ತರೀಕೆರೆ ಅಗ್ನಿ ಶಾಮಕ ಸಿಬ್ಬಂದಿಯಿಂದ ಜಿಂಕೆ ರಕ್ಷಣೆ.
ತರೀಕೆರೆ ಜನೇವರಿ.6
ತಾಲೂಕು ಎಂಸಿ ಹಳ್ಳಿಯ ಭದ್ರಾ ಬಲ ದಂಡೆಯ ಸುಮಾರು 20 ಅಡಿ ಅಗಲ, ಆಳ ಇರುವ ಚಾನಲ್ ನಲ್ಲಿ ಆಕಸ್ಮಿಕವಾಗಿ ಬಿದ್ದು ಜೀವನ್ಮರಣದ ಹೋರಾಟದಲ್ಲಿದ್ದ ಜಿಂಕೆಯನ್ನು ತರೀಕೆರೆ ಅಗ್ನಿಶಾಮಕ ಠಾಣೆಯ ಜಲವಾಹನ ಕೆಎ 42 ಜೆ 561 ರಲ್ಲಿ, ಸಿಬ್ಬಂದಿಗಳಾದ ಸೋಮಶೇಖರ್, ಗಿರೀಶ್, ಅರುಣ್ ಕುಮಾರ್, ರಘುಕುಮಾರ್, ರವರು ಕಾರ್ಯಾಚರಣೆ ನಡೆಸಿ ಜಿಂಕೆಯನ್ನು ರಕ್ಷಣಾ ಉಪಕರಣಗಳಿಂದ ಜೀವಂತವಾಗಿ ಮೇಲಕ್ಕೆ ತಂದು ಸ್ಥಳದಲ್ಲಿ ಹಾಜರಿದ್ದ ಅರಣ್ಯ ಇಲಾಖೆಯವರಿಗೆ ಒಪ್ಪಿಸಿರುವುದಾಗಿ ಠಾಣಾಧಿಕಾರಿ ತಿಪ್ಪೇಸ್ವಾಮಿ ರವರು ಸುದ್ದಿಗಾರರಿಗೆ ತಿಳಿಸಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ