ಸಡಗರ ಸಂಭ್ರಮದಲ್ಲಿ ಕ್ರಿಸ್ ಮಸ್ ಆಚರಣೆ.
ಹೊಸಪೇಟೆ ಡಿಸೆಂಬರ್.26

ಕ್ರಿಸ್ತನು ಗೋದಲಿಯಲ್ಲಿ ಹುಟ್ಟಿದನು ಚರ್ಚ್ ನ ಹೊರ ಅವರಣದಲ್ಲಿ ಗೋದಲಿಯನ್ನು ನಿರ್ಮಿಸಿ ಅದರಲ್ಲಿ ಬಾಲ ಯೇಸವಿನ ಪ್ರತಿಮೆ ಇರಿಸಿ ಅದರ ಸುತ್ತ ಆತನನ್ನು ಭಕ್ತಿಯಿಂದ ಆರಾಧಿಸುವ ವೃಂದವನ್ನು ಇರಿಸಿ ಕ್ರಿಸ್ತನ ಜನನದ ಸಂತೋಷವನ್ನು.ಎಲ್ .ಎಫ್. ಎಸ್ . ಶಾಲೆಯ ಹತ್ತಿರ ಇರುವ ಕ್ಯಾಥೊಲಿಕ್ ಕ್ರೈಸ್ತ ದೇವಾಲಯದಲ್ಲಿ ಆಚರಿಸಲಾಯಿತು.24ರ ತಡರಾತ್ರಿಯಲ್ಲಿಯೇ ಪ್ರಾರಂಭವಾದ ಸ್ತುತಿ, ಸ್ತೋತ್ರ ವಿಧಾನಗಳು ಕ್ರೈಸ್ತರು ಯೇಸುವಿನ ಜನನದಲ್ಲಿರಿಸಿದ ನಂಬಿಕೆಯನ್ನು ತೋರಿಸಿತು. ಈ ದಿನಕ್ಕಾಗಿ ಸುಮಾರು ಒಂದು ತಿಂಗಳಿನಿಂದ ಹಬ್ಬದ ತಯಾರಿ ನಡೆಯುತ್ತಿತ್ತು ,ಚಿಕ್ಕ ಮಕ್ಕಳು,ಹಾಗೂ ಹಿರಿಯರು ಕೂಡಾ ಮಧ್ಯೆ ರಾತ್ರಿಯ ಪೂಜಾ ವಿಧಾನಗಳಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತ್ತು.ಬೆಳಗ್ಗೆ ಪ್ರಾರ್ಥನೆ ಮಾಡಿದ ನೂರಾರು ಕ್ರೈಸ್ತರು ಯೇಸುವಿನ ಭಕ್ತರು ಅನುಯಾಯಿಗಳು ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಿದರು ಭಕ್ತಿ ಪಾತ್ರಕ್ಕೆ ಸಾಕ್ಷೀಯಾದರು. ದೇವಾಲಯದ ಗುರುಗಳಾದ ಫಾದರ್ ಥಾಮಸ್ ಮೈಕೆಲ್ ನೇತೃತ್ವದಲ್ಲಿ ಹಬ್ಬದ ಆಚರಣೆ ಮಾಡಲಾಯಿತು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್ ಹೊಸಪೇಟೆ