“ಹೊಸ ನಿರೀಕ್ಷೆಗಳಿಗೆ ಬುನದಿಯಾಗಲಿ ಈ ಹೊಸ ವರುಷ”.

ಹಳೆ ಬೇರು ಹೊಸ ಚಿಗುರು ಎಂಬಂತೆ ಹೊಸತನ ಎಂಬುದು ಚಿಮ್ಮುವ ಉತ್ಸಾಹದ ಕಾರಂಜಿ ಇದ್ದಂತೆ.ಹೊಸ ಮನೆ ಕಟ್ಟಿ, ಹೊಸ ಕಾರು ಖರೀದಿಸಿದಾಗ ಇರುವ ಸಂಭ್ರಮದಂತೆ ಹೊಸ ವರ್ಷದ ಆಗಮನವು ನಮ್ಮೆಲ್ಲರಿಗೂ ಸಂತೋಷ ಮತ್ತು ಸಡಗರದ ಸಂಭ್ರಮವಾಗಿರುತ್ತದೆ. ಹಬ್ಬ ಹರಿದಿನಗಳು, ಜಾತ್ರೆ ಉತ್ಸವಗಳು ಮನುಷ್ಯ ಜೀವನದಲ್ಲಿ ಜೀವನೋತ್ಸವ ತುಂಬುವ ಧಾರ್ಮಿಕತೆಯ ಒಂದು ಭಾಗಗಳು. ಹಾಗೆಯೇ ಹೊಸವರ್ಷದ ಆಗಮನವೂ ಕೂಡ ಕಳೆದ ವರ್ಷ ನಾವು ಹಾಕಿಕೊಂಡ ಕಾರ್ಯ ಯೋಜನೆಗಳನ್ನು ಪೂರ್ಣಗೊಳಿಸಿದ್ದೆಷ್ಟು, ಉಳಿದವು ಎಷ್ಟು ಅವುಗಳನ್ನು ಪೂರ್ಣಗೊಳಿಸಲು ನಾವು ಪರದಾಡಿದ್ದು, ಬಂದಂತಹ ತೊಡಕು ತೊಂದರೆಗಳು, ತೆಗೆದುಕೊಂಡ ನಿರ್ಧಾರಗಳಲ್ಲಿ ಸರಿ ತಪ್ಪುಗಳೆಷ್ಟು, ಸರಳ ಕಠಿಣಗಳೆಷ್ಟು ಎನ್ನುವುದನ್ನು ತಾಳೆ ಮಾಡಿ ನೋಡಲು ಹಳೆಯ ಮತ್ತು ಹೊಸತನ ಎನ್ನುವುದು ಕುಡಿಸಿ ಕಳೆಯುವ ಲೆಕ್ಕವಿದ್ದಂತೆ. ಒಂದು ಮರವು ಕೂಡ ಬಾನೆತ್ತರಕ್ಕೆ ಬೆಳೆಯಲು ತನ್ನ ಹಳೆಯ ತೊಗಟೆಯನ್ನು, ಹಣ್ಣಾದ ಎಲೆಗಳನ್ನು, ಉದುರಿಸಿ ಹೊಸ ಕಾಂಡ ಹೊಸ ಎಲೆಯ ಚಿಗುರುಗಳೊಂದಿಗೆ ತನ್ನ ಬೆಳವಣಿಗೆಗೆ ಜೀವರಸವನ್ನು ತುಂಬುತ್ತದೆ. ಆಗಸದೆತ್ತರಕ್ಕೆ ಹಾರುವ ರಣಹದ್ದು ಕೂಡ ತನ್ನಲ್ಲಿರುವ ಜೀವನೋತ್ಸಹ ಕಳೆದುಕೊಂಡಾಗ ತನ್ನ ಮೈ ಮೇಲಿರುವ ರೆಕ್ಕೆಯ ಪುಕ್ಕಗಳನ್ನು ತಾನೇ ಪರಚಿ ಕಿತ್ತುಕೊಂಡು ತನ್ನ ರೆಕ್ಕೆ ಮೇಲೆ ಹೊಸ ಪುಕ್ಕಗಳು ಬರುವವರೆಗೂ ಗುಹೆಯಿಂದ ಹೊರಬರದೆ ಹಸಿವು, ನೀರಡಿಕೆಯ ದಾಹವನ್ನು ತ್ಯಜಿಸುತ್ತದೆ. ಈಗ ನಾನು ಇಟ್ಟ ನೀರಿಕ್ಷೆಯವರೆಗೂ,ನೀರಿಕ್ಷೆಗಳ ಮೀರಿ ಹಾರ ಬಲ್ಲೆನು ಎನ್ನುವ ನಂಬಿಕೆ ಮತ್ತು ಆತ್ಮವಿಶ್ವಾಸ ಬಂದಾಗ ತನ್ನ ಚಟುವಟಿಕೆಯನ್ನು ಮರುಪ್ರಾರಂಭಿಸುತ್ತದೆ. ನಮ್ಮ ಪೂರ್ವಜರು ಕೂಡ ನಮ್ಮ ಮನುಸಂಕುಲದ ಒಳಿತಿಗಾಗಿ ನಿರಂತರ ದುಡಿಮೆಯಿಂದ ಬೇಸತ್ತ ಜೀವಕ್ಕೆ ಅಥವಾ ಒಬ್ಬರಿಗೊಬ್ಬರು ಬಿಡುವಿನ ಸಮಯ ಮಾಡಿಕೊಂಡು ಸಂತೋಷ ಮತ್ತು ಸಂಭ್ರಮ ಸಡಗರದಿಂದ ಹಬ್ಬ ಹರಿದಿನಗಳನ್ನಾಗಲಿ, ಮದುವೆ- ಮುಂಜಿವೆಗಳಾಗಲಿ ಹೀಗೆ ಹತ್ತು ಹಲವು ಸಾಂಪ್ರದಾಯಗಳನ್ನು ರೂಢಿಗಥವಾಗಿ ಆಚರಿಸುವ ವ್ಯವಸ್ಥೆಯನ್ನು ಜಾರಿಗೆ ತಂದರು. ಅದರಲ್ಲಿ ಹೊಸ ವರ್ಷವೂ ಕೂಡ ಒಂದಾಗಿದೆ. ಈ ಹೊಸ ವರ್ಷದ ಮುನ್ನೋಟವು ಹೊಸ ಯೋಚನೆ ಮತ್ತು ಯೋಜನೆಗಳಿಗೆ ಅಡಿಪಾಯ ಹಾಕಲು ಇದೊಂದು ಪ್ರಾರಂಭೋತ್ಸವ. ನಮ್ಮಿಂದ ಈ ಹೊಸ ವರ್ಷಕ್ಕೆ ಮತ್ತು ಈ ಹೊಸ ವರ್ಷದ 12 ತಿಂಗಳ ಪೂರೈಸುವುದರೊಳಗಡೆ ಎನೆಲ್ಲಾ ಬೇಡಿಕೆ ಮತ್ತು ಬಯಕೆ ಕನಸುಗಳನ್ನು ಈಡೇರಿಸಿಕೊಂಡು ಅದರಲ್ಲಿ ಜಯ ಮತ್ತು ಯಶಸ್ವಿ ಸಾಧಿಸಲು ನಮ್ಮಿಂದ ಅದೆೇಷ್ಟು ಸಾಧ್ಯ ಎನ್ನುವ ಕ್ರಿಯಾ ಯೋಜನೆಗೆ ವರದಿ ಸಿದ್ದಪಡಿಸಲು ಈ ಹೊಸ ವರ್ಷದ ಮೊದಲ ದಿನವೂ ಒಂದು ಶುಭ ದಿನವಾಗಿದೆ. ಹಿಂದಿನ ವರ್ಷ ನಮ್ಮ ಅದೆಷ್ಟು ಕನಸು ಬಯಕೆಗಳು ಹುಸಿಯಾಗಿ ಉಳಿದಿರುವವುಗಳಿಗೆ ಇರುವ ಅದೇ “ಭೂಮಿಗೆ ಮೇಘ ಮಳೆ ಸುರಿಸಿ ಹಸಿಯಾಗಿ ಹಹದಗೊಳಿಸಿದಂತೆ” ಸರಿಯಾದವುವುಗಳಿಗೆ ಮರುಜೀವ ನೀಡಿ ಅದರಲ್ಲಿ ಯಶಸ್ಸು ಸಾಧಿಸುವ ಮೂಲಕ “ಹೊಸ ನಿರೀಕ್ಷೆಗಳಿಗೆ ಬುನಾದಿಯಾಗಲಿ 2024ರ ಈ ಹೊಸ ವರುಷ. ತಮ್ಮೆಲ್ಲರಿಗೂ ಈ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
✍️:ಹನಮಂತ ಕುರಬರ.
ಮೊ:9632189967