ಜಿ.ಬಿ.ಹಟ್ಟಿ – ಕರ್ನಾಟಕ ದಲಿತ ಸಂಘರ್ಷ ಸಮಿತಿ. ಗ್ರಾಮ ಶಾಖೆ ಉದ್ಘಾಟನೆ.
ಗಡ್ಡದಬೋರಯ್ಯನಹಟ್ಟಿ ಡಿಸೆಂಬರ್.30

ಕೂಡ್ಲಿಗಿ ತಾಲೂಕಿನ ಗಡಿ ಗ್ರಾಮ (ಆರ್ನಾಳಹಟ್ಟಿ.) ಗಡ್ಡದಬೋರಯ್ಯನಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊಫೆಸರ್ ಬಿ.ಕೃಷ್ಣಪ್ಪ ಬಣ ಗ್ರಾಮ ಶಾಖೆ ಉದ್ಘಾಟನೆ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ಮಾಜಿ ತಾಪಂ ಸದಸ್ಯೆ ಗುಡೇಕೋಟೆ ಎಂ ವಿಶಾಲಾಕ್ಷಿ ರಾಜಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿ ನಡೆಸಿದ ಚಳುವಳಿ ಒಂದು ಭಾರತದ ಸಂವಿಧಾನ ಬದ್ಧ ಆಶಯಗಳ ಚಳುವಳಿ ಮತ್ತು ಅಖಂಡ ಸಂವಿಧಾನದ ಆಶಯಗಳನ್ನು ತನ್ನ ಅಜೆಂಡಾವನ್ನಾಗಿಸಿ ಕೊಂಡಿರುವ ಏಕೈಕ ಸಂಘಟನೆ. ಆ ಎಲ್ಲಾ ಆಶಯ ಆದರ್ಶಗಳನ್ನು ಆಚರಣೆಗೆ ತರ ಬೇಕೆನ್ನುವುದು ಈ ಸಂಘಟನೆ ಹಾಗೂ ಚಳುವಳಿಯ ಆಶಯವಾಗಿದೆ. ಹಾಗೆ ನಮ್ಮ ಸಮುದಾಯದ ಯುವಕರು ಮೊದಲು ಶಿಕ್ಷಣವಂತರಾಗ ಬೇಕು ಅಂದಾಗ ಮಾತ್ರ ನಾವು ಮುಖ್ಯ ವಾಹಿನಿಗೆ ಬರಲು ಸಾಧ್ಯ, ಗ್ರಾಮದಲ್ಲಿ ಎಲ್ಲಾರು ಯಾವುದೇ ಗದ್ದಲ ಗಲಾಟೆ ಗಳಿಲ್ಲದೆ ಅಣ್ಣ ತಮ್ಮಂದಿರ ಹಾಗೆ ಒಂದು ಕುಟುಂಬ ದವರಂತೆ ಇದ್ದು ಸ್ನೇಹ ಸೌಹಾರ್ದತೆಯ ಸಂಕೇತವಾಗಿ ಬಾಳಬೇಕು ಎಂದು ತಿಳಿಸಿದರು.ಈ ಕಾರ್ಯಕ್ರಮದ ಅಧ್ಯಕ್ಷತೆ ತಾಲೂಕು ಸಂಚಾಲಕ ಹೊಸಹಳ್ಳಿ ಎಳನೀರು ಗಂಗಣ್ಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಗೆದ್ದಲಗಟ್ಟೆ ಹನುಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಚಿರತಗುಂಡು ಗ್ರಾ ಪಂ ಅಧ್ಯಕ್ಷೆ ನಾಗರತ್ನಮ್ಮ ಕರಿಬಸಪ್ಪ, ಡಿ.ಎಂ.ಈಶ್ವರಪ್ಪ, ಬಿ.ಟಿ.ಗುದ್ದಿ ದುರುಗೇಶ್ ಜಿಲ್ಲಾ ಸಂಘಟನಾ ಸಂಚಾಲಕರು, ಗುಡೇಕೋಟೆ ನಾಗರಾಜ್, ಸಿ ಎಸ್ ಪುರ ಮಂಜು, ಮಾರಮ್ಮನಹಳ್ಳಿ ನಾಗರಾಜ್ ವಕೀಲರು, ಬಸಪ್ಪ, ತಾಲೂಕು ಸಂಘಟನಾ ಸಂಚಾಲಕ ಬಣವಿಕಲ್ಲು ಚೌಡೇಶ್, ರಾಷ್ಟ್ರೀಯ ಕಾಂಗ್ರೆಸ್ ವಿದ್ಯಾರ್ಥಿ ಘಟಕ ಅಧ್ಯಕ್ಷ ಮನೋಹರ್ ಹೆಗ್ಡೆ, ಗ್ರಾಮ ಘಟಕ ಸಂಚಾಲಕ ಎನ್.ಎಸ್.ಗಂಗಾಧರ, ಸಂಘಟನಾ ಸಂಚಾಲಕ ಬಿ.ಮಲ್ಲಿಕಾರ್ಜುನ್, ಪಾಪಣ್ಣ, ಶೇಖರಪ್ಪ, ಯಶವಂತ್, ತಿಪ್ಪೇಸ್ವಾಮಿ, ಖಜಾಂಚಿ ಅಂಜೆನೇಯ್ಯ, ಸದಸ್ಯರಾದ ಉಮೇಶ್, ಸೋಮಶೇಖರ್, ಶ್ರೀಧರ್, ತಿಪ್ಪೇಸ್ವಾಮಿ, ನಾಗರಾಜ್, ತಿಪ್ಪೇಸ್ವಾಮಿ,ರಾಮು, ಲಕ್ಷ್ಮಣ್, ರಾಮಚಂದ್ರಪ್ಪ, ಹೊನ್ನೂರಪ್ಪ, ಮೈಲಾರಿ, ಕೃಷ್ಣಮೂರ್ತಿ, ಮಂಜುನಾಥ್, ಮಲ್ಲಿಕಾರ್ಜುನ, ನಾಗರಾಜ್ ಸೇರಿದಂತೆ ಊರಿನ ಮುಖಂಡರು, ಗುಡೇಕೋಟೆ ಪೋಲೀಸ್ ಠಾಣೆಯ ಎಎಸ್ಐ ನಾಗರಾಜ್ ಆಚಾರಿ, ಸಿಬ್ಬಂದಿ ವರ್ಗದವರು, ತಾಲೂಕು ಡಿಎಸ್ಎಸ್ ಪದಾಧಿಕಾರಿಗಳು ಇತರರು ಇದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ