ಶ್ರೀಶಾರದಾಶ್ರಮದಲ್ಲಿ ಶ್ರೀಮದ್ ಭಾಗವತ – ಪ್ರವಚನ ಸಪ್ತಾಹ.
ಚಳ್ಳಕೆರೆ ಜೂ. 26

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಜುಲೈ 3 ರ ಗುರುವಾರ ದಿಂದ ಜುಲೈ 9 ರ ಬುಧವಾರದ ವರೆಗೆ ಪ್ರತಿದಿನ ಸಾಯಂಕಾಲ 5.30 ರಿಂದ 7.30ರ ವರೆಗೆ ಮಾತಾಜೀ ಅನನ್ಯಮಯೀ, ವೈ ರಾಜಾರಾಮ್ ಗುರುಗಳು, ಸ್ವಾಮಿ ನಿರ್ಭಯಾನಂದ ಸರಸ್ವತಿ,ಮಾತಾಜೀ ಅಮೋಘಮಯೀ.

ಸ್ವಾಮಿ ಮಂಗಳನಾಥಾನಂದಜೀ, ಶ್ರೀಮತಿ ತೇಜಸ್ವಿನಿ, ಶ್ರೀಸಂದೀಪ ವಸಿಷ್ಠ, ಪೂಜ್ಯ ಶ್ರೀ ವೈ ನರಹರಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿಶೇಷ ಭಜನೆ ಹಾಗೂ ಶ್ರೀಮದ್ ಭಾಗವತದ ವಿವಿಧ ವಿಷಯಗಳ ಬಗ್ಗೆ ಪ್ರವಚನ ಕಾರ್ಯಕ್ರಮವನ್ನು ನಡೆಸಿ ಕೊಡಲಿದ್ದಾರೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ-ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.