ತರೀಕೆರೆ ಮತಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಗೆಲುವು ಗ್ಯಾರಂಟಿ ಎಂದು ಲೋಕೇಶ್ ತಾಳಿಕಟ್ಟೆ

ತರೀಕೆರೆ ಮಾ, 23 — ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಅಸಂವಿಧಾನಿಕ ನೀತಿಯಿಂದ ಜನ ಬೇಸತ್ತಿದ್ದಾರೆ, ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ ಎಂದು ಕಾಂಗ್ರೆಸ್ ಆಕಾಂಕ್ಷಿ ಯಾದ ಲೋಕೇಶ್ ತಾಳಿಕಟ್ಟೆ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶಿಕ್ಷಣದ ಖಾಸಗೀಕರಣ,ವ್ಯಾಪಾರಿಕರಣ, ಮತ್ತು ಕೋಮುವಾದೀ ಕರಣ, ಬೆಲೆ ಏರಿಕೆ,ಕಂಡರಿಯದ ನಿರುದ್ಯೋಗ ಸಮಸ್ಯೆ,ದೇಶದ ಸಾರ್ವಜನಿಕ ಆಸ್ತಿಗಳ ಮಾರಾಟ, ಧರ್ಮಾಂದತೆ ಕೋಮು ದಲ್ಲುರಿ ಇಂತಹ ಅಜಂಡಗಳನ್ನು ಇಟ್ಟುಕೊಂಡು ಇಡೀ ದೇಶವನ್ನು ಸಾಲದ ಕೂಪಕ್ಕೆ ತಳ್ಳಿ, ಅಶಾಂತಿಯನ್ನು ಸೃಷ್ಟಿಸಿ ಭ್ರಷ್ಟಾಚಾರ ತಾಂಡವಾಡುವಂತೆ ಮಾಡಿರುವ ಬಿಜೆಪಿ ಸರ್ಕಾರದ ವಿರುದ್ಧ ಜನ ಮತ ಚಲಾಯಿಸಲು ನಿರ್ಧರಿಸಿದ್ದಾರೆ. ತರೀಕೆರೆಯ ಶಾಸಕರ ಭ್ರಷ್ಟಾಚಾರ ಹಾಗೂ ಸೃಜನ ಪಕ್ಷಪಾತ ನಿಲುವುಗಳನ್ನು ನೋಡಿ ಜನ ಬೇಸತ್ತು ಈ ಬಾರಿ ಕಾಂಗ್ರೆಸ್ ಹೊಸ ಅಭ್ಯರ್ಥಿಗೆ ಟಿಕೆಟ್ ನೀಡಿದ ಪಕ್ಷದಲ್ಲಿ ಗೆಲ್ಲಿಸಲು ನಿರ್ಧರಿಸಿದ್ದಾರೆ.
ಕಳೆದ 15 ವರ್ಷಗಳಿಂದ ತರೀಕೆರೆ ತಾಲೂಕಿನ ಅತ್ಯಂತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ನೀಡುತ್ತಿರುವ ನಾನು ಕಳೆದ ಬಾರಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಲು ಬಯಸಿ ಸಂಘಟನೆ ಮಾಡಿದ್ದೆ. ಆದರೆ ಅಂದು ಪಕ್ಷ ತೆಗೆದುಕೊಂಡ ತೀರ್ಮಾನವನ್ನು ಗೌರವಿಸಿ ಪಕ್ಷದ ಪರವಾಗಿ ಸತತವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಹಾಗೆಯೇ ಬಿಜೆಪಿ ಸರ್ಕಾರದ ದುರಾಡಳಿತ ಹಾಗೂ ಲಂಚಗುಳಿತನದ ವಿರುದ್ಧ ಹೋರಾಟ ಮಾಡಿದ್ದೇನೆ.
ಈ ಬಾರಿ ತರೀಕೆರೆ ತಾಲೂಕಿನ ಜನರ ಅಭಿಪ್ರಾಯದಂತೆ ನನಗೆ ಅವಕಾಶ ನೀಡಿದರೆ ಪ್ರಾಮಾಣಿಕವಾಗಿ ಕ್ಷೇತ್ರದಲ್ಲಿ ಶಿಕ್ಷಣ,ಉದ್ಯೋಗ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ,ಆರೋಗ್ಯ ಕೇಂದ್ರಗಳ ಅಭಿವೃದ್ಧಿ,ಇನ್ನೂ ಅನೇಕ ಸಮಸ್ಯೆಗಳ ನಿವಾರಣೆಯನ್ನು ಜನರ ಜೊತೆಯಲ್ಲಿ ಸೇರಿ ಬಗೆಹರಿಸಿ ತರೀಕೆರೆಯನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸುತ್ತೇನೆ. ತರೀಕೆರೆಯಲ್ಲಿ ಈ ಬಾರಿ ಕಾಂಗ್ರೆಸ್ ಗ್ಯಾರಂಟಿ,ಎಂಬ ಶೀರ್ಷಿಕೆಯ ಆಂದೋಲನವನ್ನು ಮುಂದಿನ ಸೋಮವಾರದಿಂದ ಕ್ಷೇತ್ರದ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್ ತರೀಕೆರೆ