ಸೊಳ್ಳೆಗಳ ಉತ್ಪತ್ತಿ ತಾಣಗಳ ನಿರ್ಮೂಲನೆ – ನಮ್ಮ ಗುರಿ.
ಬೆನಕಟ್ಟಿ ಜು.25

ಬಾಗಲಕೋಟೆ ಉಪಕೇಂದ್ರ ಬೆನಕಟ್ಟಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ “ನಿಮ್ಮ ಆರೋಗ್ಯ ನಮ್ಮ ಬದ್ಧತೆ” ಸಾಂಕ್ರಾಮಿಕ ರೋಗಗಳ ತಡೆಗೆ ಮುಂಜಾಗ್ರತೆ ಆರೋಗ್ಯ ಅರಿವು ಜಾಗೃತಿ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್ ಎಸ್ ಅಂಗಡಿಯವರು, ಸರಳವಾಗಿ ವೈಯಕ್ತಿಕ ಸ್ವಚ್ಛತೆ ಪರಿಸರ ಸ್ವಚ್ಛತೆ ಮುಂಜಾಗ್ರತೆ ಕ್ರಮಗಳ ಪಾಲನಯೇ ಮುಖ್ಯ. ಸೊಳ್ಳೆಗಳು ಕಚ್ಚುವಿಕೆಯಿಂದ ಡೇಂಗ್ಯು, ಚಿಕೂನ್ ಗುನ್ಯಾ, ಮಲೇರಿಯಾ, ಆನೆಕಾಲು ರೋಗ, ಮೆದುಳು ಜ್ವರ ಸಾಂಕ್ರಾಮಿಕವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. ಕೀಟಜನ್ಯ ರೋಗಗಳ ತಡೆಗೆ, ಮುಂಜಾಗ್ರತೆಯಾಗಿ ನೀರಿನ ಸಂಗ್ರಹಗಳ ಮೇಲೆ ತಪ್ಪದೇ ಮುಚ್ಚಳಿಕೆ ಹಾಕಬೇಕು ಒಡೆದ ಬಾಟಲ್, ಟೈರ್ ಟ್ಯೂಬ್, ಟೆಂಗಿನ ಚಿಪ್ಪು, ಕಸ ವಿಲೇವಾರಿ ಮಾಡಬೇಕು ಸೊಳ್ಳೆ ಪರದೆ ನಿರೋಧಕ ಬಳಸಬೇಕು. ಈಡೀಜ್ ಇಜಿಪ್ತೆ ಲಾರ್ವಾ ಮುಕ್ತಕ್ಕಾಗಿ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮಾಡೋಣ ಎಂದರು.ಗ್ರಾಮದಲ್ಲಿ ಮನೆ ಮನೆ ಭೇಟಿ ನೀಡಿ ಈಡೀಜ್ ಇಜಿಪ್ತೆ ಲಾರ್ವಾ ಉತ್ಪತ್ತಿ ತಾಣಗಳ ಸಮೀಕ್ಷೆ ನಡೆಸಿ ಡೆಂಗ್ಯೂ ಬಗ್ಗೆ ಮಾಹಿತಿ ನೀಡಿ ಯಾರಿಗಾದರೂ ಜ್ವರ ನಿಶ್ಯಕ್ತಿ ಮೈಮೇಲೆ ಗಂಧೆಗಳು ಕಾಣಿಸಿದರೇ ನೀರ್ಲಕ್ಷ್ಯ ಮಾಡಬೇಡಿ ಸಮೀಪದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಚಿಕಿತ್ಸೆ ಉಚಿತವಾಗಿರುತ್ತದೆ. ವಯಕ್ತಿಕ ಸ್ವಚ್ಛತೆ ಸುತ್ತ ಮುತ್ತ ಪರಿಸರ ಸ್ವಚ್ಛತೆ ಶುದ್ಧ ನೀರು ಸೇವನೆ ಮಾಡಬೇಕು. ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಈಡೀಜ್ ಇಜಿಪ್ತೆ ಲಾರ್ವಾ ಪ್ರಾತ್ಯೆಕ್ಷತೆಯ ಮೂಲಕ ಮಾಹಿತಿ ನೀಡಲಾಯಿತು. ಸಾಂಕ್ರಾಮಿಕ ರೋಗಗಳ ತಡೆಗೆ ಮುಂಜಾಗ್ರತೆ ಅರಿವು ಜಾಗೃತಿ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಸಂಗಪ್ಪ ಹುನಗುಂದ, ಸಹ ಶಿಕ್ಷಕರಾದ ರಾಮಣ್ಣ ಅಂತರದಾನಿ, ನಾರಾಯಣಗೌಡ ಪಾಟೀಲ್, ರಾಜೇಶ್ ಹುಲಗನ್ನವರ, ಗುರುಮಾತೆಯರಾದ, ಭಾರತಿ ಗಣಿಯಾರ, ಅನಿತಾ ಗದಿಗೆನ್ನವರ, ಸುನಿತಾ ಮಾಸ್ತಿ ಶಾಲಾ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.