ಕೊಡಗು ಜಿಲ್ಲಾ ಸಂಚಾಲಕರಾಗಿ ಸತೀಶ್ ಆಯ್ಕೆ.
ಬೆಂಗಳೂರು ಡಿಸೆಂಬರ್.27





ಕರ್ನಾಟಕ ದಲಿತ ಸಂಘರ್ಷ ಸಮಿತಿ, ಮಹಾತ್ಮ ಪ್ರೊll ಬಿ. ಕೃಷ್ಣಪ್ಪ ಸ್ಥಾಪಿತ ರಿ ನಂ 386/2020–21, ಸಂಘಟನೆಯ ರಾಜ್ಯ ಸಮಿತಿ ಬೆಂಗಳೂರಿನ ಹೋಟೆಲ್ ಕಪಿಲಾ ರೆಸಿಡೆನ್ಸಿ ಯಲ್ಲಿ ಏರ್ಪಡಿಸಲಾಗಿದ್ದು ಈ ಸಭೆಯಲ್ಲಿ ಕೊಡಗು ಜಿಲ್ಲೆಯಿಂದ ಆಗಮಿಸಿರ ತಕ್ಕಂತ ಕಾರ್ಯಕರ್ತರು ಭಾಗವಹಿಸಿ ಕೊಡುಗು ಜಿಲ್ಲೆಯಲ್ಲಿ ನಮ್ಮ ಸಂಘಟನೆಯ ಒಂದು ಸಂಘವನ್ನು ಕೊಡ ಬೇಕೆಂದು ಕೋರಿ ಕೊಂಡ ಮೆರೆಗೆ, ರಾಜ್ಯ ಸಂಚಾಲಕರಾದ ಡಿ ಆರ್ ಪಾಂಡುರಂಗಸ್ವಾಮಿ ರವರ ಅಧ್ಯಕ್ಷತೆಯಲ್ಲಿ ಕೊಡಗು ಜಿಲ್ಲೆಯ ಗೋಣಿಕೊಪ್ಪದ ಸತೀಶ್ ರವರನ್ನು ಕೊಡಗು ಜಿಲ್ಲಾ ಸಂಚಾಲಕರಾಗಿ ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.ಟಿ ಎನ್ ಗೋವಿಂದಪ್ಪ ರವರನ್ನು ರಾಜ್ಯ ಸಂಘಟನಾ ಸಂಚಾಲಕರಾಗಿ ಆಯ್ಕೆ ಮಾಡಲಾಯಿತು. ಲಕ್ಷ್ಮಿರವನ್ನು ಮಹಿಳಾ ಘಟಕಕ್ಕೆ ಆಯ್ಕೆ ಮಾಡಲಾಯಿತು. ಸಾಗರ ದ ಲಲಿತಮ್ಮ, ಬಾಳೆಹೊನ್ನೂರಿನ ಭವಾನಿ ರವರನ್ನು ಮಹಿಳಾ ಘಟಕಕ್ಕೆ ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್. ವೆಂಕಟೇಶ್, ಕೋಡಗಲ್, ರಮೇಶ್, ಭರ್ಮಪ್ಪ, ಮುನಿಯಪ್ಪ, ದುರ್ಗಾ ದಾಸ್, ಬೆಂಗಳೂರು ವಿಭಾಗೀಯ ಸಂಚಾಲಕರಾದ ಮ್ಯಾಥ್ಯೂ, ಮುನಿಯಪ್ಪನವರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ