ರಾಜ್ಯ ರೈತ ಸಂಘಟನೆಯಿಂದ ಹೆಸರು ಬೆಂಬಲ ಬೆಲೆ ಘೋಷಣೆ ಮಾಡಲು ಖಂಡಿಸಿ – ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.
ಕುಕನೂರು ಜು.29

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾಗದಲ್ಲಿ ರೈತರು ಹೆಸರು ಬೆಳೆ ಬೆಳೆದಿದ್ದು. ಹೆಸರು ಬೆಳೆ ಜಿಟಿಜಿಟಿ ಮಳೆಗೆ ಹೆಸರು ಬೆಳೆ ಅಲ್ಪ ಸ್ವಲ್ಪ ಉಳಿದು ಕೊಂಡ ಹೆಸರು ಕಾಳಿಗೆ 10. ರಿಂದ 11. ಸಾವಿರ. ರೂಪಾಯಿಗೆ ಹೆಸರು ಕಾಳಿಗೆ ಶೀಘ್ರದಲ್ಲಿ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ ಕೇಂದ್ರ ಪ್ರಾರಂಭ ಮಾಡುವಂತೆ. ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಇವರು ಖಂಡಿಸಿ ಕುಕನೂರು ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಶಿರಸ್ತೇದಾರರಾದ ಮಹಮ್ಮದ್ ಮುಸ್ತಫಾ ಇವರು ಮೂಲಕ ಸಿಎಂ ಸಿದ್ದರಾಮಯ್ಯ ನವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಮನವಿ ಪತ್ರ ಸ್ವೀಕರಿಸಿದ ಶಿರಸ್ತೇದಾರರಾದ ಮಹಮ್ಮದ್ ಮುಸ್ತಫಾ ಇವರು ನಿಮ್ಮ ರೈತ ಸಂಘದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಕಳಿಸಿ ಕೊಡುತ್ತೇವೆ ಎಂದು ತಿಳಿಸಿದರು.ಈ ವರ್ಷ ನಿರಂತರ ಮೊಡ ಕವಿದ ವಾತಾವರಣ ದಿಂದ ಹೆಸರು ಬೆಳೆಗಳು ಹಳದಿ ರೋಗ ಬುದಿ ರೋಗ ನಂಜಾಣು ರೋಗ ದಿಂದ ಹೆಸರು ಬೆಳೆ ಹಾಳಾಗಿದ್ದು ಸರ್ಕಾರ ಹಾಳಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಮುಂದಿನ ದಿನಗಳಲ್ಲಿ ಬೆಳೆ ವಿಮೆ ಕೊಡಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ರೈತ ಸಂಘದ ಕಾರ್ಯಕರ್ತರರಾದ ಅಣಪ್ಪ ನೆರೇಗಲ್ಲ್. ದೇವಿಂದ್ರಪ್ಪ ಗಂಗೊಜಿ. ಮಾರುತಿ ವಾಲಿಕಾರ. ಮಂಜುನಾಥ್ ಪೂಜಾರ. ಈರಣ್ಣ ಯಾಳಗಿ. ಈ ವೇಳೆಯಲ್ಲಿ ಅನೇಕ ರೈತರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್ ಕಿಳ್ಳಿ ಇಲಕಲ್ಲ.