ಸ್ನೇಹ ಚಿರವಾಗಲಿ…

ಮತ್ತೆ ನೆನಪಾಗುತಿದೆ ಬಾಲ್ಯದ ಸ್ನೇಹ ಬೇಸುಗೆ
ಆ ದಿನಗಳ ನೆನಪಿಸಿಕೊಂಡರೆ ಬಿಸಿಲಲು ತಣ್ಣಗೆ
ಬೆಲೆ ಕಟ್ಟಲಾದಿತೇ ಆ ಸಂಬಂಧಗಳ ಪ್ರೀತಿಗೆ
ಚಿರಋಣಿ ಬಾಲ್ಯದ ಬದುಕಿಗೆ ಅರ್ಥ ಕೊಟ್ಟ
ಸ್ನೇಹಿತರಿ
ಗೆಚಿನ್ನಿ ದಾಂಡು ಆಟವ ಆಡಿ ಸಮಯ ಕಳೆದೆವು
ಚಕ್ಕುಲಿ ನಿಪ್ಪಟ್ಟು ಹಂಚಿಕೊಂಡು ತಿಂದು
ಬೆಳೆದವು
ಸತ್ಯಕ್ಕೆ ತಲೆಬಾಗಿ ಸುಳ್ಳಿಗೆ ಮುಖ ತಿರುವಿ
ಸಾಗಿದೆವು
ಮೋಸ ವಂಚನೆ ಗೊತ್ತಿರದ ಅಮೂಲ್ಯ
ಜೀವನವು
ಅಮ್ಮ ಮಾಡಿದ ಲಾಡುಗಳನ್ನು ಹಂಚಿ ತಿಂದೆವು
ಅಪ್ಪ ತರುತ್ತಿದ್ದ ತಿನಿಸುಗಳನ್ನು ಎಲ್ಲರೂ
ಹಂಚಿಕೊಳ್ಳುತ್ತಿದ್ದೆವು
ಏನೇ ಹೇಳಿ ಬಾಲ್ಯದ ನೆನಪು ನಾವೆಂದು ಮರಿವೆವು
ಬಾಲ್ಯ ದಿನಗಳ ಮರಳಿಸಲು ದೇವರಲ್ಲಿ
ಪ್ರಾರ್ಥಿಸಿದವು
ಸ್ನೇಹ ಮಧುರ ಅಮರ ಬಂಧವಾಗಲಿ
ನೋವು ತರದೇ ಬದುಕು ಬಂಗಾರವಾಗಲಿ
ಸಂಬಂಧ ಮುರಿಯದೇ
ಸಾವಿನಲ್ಲೂ ಗೆಳೆತನ ಜೊತೆಗಿರಲಿ
ಉಸಿರಿರೋವರೆಗೂ ಪ್ರತಿಯೊಬ್ಬರ ಸ್ನೇಹ
ಚಿರವಾಗಿರಲಿ
ಮುತ್ತು.ಯ.ವಡ್ಡರ
ಶಿಕ್ಷಕರುಬಾಗಲಕೋಟ
Mob-9845568484