ಕ್ಷೇತ್ರದ ಪ್ರತಿ ಗ್ರಾಮ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ಕೊಡವೆ – ಶಾಸಕ ಡಾ, ಶ್ರೀ ನಿವಾಸ್ ಎನ್.ಟಿ
ಕೂಡ್ಲಿಗಿ ಸ.05

ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್.ಟಿ. ಅವರು ಬುಧವಾರ ರಂದು 2023-24 ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಪಾಲಯ್ಯನ ಕೋಟೆ, ಸೂಲದಹಳ್ಳಿ, ಗುಣಸಾಗರ, ಗ್ರಾಮಗಳಲ್ಲಿ ಸಿ. ಸಿ. ರಸ್ತೆ ನಿರ್ಮಾಣದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು. ನಮ್ಮ ಕ್ಷೇತ್ರದಲ್ಲಿ ಬರುವ ಪ್ರತಿ ಗ್ರಾಮ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ಕೊಡುತ್ತಾ ಯಾವುದೇ ಹಳ್ಳಿಗಳನ್ನು ಕಡೆ ಗಣಿಸದೇ ಸರ್ವ ರೀತಿಯಲ್ಲಿ ಆಯಾ ಗ್ರಾಮದ ರಸ್ತೆ, ಚರಂಡಿ ವ್ಯವಸ್ಥೆ, ಕುಡಿಯುವ ನೀರು, ವಿದ್ಯುತ್ , ಗ್ರಾಮದ ಸ್ವಚ್ಚತೆ ಇನ್ನೂ ಹೆಚ್ಚಾಗಿ ಅಭಿವೃದ್ಧಿಗೆ ಒತ್ತು ಕೊಡುವೆ ಎಂದರು.

ಹಾಗೆಯೇ ತಮ್ಮೆಲ್ಲರ ಆಶೀರ್ವಾದ ದೊಂದಿಗೆ ಈ ಕ್ಷೇತ್ರದ ಶಾಸಕರಾಗಿ ಮಾಡಿರುವ ತಮ್ಮಗಳ ಅಭಿಮಾನ ಮತ್ತು ನಂಬಿಕೆ ನಮ್ಮ ಮೇಲೆ ಇರಲಿ. ಮುಂದಿನ ದಿನಗಳಲ್ಲಿ ಈ ಭಾಗದ ಜನಗಳು ಮುಂದಿನ ದಿನಗಲ್ಲಿ ಗುಳೇ ಹೋಗುವುದನ್ನು ತಪ್ಪಿಸುತ್ತೇನೆ ಎಂದು ಆಶ್ವಾಸನೆ ನೀಡಿದರು. ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ಗ್ರಾಮಸ್ಥರಿಂದ ಮನವಿಯನ್ನು ಶಾಸಕರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸೂಲದಹಳ್ಳಿ ಗ್ರಾ. ಪಂ. ಅಧ್ಯಕ್ಷರಾದ ರತ್ನಮ್ಮ ರಾಮಯ್ಯ ಅವರು, ಸದಸ್ಯರು, ಗುತ್ತಿಗೆದಾರರು ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ.