ಡಿ.18 ರಂದು ಬೆಳಗಾವಿಯಲ್ಲಿ ಅತಿಥಿ ಶಿಕ್ಷಕ ರಿಂದ ಪ್ರತಿಭಟನೆ-ಶರಣಗೌಡ ಬಿರಾದಾರ.
ಸಿಂದಗಿ ಡಿ.11

ಕರ್ನಾಟಕ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಅತಿಥಿ ಶಿಕ್ಷಕರ ಸಂಘದ ಸಿಂದಗಿ ತಾಲೂಕ ಘಟಕ ದಿಂದ ಡಿ, 18 ರಂದು ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ಹಮ್ಮಿ ಕೊಳ್ಳಲಾಗಿದೆ ಅದಕ್ಕಾಗಿ ಹೆಚ್ಚಿನ ಜನ ಸಂಖ್ಯೆಯಲ್ಲಿ ತಾಲೂಕಿನಿಂದ ಅತಿಥಿ ಶಿಕ್ಷಕರು ಈ ಪ್ರತಿಭಟನೆಯಲ್ಲಿ ಭಾಗವಹಿಸ ಬೇಕೆಂದು ತಾಲೂಕ ಅಧ್ಯಕ್ಷ ಶರಣಗೌಡ ಬಿರಾದಾರ ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ, ಅವರು ಮುಂದಿನ ವರ್ಷದ ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಕಡ್ಡಾಯವಾಗಿ ಮೆರಿಟ್ ಪದ್ಧತಿ ಕೈ ಬಿಟ್ಟು ಸೇವಾ ಹಿರಿತನಕ್ಕೆ ಆದ್ಯತೆ ನೀಡಿ ಸರ್ಕಾರಿ ಸುತ್ತೋಲೆ ಹೊರಡಿಸ ಬೇಕು. ಪ್ರತಿ ಮಾಸಿಕ ಕನಿಷ್ಠ 30000/- ರೂಪಾಯಿ ಗೌರವ ಸಂಭಾವನೆ ಜಾರಿ ಗೊಳಿಸುವುದು. ಪ್ರತಿ ತಿಂಗಳಿಗೆ ಒಂದು ರಜೆಯಂತೆ ವರ್ಷಕ್ಕೆ 12 ತುರ್ತು ಸಾಂದರ್ಭಿಕ ರಜೆಯನ್ನು ಅಧಿಕೃತವಾಗಿ ಜಾರಿ ಗೊಳಿಸುವುದು. ಪ್ರತಿ ವರ್ಷವು ನಾವು ಕರ್ತವ್ಯ ನಿರ್ವಹಿಸಿದ ಶಾಲೆಯಿಂದ ಆಯಾ ಮುಖ್ಯ ಶಿಕ್ಷಕರು ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇವಾ ಪ್ರಮಾಣ ಪತ್ರ ನೀಡಬೇಕು. ಅತಿಥಿ ಶಿಕ್ಷಕ ಎಂಬ ಪದನಾಮ ತೆಗೆದು ಹಾಕಿ ನಮಗೆ ಅರೆಕಾಲಿಕ/ಹಂಗಾಮಿ/ಹಂಸು/ಹೊರಗುತ್ತಿಗೆ ಶಿಕ್ಷಕರು ಎಂದು ನೇಮಕಾತಿ ಮಾಡಿ ಕೊಳ್ಳಬೇಕು. ಕರ್ತವ್ಯದ ಅವಧಿಯಲ್ಲಿ ನಮ್ಮ ಮಹಿಳಾ ಶಿಕ್ಷಕರಿಗೆ ಗೌರವ ಸಂಭಾವನೆ ಸಹಿತ ಗರ್ಭಿಣಿ ರಜೆ ನೀಡುವುದು. ನಮಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು. ಸರ್ಕಾರಿ ಶಿಕ್ಷಕರ ನೇರ ನೇಮಕಾತಿಯಲ್ಲಿ ವಯಸ್ಸಿನ ಹಿರಿತನಕ್ಕೆ ವಿಶೇಷ ಆದ್ಯತೆ ನೀಡಿ ನಮ್ಮನ್ನು ಆಯ್ಕೆ ಮಾಡಿ ಕೊಳ್ಳಬೇಕುಸರ್ಕಾರಿ ಶಿಕ್ಷಕರಿಗೆ ಹಲವು ವಿಶೇಷ ಭತ್ಯೆ ನೀಡಿ ತರಬೇತಿಗಳನ್ನು ನೀಡುವಂತೆ, ನಮಗೂ ಕೂಡ ವಿಶೇಷ ಭತ್ಯೆ ನೀಡಿ, ವಿಶೇಷ ತರಬೇತಿಗಳನ್ನು ಕೊಡಬೇಕುದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಸರ್ಕಾರದ ಮಾದರಿಯಲ್ಲೇ ನಮ್ಮ ಕರ್ನಾಟಕ ಸರ್ಕಾರವು ಕೂಡ ಸುಪ್ರೀಂಕೋರ್ಟ್ ಆದೇಶದಂತೆ ನಮ್ಮನ್ನು ಸೇವಾ ಹಿರಿತನದ ಮೇಲೆ ಖಾಯಂ ಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡಲಾಗುವುದು ಅದಕ್ಕಾಗಿ ಎಲ್ಲಾ ಅತಿಥಿ ಶಿಕ್ಷಕರು ಭಾಗವಹಿಸ ಬೇಕಂದು ಹೇಳಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ. ಬಿ.ಹರಿಜನ.ಇಂಡಿ.ವಿಜಯಪುರ