು. ವಿಜಯಾನಂದ ಕಾಶಪ್ಪನವರ ಶಾಸಕರು ಹುನಗುಂದ ಮತ ಕ್ಷೇತ್ರ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ