ನಾಗರಾಜ ಮುದಗಲ್ಲ ಆತ್ಮಹತ್ಯೆಗೆ ಬಲವಾದ ಕಾರಣವಿದ್ದು — ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ – ಮಾಜಿ ಶಾಸಕ ಒತ್ತಾಯ.

ಹುನಗುಂದ ಆಗಷ್ಟ.25

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾಗರಾಜ ಮುದಗಲ್ಲ ಅವರ ಸಾವಿನಲ್ಲಿ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದು.ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಸೂಕ್ತ ತನಿಖೆ ನಡೆಸಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.ಗುರುವಾರ ಪಟ್ಟಣದ ನಾಗರಾಳ ಜೀನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇಳಕಲ್ಲ ನಗರದಲ್ಲಿ ಅವರು ೧೪ ವರ್ಷ ಸೇವೆ ಸಲ್ಲಿಸುವ ಸಂದರ್ಭದಲ್ಲಿ ನನ್ನ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು.ಈ ದುರ್ಘಟನೆ ನಡೆಯಬಾರದಿತ್ತು ನಿನ್ನೆಯ ದಿನ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಹೋದ ಸಂದರ್ಭದಲ್ಲಿ ಕುಟುಂಬಸ್ಥರು ಒಬ್ಬ ಮಗನಿಗೆ ಎಂಬಿಬಿಎಸ್ ಸೀಟ್ ಸಿಕ್ಕಿದೆ.ಇನ್ನೊಬ್ಬ ಮಗಳಿಗೆ ಡಿಸೆಂಬರ್‌ನಲ್ಲಿ ಮದುವೆ ಪಿಕ್ಸ್ ಆಗಿತ್ತು ಸಧ್ಯ ನಮ್ಮ ಮನೆಯಲ್ಲಿ ಆನಂದಮಯ ವಾತಾವರಣವಿತ್ತು.ಯಾವದೇ ಕೌಟುಂಬಿಕ ಕಲಹಗಳು ಇರಲಿಲ್ಲ ಆದರೇ ಕೇವಲ ಕಾಲೇಜು ಕಿರಿಕಿರಿ ಅಂತಾ ಪದೇ ಪದೇ ಹೇಳುತ್ತಿದ್ದರು.ಅವರ ಆತ್ಮಹತ್ಯೆಯಲ್ಲಿ ನಮಗೆ ಸಂಶಯವಿದೆ ಅಂತ ಅವರ ಪತ್ನಿ ಮತ್ತು ಕುಟುಂಬಸ್ಥರು ಹೇಳುತ್ತಿದ್ದಾರೆ.ಒಬ್ಬ ದಕ್ಷ ಪ್ರಾಮಾಣಿಕ ಸೌಮ್ಯ ಸ್ವಭಾವದ ಪ್ರಾಂಶುಪಾಲ ನಾಗರಾಜ ಮುದಗಲ್ಲ ಅವರ ಆತ್ಮಹತ್ಯೆಯ ಹಿಂದೆ ಒಂದು ಬಲವಾದ ಕಾರಣವಿದ್ದು ಈ ಪ್ರಕರಣವನ್ನು ಸ್ಥಳೀಯ ಪೊಲೀಸ್ ಅಧಿಕಾರಿಗಳ ತನಿಖೆಯಿಂದ ನ್ಯಾಯ ಸಿಗೋದಿಲ್ಲ.ಅದಕ್ಕೆ ಉನ್ನತ ಮಟ್ಟದ ತನಿಖೆಯಾಗಬೇಕು.ಅದು ಸಿಬಿಐ ತನಿಖೆಯನ್ನು ನಡೆಸಿ ಅವರ ಆತ್ಮಹತ್ಯೆಗೆ ಕಾರಣವಾದ ಕಾಣದ ಕೈಗಳನ್ನು ಕಂಡು ಹಿಡಿದು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಮೂಲಕ ಆ ಕುಟುಂಬಕ್ಕೆ ನ್ಯಾಯ ಒದಗಿಸಬೇಕು.ಆತ್ಮಹತ್ಯೆಕ್ಕೆ ರಾಜಕೀಯ ಕಾರಣನಾ ಅಂತಾ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ರಾಜಕೀಯ ಕಾರಣ ಅಂತಾ ನಾನು ಹೇಳುತ್ತಿಲ್ಲ ಕುಟುಂಬಸ್ಥರ ಸಂಶಯಕ್ಕೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆನ್ನುವುದು ನನ್ನ ಒತ್ತಾಯ.ಈ ರೀತಿ ಘಟನೆಗಳು ನಡೆಯುತ್ತಿದ್ದರೇ ನಮ್ಮ ತಾಲೂಕಿಗೆ ಯಾವ ಅಧಿಕಾರಿಗಳು ಬರೋದಿಲ್ಲ.ಈ ಪ್ರಕರಣವನ್ನು ಮುಖ್ಯಮಂತ್ರಿಗಳು ಸಿಬಿಐ ಒಪ್ಪಿಸಿ ಪಾರದರ್ಶಕ ತನಿಖೆ ಮಾಡಿಸಿ ಮೃತ ಪ್ರಾಂಶುಪಾಲರ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮಹೇಶ ಬೆಳ್ಳಿಹಾಳ,ಸಂಗಣ್ಣ ಚಿನಿವಾಲರ,ರಾಮನಗೌಡ ಬೆಳ್ಳಿಹಾಳ,ಅಪ್ಪು ಆಲೂರ,ಬಸವರಾಜ ಹೊಸೂರ,ಮಲ್ಲಿಕಾರ್ಜುನ ಚೂರಿ,ಮುನ್ನಾ ಬಾಗವಾನ,ಮಹಾಂತೇಶ ಚಿತ್ತವಾಡಗಿ,ಸುಭಾಸ ಮುಕ್ಕಣ್ಣವರ,ಶೇಖರ ಬಡಿಗೇರ ಸೇರಿದಂತೆ ಅನೇಕರು ಇದ್ದರು. ಬಾಕ್ಸ್ ಸುದ್ದಿ-ಮುಂಗಾರು ಮಳೆಯು ಸಂಪೂರ್ಣ ಕೈಕೊಟ್ಟ ಹಿನ್ನೆಲೆಯಲ್ಲಿ ಹುನಗುಂದ ಮತ್ತು ಇಳಕಲ್ಲ ಅವಳಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಮತ್ತು ಮರೋಳ ೨ನೆಯ ಹಂತದ ಹನಿ ನೀರಾವರಿ ಯೋಜನೆಯು ಸಂಪೂರ್ಣ ಕಳಪೆಯಾಗಿ ರೈತರ ಭೂಮಿಗೆ ನೀರು ಬರುತ್ತಿಲ್ಲ.ಆ ಎಲ್ಲಾ ಜಮೀನಿಗೆ ನೀರು ಒದಗಿಸಿ ಇಲ್ಲವೇ ಯೋಜನೆ ಹಾಳಾಗಿದೆ ಎಂದು ಘೋಷಿಸಿ.ದೊಡ್ಡನಗೌಡ ಪಾಟೀಲ.ಮಾಜಿ ಶಾಸಕರು ಹುನಗುಂದ.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button