“ಚಿರಿಬಿ ಗ್ರಾಮದಲ್ಲಿ ರೈತ ದಿನಾಚರಣೆ, ಕಿಸಾನ್ ಗೋಷ್ಠಿ ಕಾರ್ಯಕ್ರಮ”.
ಚಿರಿಬಿ ಡಿಸೆಂಬರ್.24

ಕೊಟ್ಟೂರು ತಾಲೂಕಿನ ಚಿರಿಬಿ ಗ್ರಾಮ ಪಂಚಾಯಿತಿಯಲ್ಲಿ ರೈತ ದಿನಾಚರಣೆ ಹಾಗೂ ಕಿಸಾನ್ ಗೋಷ್ಠಿ ಕಾರ್ಯಕ್ರಮ ಕೃಷಿ ಇಲಾಖೆಯವರು ಶನಿವಾರ ದಂದು ಹಮ್ಮಿಕೊಂಡಿದ್ದರು.ಕೃಷಿ ಅಧಿಕಾರಿಗಳಾದ ಶಾಮ ಸುಂದರ್ ಮಾತನಾಡಿ ರೈತ ಸಂಪರ್ಕ ಕೇಂದ್ರಕ್ಕೆ ನೇರವಾಗಿ ಬಂದು ನಮ್ಮನ್ನು ಭೇಟಿ ಮಾಡಿ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆದು ಕೊಳ್ಳಿ ಎಂದು ಹೇಳಿದರು.ಕೃಷಿ ಸಂಪನ್ಮೂಲ ಮಾತನಾಡಿ ತಿಪ್ಪೇಸ್ವಾಮಿ ರೈತರು ಬೆಳೆಯುವ ಬೆಳೆಯ ಬಗ್ಗೆ ವಿವರಣೆ ನೀಡಿದರು.

ಜಿಲ್ಲಾ ಕಾರ್ಯಾಧ್ಯಕ್ಷ ಕೆ ಎಸ್ ಜಯಪ್ರಕಾಶ ನಾಯ್ಕ ಮಾತನಾಡಿ ಕೊಟ್ಟೂರು ತಾಲೂಕಿನಲ್ಲಿ ಮೊದಲನೆ ಬಾರಿಗೆ ಕೃಷಿ ಇಲಾಖೆಯವರು ರೈತ ದಿನಾಚರಣೆಯನ್ನು ಹಮ್ಮಿ ಕೊಂಡಿರುವುದು ತುಂಬಾ ಸಂತೋಷವಾಗಿದೆ.ಮತ್ತು ಆಯುರ್ವೆದಿಕ್ ಔಷದಿಗೆ ಹೆಚ್ಚಿನ ಪ್ರಾಮುಖ್ಯತೆ ಕೂಡಿ ಎ೦ದು ಹೇಳಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೇಖಾ, ಓಬಜ್ಜ ಉಪಾಧ್ಯಕ್ಷ ಗಂಗಾಧರ ಸದಸ್ಯರಾದ ಮೂಗನ ಗೌಡ್ರು, ಹನುಮಂತಪ್ಪ, ಭೀಮಪ್ಪ ,ವೀರಯ್ಯ ,ಅಶೋಕ, ತಾಲೂಕಾ ಉಪಾದ್ಯಕ್ಷ ರಮೇಶನಾಯ್ಕ ರೈತರ ಸಮಸ್ಯೆಗಳನ್ನು ಹೇಳಿದರು. ತಾಲೂಕಾ ಅಧ್ಯಕ್ಷ ಪಿ ಮಂಜುನಾಥ , ಜಿಲ್ಲಾ ಮುಖಂಡರಾದ ಕೊಟ್ರಯ್ಯಸ್ವಾಮಿ ಶೇಖರ ನಾಯ್ಕ, ನಿಲಕಂಠನ ಗೌಡ್ರು ಕೃಷಿ ಇಲಾಖೆಯ ತಿಮ್ಮಣ್ಣ, ಸಿಬ್ಬಂದಿ ವರ್ಗದವರಿದ್ದರು ಹಾಗೂ ಊರಿನ ಗ್ರಾಮಸ್ಥರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು