ನಾಯಕನಹಟ್ಟಿ ರಥೋತ್ಸವಕ್ಕೆ ಆಗಮಿಸಲಿರುವ ಸುಮಾರು ಐದಾರು ಲಕ್ಷ ಭಕ್ತಾಧಿಗಳಿಗೆ ವ್ಯವಸ್ಥಿತವಾಗಿ ನೋಡಿ ಕೊಳ್ಳವ – ಜಿಲ್ಲಾಡಳಿತ.
ನಾಯಕನಹಟ್ಟಿ ಮಾರ್ಚ್.25

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ನಾಯಕನಹಟ್ಟಿ ಹೋಬಳಿ ಗ್ರಾಮದಲ್ಲಿ ಶ್ರೀ ಗುರು ನಾಯಕನಹಟ್ಟಿ ಪಂಚಗಣಾಧೀಶರಲ್ಲಿ ಒಬ್ಬರಾದ ತಿಪ್ಪೇರುದ್ರ ಸ್ವಾಮಿಯ ರಥೋತ್ಸವ 26.3.2024 ರಂದು ಚಿತ್ತಾ ನಕ್ಷತ್ರದ ಗಳಿಗೆಯಲ್ಲಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ರಥೋತ್ಸವ ನಡೆಯಲಿದೆ ಪವಾಡ ಪುರುಷ ಕಾಯಕ ಯೋಗಿ ಕೆರೆಕಟ್ಗಳನ್ನು ನಿರ್ಮಿಸಿದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದಲೂ ಐದಾರು ಲಕ್ಷ ಭಕ್ತಾದಿಗಳು ಬಂದು ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ರಥೋತ್ಸವವನ್ನು ನೋಡಿ ಸಂತೃಪ್ತರಾಗುತ್ತಾರೆ ಭಕ್ತಾದಿಗಳು ರಥ ಚಲಿಸುವಾಗ ಕಾಳುಮೆಣಸು ದವನ ಭಕ್ತಾದಿಗಳು ರಥಕ್ಕೆ ಎಸೆಯುತ್ತಾರೆ ತೆಂಗಿನಕಾಯಿ ಹೊಡೆಯುತ್ತಾರೆ ಬಾಳೆಹಣ್ಣು ಸಹ ಎಸೆಯುತ್ತಾರೆ ಮತ್ತು ಕಾಳು ಮೆಣಸು ಭಕ್ತಾದಿಗಳು ಹುಡುಕಿ ಕೊಂಡು ಅವರವರ ಮನೆಗಳಿಗೆ ತರುತ್ತಾರೆ ಇದು ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಪ್ರಸಾದ ಎಂದು ತಿಳಿಯುತ್ತಾರೆ ಈ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ರಥ ಜಿಲ್ಲೆಯಲ್ಲಿ ಅತಿ ಎತ್ತರವಾದ ರಥ ರಥದಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯು ಬಂದು ಕುಳಿತಾಗ ಪೂಜೆ ನೈವೇದ್ಯ ಮಂಗಳಾರತಿ ಮಾಡಿ ರಥವನ್ನು ಚಿತ್ತಾ ನಕ್ಷತ್ರ ಟೈಮಿಗೆ ರಥ ಮುಂದಕ್ಕೆ ಚಲಿಸುತ್ತದೆ ಈ ರಥವನ್ನು ನೋಡಿ ಬಂದಿರ್ತಕ್ಕಂತಹ ಭಕ್ತಾದಿಗಳು ಮನದಲ್ಲಿ ಅಂದು ಕೊಂಡಂತೆ ಕೆಲಸಗಳು ನೆರವೇರುತ್ತವೆ ಎಂದು ಭಕ್ತಾದಿಗಳ ನಂಬಿಕೆ ಇದೆ ಇಲ್ಲಿ ಭಕ್ತಾದಿಗಳಿಗೆಲ್ಲಾ ಅನ್ನ ಸಂತರ್ಪಣೆ ಕುಡಿಯುವ ನೀರಿನ ವ್ಯವಸ್ಥೆ ವರಮಠದಲ್ಲಿ ದಾಸೋಹ ನಡೆಯುತ್ತವೆ ಜಿಲ್ಲಾ ಪೊಲೀಸ್ ಇಲಾಖೆ ನಾಯಕನಹಟ್ಟಿ ಜಾತ್ರೆಗೆ ಜವಾಬ್ದಾರಿ ತೆಗೆದುಕೊಂಡು ಯಾವುದೇ ಅಹಿತಕರ ಘಟನೆಗಳು ನಡೆಯದ ಹಾಗೆ ಪೋಲಿಸ್ ಇಲಾಖೆ ಮುಂದಾಳತ್ವ ವಹಿಸಿಕೊಂಡಿದೆ ಮತ್ತು ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ ಪೊಲೀಸ್ ಇಲಾಖೆ ಜವಾಬ್ದಾರಿಯಲ್ಲ ನೋಡಿ ಕೊಳ್ಳುತ್ತಾರೆ.

ಮತ್ತು ಅಲ್ಲಲ್ಲೇ ನೀರಿನ ಅರವಟ್ಟಿಗೆಗಳನ್ನು ಭಕ್ತಾದಿಗಳು ಕುಡಿಯಲಿಕ್ಕೆ ವ್ಯವಸ್ಥೆ ಮಾಡಿರುತ್ತಾರೆ ಚಿತ್ರದುರ್ಗ ಜಿಲ್ಲಾಧಿಕಾರಿಗಳು ತಿಪ್ಪೇರುದ್ರ ಸ್ವಾಮಿಯ ಜಾತ್ರೆಯ ಜವಾಬ್ದಾರಿಯನ್ನು ಬಹಳ ಅಚ್ಚು ಕಟ್ಟಿನಿಂದ ನೆರವೇರಿಸುತ್ತಾರೆ ಮತ್ತು ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಸಹ ಈ ಜಾತ್ರೆಗೆ ರಥೋತ್ಸವ ನೋಡಲಿಕ್ಕೆ ಆಗಮಿಸಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ದರ್ಶನವನ್ನು ಪಡೆದು ಸಂತೃಪ್ತರಾಗುತ್ತಾರೆ ಕಾಯಕ ಯೋಗಿಯಂತೆ ಸರ್ಕಾರದ ಯೋಜನೆಗಳನ್ನು ನೀರಾವರಿ ಯೋಜನೆ ರೂಪಿಸಿ ಓಡಾಡುವಂತ ರಸ್ತೆಗಳು ಮತ್ತು ಸೇತುವೆಗಳು ನಾಯಕನಹಟ್ಟಿ ಸಂತೆ ಮಾರ್ಕೆಟ್ ಮಳಿಗೆಗಳು ಕೆರೆಗಳ ಪುನಶ್ಚೇತನ ಗೊಳಿಸಿ ಅಭಿವೃದ್ಧಿ ಮಾಡುವುದರಲ್ಲಿ ಯಶಸ್ಸು ಕಂಡ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ.ಹೊಂಬಾಳೆ ಮೊಳಕಾಲ್ಮುರು