ಬಣ್ಣದ ಬದುಕು.

ಒಲವಿನ ಕನಸಿನ ಬಣ್ಣದ ಬದುಕು




ತೊಲಗಲಿ ಮನುಷ್ಯನ ಕಲ್ಮಶ ಕೊಳಕು
ಪಾಪ ಮೋಸವ ಇಲ್ಲಿಗೆ ಸಾಕು
ಅಹಂಕಾರ ದೌರ್ಜನ್ಯ ತಿಪ್ಪೆಗೆ ಹಾಕು..
ಮೂಡಲಿ ನಿತ್ಯ ಬಣ್ಣದ ಚಿತ್ತಾರ
ಬದುಕಾಗಲಿ ಕಾಮನ ಬಿಲ್ಲಿನಂತೆ ಸುಂದರ
ಜೀವನದ ಬಂಡಿ ಸಾಗಲಿ ವಿಸ್ತಾರ
ನೆನಪಿರಲಿ ಒಲವೇ ಜೀವನ ಸಾಕ್ಷಾತ್ಕಾರ..
ಮುಖಕ್ಕೆ ಬಣ್ಣ ಹಚ್ಚಿದರೆ ಒಳ್ಳೆಯದು
ನಾಲಿಗೆಗೆ ಬಣ್ಣ ಬಳಿದರೇ ಒಳಿತಾಗದು
ಬಣ್ಣದ ಮಾತುಗಳಿಂದ ದೂರ ಸರಿದು
ಬದುಕು ಸಾಗಿಸೋಣ ಒಳಮನಸು ತೆಗೆದು..
ಕ್ಷಣಕ್ಕೊಮ್ಮೆ ಬಣ್ಣ ಬದಲಾಯಿಸದಿರಿ
ಊಸರವಳ್ಳಿಯಂತೆ
ಬಣ್ಣವಿದ್ದರೆ ಇರಲಿ ನಗುವ ಚಿಟ್ಟೆಯಂತೆ
ಆಕರ್ಷಕವಾಗಿರೋಣ ಗರಿ ಬಿಚ್ಚುವ
ನವಿಲಿನಂತೆ
ಕಪ್ಪಾಗಿದ್ದರೂ ಹಂಚಿ ತಿನ್ನೋಣ ಕಾಗೆಯಂತೆ..
ಮುತ್ತು.ಯ.ವಡ್ಡರ( ಶಿಕ್ಷಕರು)ಬಾಗಲಕೋಟMob-9845568484 ಮತ್ತು