ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆ ಕಾರ್ಯಕ್ರಮ.

ಮರಿಯಮ್ಮನಹಳ್ಳಿ ಡಿಸೆಂಬರ್.31

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರಿಮನಹಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಗರಿಬೊಮ್ಮನಹಳ್ಳಿ ಶಾಸಕರಾದ ಶ್ರೀಯುತ ನೆಮಿರಾಜ್ ನಾಯ್ಕ್ ಅವರು ಯಾವುದೇ ಸರ್ಕಾರವು ಮಾಡದಂತಹ ಸಮಾಜ ಮುಖಿ ಕಾರ್ಯ ಕ್ರಮಗಳನ್ನು ಪರಮ ಪೂಜ್ಯ ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಡುತ್ತಿದ್ದು ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರಲು ಕಾರಣವೇ ಡಾ. ಡಿ.ವೀರೇಂದ್ರ. ಹೆಗ್ಗಡೆಯವರು ರಾಜ್ಯದ ಯಾವುದೇ ಗ್ರಾಮದಲ್ಲೂ ಕೂಡ ಧರ್ಮಸ್ಥಳ ಸಂಸ್ಥೆಯು ತನ್ನದೇ ಆದ ವಿಶೇಷ ಸ್ಥಾನ ಹೊಂದಿದೆ ಎಂದರು ಇದೇ ಸಂದರ್ಭದಲ್ಲಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ಗಣೇಶ್ ಬಿ ಸರ್ ಅವರು ಸದಸ್ಯರು ಸಂಘದಿಂದ ಪಡೆಯುವಂತಹ ಪ್ರಗತಿ ನಿಧಿಯನ್ನು ದುಂದು ವೆಚ್ಚಗಳಿಗೆ ಬಳಸದೆ ಉತ್ಪಾದಕ ನಿಧಿಗಳಿಗೆ ಬಳಸಿ ಕೊಂಡು ತಮ್ಮ ಜೀವನವನ್ನು ಕಟ್ಟಿ ಕೊಳ್ಳಬೇಕು ಬದುಕಿನಲ್ಲಿ ಶಿಸ್ತನ್ನು ಕಲಿತು ಕೊಳ್ಳಬೇಕು ಹಾಗೂ ತಮ್ಮ ಮಕ್ಕಳನ್ನು ಕೂಡ ಶಿಸ್ತಿನಿಂದ ಬೆಳೆಸ ಬೇಕು ವೈಯಕ್ತಿಕವಾಗಿ ಮಾಡುವ ಪೂಜೆಗಿಂತ ಸಾಮೂಹಿಕವಾಗಿ ಮಾಡುವ ಪೂಜೆಗೆ ಅತಿ ಹೆಚ್ಚು ಫಲ ಸಿಗುತ್ತದೆ,ಇಲ್ಲಿಯವರೆಗೆ ತಾಲೂಕಿನಲ್ಲಿ ವಾರಕ್ಕೆ ತಲಾ 10 ರೂ ನಂತೆ ಮಾಡಿದ ಉಳಿತಾಯ ಒಟ್ಟು ಹಣ 12 ಕೋಟಿ ಆಗಿದೆ ಇಷ್ಟು ಹಣವನ್ನು ನೀವೇ ಉಳಿತಾಯ ಮಾಡಿದ್ದೀರಿ ಶಿಸ್ತು ಬದ್ಧ ವ್ಯವಹಾರವನ್ನು ರೂಡಿಸಿ ಕೊಳ್ಳಿ ಎಂದರು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದಂತಹ ಶ್ರೀ ಶ್ರೀ ಶ್ರೀ ನಿರಂಜನ ಪ್ರಭು ದೇವರು ಮಹಾ ಸ್ವಾಮಿಗಳು ಒಪ್ಪತ್ತೇಶ್ವರ ಮಠ ನಾಗಲಾಪುರ ಇವರು ಡಾ. ವೀರೇಂದ್ರ ಹೆಗಡೆಯವರ ದೂರದೃಷ್ಟಿಯ ಕಾರ್ಯಕ್ರಮಗಳು ಮಗಳು ನಮ್ಮ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಿವೆ ಅವರ ನಿಸ್ವಾರ್ಥಮಯ ಸೇವೆಗಳು ಎಲ್ಲರಿಗೂ ಮಾದರಿಯಾಗು ವಂತಹದ್ದು ಎಂದು ಆಶೀರ್ವಚನ ನೀಡಿದರು ಹಾಗೂ ಇದೇ ಸಂದರ್ಭದಲ್ಲಿ ವಿಕಲ ಚೇತನರಿಗೆ ಸಲಕರಣೆ ವಿತರಣೆ, ಆರೋಗ್ಯ ರಕ್ಷಾ ಮಂಜುರಾತಿ ಪತ್ರ, ಅನುದಾನ ಮಂಜೂರಾತಿ ಪತ್ರ ವಿತರಿಸಲಾಯಿತು ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತರಾದ ಡಾ. ಮಾತಾ ಬಿ ಮಂಜಮ್ಮ ಜೋಗತಿ, ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಸತೀಶ್ ಶೆಟ್ಟಿ, ಶ್ರೀ ಎಚ್ ನಾಗರಾಜ್ ಉಪ ತಹಸಿಲ್ದಾರರು, ಪ್ರಮುಖರಾದ ಗುಂಡ ಸೋಮಣ್ಣ, ಮಂಜುನಾಥ್ ಹಾಗೂ ವಾರ್ಡ್ ನ ಪ್ರಮುಖರು ಉಪಸ್ಥಿತರಿದ್ದರು ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀ ಮಾರುತಿ ಅವರು ಸ್ವಾಗತಿಸಿದರು ತಾಲೂಕಿನ ಕೃಷಿ ಅಧಿಕಾರಿ ಶ್ರೀ ಚನ್ನಪ್ಪ ನಿರೂಪಿಸಿದರು ವಲಯದ ಮೇಲ್ವಿಚಾರಕ ಶ್ರೀ ವೆಂಕಟೇಶ್ ವಂದಿಸಿದರು ಸೇವಾ ಪ್ರತಿನಿಧಿಗಳಾದ ಮಂಜುಳಾ hv, ಮಂಜುಳ ಎಂ, ಉಮಾ ನಾಗರತ್ನ ಜಯಲಕ್ಷ್ಮಿ ಲಕ್ಷ್ಮಿ ಹಸೀನಾ ಕವಿತಾ ಲಲಿತಾ VLE ಶರಣಬಸವ ಇತರರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್. ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button